US - Iran War Alert: ಅಮೆರಿಕ - ಇರಾನ್‌ ಯುದ್ಧ ಸನ್ನಿಹಿತ: ಭಾರತಕ್ಕೆ "ಪೆಟ್ರೋಲಿಯಂ" ಆತಂಕ!

US and Iran War Imminent: ಅಮೆರಿಕ ಹಾಗೂ ಇರಾನ್‌ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು. ಯಾವುದೇ ಕ್ಷಣದಲ್ಲಾದರೂ ಈ ಭಾಗದಲ್ಲಿ ಏನು ಬೇಕಾದರೂ ಆಗಬಹುದು. ಇದರಿಂದ ಭಾರತಕ್ಕೆ ಆತಂಕ ಶುರುವಾಗಿದೆ. ಅಮೆರಿಕ ಹಾಗೂ ಇರಾನ್‌ನ ನಡುವೆ ಕಳೆದ ನಾಲ್ಕು ದಶಕಗಳಿಂದಲೂ ಸಂಘರ್ಷವಿದೆ. ಇದೀಗ ಹೌತಿ ಬಂಡುಕೋರರು ಹಾಗೂ ಇರಾನ್‌ ಸರ್ಕಾರದ ನಡುವೆ ಒಪ್ಪಂದವಾಗುತ್ತಿದ್ದಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಅಲರ್ಟ್‌ ಆಗಿದ್ದಾರೆ. ಇದೀಗ ಇರಾನ್‌ಗೆ ದೊಡ್ಡ ಎಚ್ಚರಿಕೆಯನ್ನು ನೀಡಲಾಗಿದೆ. ವಿಶ್ವದ ಪ್ರಮುಖ ವಾಣಿಜ್ಯ ಹಡಗುಗಳ ಸಂಚಾರ ಪ್ರದೇಶವಾಗಿರುವ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ ಜೋರಾಗಿದೆ. ಅಮೆರಿಕದ ಶೇ 75ರಷ್ಟು ಹಡಗುಗಳನ್ನು ಹೌತಿ ಬಂಡುಕೋರರು ಹಿಮ್ಮೆಟ್ಟಿಸಿದ್ದು ಅಮೆರಿಕ ಕಣ್ಣು ಕೆಂಪಗಾಗಿಸಿದೆ. ಇದರ ನೇರ ಪರಿಣಾಮ ಭಾರತದ ಮೇಲೂ ಆಗಲಿದೆ.

ಮಧ್ಯಪ್ರಾಚ್ಯ ಎನ್ನುವುದು ಬಿಕ್ಕಟ್ಟುಗಳ ರಾಜಧಾನಿ ಎನ್ನುವಂತೆ ಬದಲಾಗಿದೆ. ಇರಾನ್‌ - ಬಂಡುಕೋರರು ಹಾಗೂ ಪರಮಾಣು ಒಪ್ಪಂದ ವಿಚಾರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಚೆಗೆ ಇರಾನ್‌ನ ಹೌತಿ ಬಂಡುಕೋರರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಅಲ್ಲದೇ ಅಮೆರಿಕದ ಮಿಲಿಟರಿ ಪಡೆಗಳು ಹೌತಿ ಬಂಡುಕೋರರ ಮೇಲೆ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದ್ದವು. ಇಲ್ಲಿನ ಯೆಮೆನ್ ಭಾಗದಲ್ಲಿ ಹೌತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಸರಣಿ ವಾಯುದಾಳಿಯನ್ನು ಅಮೆರಿಕ ಮಾಡಿತ್ತು.

US and Iran War Imminent Petrol Diesel and Petroleum Concerns for India

ಇರಾನ್‌ ಪರಮಾಣುವಿಗೆ ಸಂಬಂಧಿಸಿದಂತೆ ಮುಂದಿನ ಎರಡು ತಿಂಗಳ ಅವಧಿಯ ಒಳಗಾಗಿ ಹೊಸ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕದ ಬೆದರಿಕೆಯ ತಂತ್ರವಾಗಿದೆ ಎಂದು ಇರಾನ್‌ ದೂರಿದೆ. ಇರಾನ್‌ ಹಾಗೂ ಅಮೆರಿಕದ ಕಿತ್ತಾಟ ಇದೀಗ ಭಾರತಕ್ಕೆ ಹೊಸ ತಲೆನೋವಾಗಿದೆ.

ಹೊಸ ಪರಮಾಣು ಒಪ್ಪಂದಕ್ಕೆ ಅಮೆರಿಕ ಮುಂದಾಗಿರುವುದರ ಹಿಂದೆ ನೇರ ಮಿಲಿಟರಿ ಕಾರ್ಯಾಚರಣೆಯನ್ನು ತಪ್ಪಿಸುವ ಉದ್ದೇಶವಿದೆ. ಮುಂದಿನ ಎರಡು ತಿಂಗಳ ಒಳಗಾಗಿ ಇರಾನ್‌ ಹೊಸ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳದೆ ಇದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ರಾಯಭಾರಿ ಹೇಳಿದೆ.

ಅಮೆರಿಕದಿಂದ ಬೆದರಿಸುವ ತಂತ್ರ: ಇನ್ನು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇರಾನ್‌ ಸೇರಿದಂತೆ ಈ ಭಾಗದಲ್ಲಿ ಬೆದರಿಕೆಯ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಇರಾನ್‌ನ ಸರ್ವೋರ್ಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಹೇಳಿದ್ದಾರೆ. ನಮ್ಮನ್ನು ಕೆಣಕಿದರೆ ಅಮೆರಿಕಗೆ ಹೇಗೆ ಪಾಠ ಕಲಿಸಬೇಕು ಎನ್ನುವುದು ಗೊತ್ತಿದೆ ಎಂದು ಅವರು ಸವಾಲು ಹಾಕಿದ್ದಾರೆ.

ಇರಾನ್‌ ಈಗ ಒಬ್ಬಂಟಿಯಾಗಿದೆ. ಮಧ್ಯಪ್ರಾಚ್ಯದಲ್ಲಿರುವ ಇತರ ರಾಷ್ಟ್ರಗಳು, ಬಂಡುಕೋರ ಪಡೆಗಳು ಸೋತು ಸುಣ್ಣಗಾಗಿವೆ ಎಂದು ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ನಮಗೆ ಮಧ್ಯಪ್ರಾಚ್ಯದಲ್ಲಿರುವ ಬೆಂಬಲಿಗ ಪಡೆಗಳ ಅಗ್ಯವಿಲ್ಲ ಅಂತ ಇರಾನ್‌ ಹೇಳಿದೆ. ಇರಾನ್‌ ದೇಶವು ಮೊದಲಿನಿಂದಲೂ ಇಸ್ರೇಲ್‌ ಹಾಗೂ ಅಮೆರಿಕ ದೇಶವನ್ನು ವಿರೋಧಿಸುವ ಗುಂಪುಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅದರಲ್ಲಿ ಹಮಾಸ್, ಲೆಬನಾನ್‌ ಹಿಬ್ಬುಲ್ಲಾ ಮತ್ತು ಇರಾಕ್‌ನಲ್ಲಿ ಶಸ್ತ್ರಾಸ್ತ್ರವನ್ನು ಹೊಂದಿರುವ ಪಡೆಗಳು ಸೇರಿವೆ ಇದರೊಂದಿಗೆ ಹೌತಿ ಬಂಡುಕೋರರು ಹೊಸದಾಗಿ ಇರಾನ್‌ ಒಪ್ಪಂದ ಮಾಡಿಕೊಂಡಿದೆ.

ಭಾರತಕ್ಕೆ ಕಾದಿದ್ಯಾ ಮತ್ತೊಂದು ದೊಡ್ಡ ಶಾಕ್‌

ಅಮೆರಿಕ ಹಾಗೂ ಇರಾನ್‌ ನಡುವೆ ಯುದ್ಧದ ಕಾರ್ಮೋಡಗಳು ಆವರಿಸಿರುವಾಗಲೇ ಭಾರತಕ್ಕೆ ಪೆಟ್ರೋಲಿಯಂ ಹಾಗೂ ತೈಲದ ಆತಂಕ ಎದುರಾಗಿದೆ. ಭಾರತ ತೈಲಕ್ಕಾಗಿ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಈಗಾಗಲೇ ವಿವಿಧ ಯುದ್ಧಗಳಿಂದ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಮತ್ತೊಂದು ಯುದ್ಧವೆಂದರೆ ವಿಶ್ವದಲ್ಲಿ ಮತ್ತೊಂದು ಹೊಸ ಸಂಕಷ್ಟ ಅಂತಲೇ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+