US And Iran: ಪರಮಾಣು ಮಾತುಕತೆಗೆ ಅಮೆರಿಕ ಮತ್ತು ಇರಾನ್ ಸಿದ್ಧ, ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಚರ್ಚೆ
ಅಮೆರಿಕ ಹಾಗೂ ಇರಾನ್ ನಡುವೆ ಭುಗಿಲೆದ್ದ ದ್ವೇಷದ ಬೆಂಕಿ ಕೊನೆಗೂ ತಣ್ಣಗಾಗುವ ಸಮಯ ಈಗ ಬಂದಿದೆ. ಪರಮಾಣು ವಿಚಾರವಾಗಿ ಅಮೆರಿಕ & ಇರಾನ್ ಮಧ್ಯೆ ದೊಡ್ಡ ಗಲಾಟೆಯೇ ಶುರುವಾಗುವ ಆತಂಕ ಮೂಡಿತ್ತು. ಈ ಪೈಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೇನೆಗೆ ಆದೇಶ ನೀಡಿ, ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆಗಳನ್ನು ಇರಾನ್ ಜಲಗಡಿ ಸಮೀಪಕ್ಕೆ ನುಗ್ಗಿಸಿದ್ದರು. ಹೀಗಿದ್ದಾಗ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಅಮೆರಿಕ ಯುದ್ಧ ನೌಕೆ ಜೊತೆಗೆ ಇನ್ನೊಂದು ಭಾರಿ ಗಾತ್ರದ ಯುದ್ಧ ನೌಕೆ ಕೂಡ ಇರಾನ್ ಕಡೆಗೆ ಹೊರಟು ನಿಂತಿತ್ತು. ಹೀಗೆ ಪರಿಸ್ಥಿತಿ ಕೈಮೀರುವ ಎಲ್ಲಾ ರೀತಿಯ ಆತಂಕ ಕಾಡುವಾಗಲೇ ದಿಢೀರ್ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಅಮೆರಿಕ ಹಾಗೂ ಇರಾನ್ ಮಹತ್ವದ ಚರ್ಚೆಗೆ ಒಪ್ಪಿಕೊಂಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ಇರಾನ್ ವಿರುದ್ಧ ಘೋರ ಕಾರ್ಯಾಚರಣೆಗೆ ಸಿದ್ಧ ಎಂಬ ಮುನ್ಸೂಚನೆ ಕೊಟ್ಟಿದ್ದರು. ಈ ಬೆಳವಣಿಗೆ ನಂತರ ತಕ್ಷಣ ಅಲರ್ಟ್ ಆಗಿದ್ದ ಇರಾನ್, ಕೂಡಲೇ ಶಾಂತಿ ಮಾತುಕತೆಗೆ ತಾನು ಸಿದ್ಧ ಎಂಬ ಸಂದೇಶ ರವಾನಿಸಿತ್ತು. ಆಗ ಒಮಾನ್ ನೇತೃತ್ವದಲ್ಲಿ 2ನೇ ಸುತ್ತಿನ ಮಾತುಕತೆಗೆ ಇರಾನ್ ಒಪ್ಪಿಕೊಂಡಿತ್ತು, ಇದೀಗ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಇರಾನ್ ಮತ್ತು ಅಮೆರಿಕದ ಅಧಿಕಾರಿಗಳು ಮಹತ್ವದ ಚರ್ಚೆ ಆರಂಭ ಮಾಡಲಿದ್ದಾರೆ. ಹೀಗಾಗಿ ಇಡೀ ಜಗತ್ತಿನ ಚಿತ್ತ ಸ್ವಿಝರ್ಲ್ಯಾಂಡ್‌ನ ಜಿನೆವಾ ಮೇಲೆ ನೆಟ್ಟಿದೆ. ಏಕೆಂದರೆ ಅಮೆರಿಕ ಮತ್ತು ಇರಾನ್ ನಡುವಿನ ಕಲಹ ಪರಮಾಣು ದಾಳಿ ಭೀತಿ ಹುಟ್ಟುಹಾಕಿತ್ತು, ಇದೇ ಕಾರಣಕ್ಕೆ ಈ ತಿಕ್ಕಾಟ ಇಡೀ ಜಗತ್ತಿನ ಗಮನ ಸೆಳೆದಿತ್ತು ಕೂಡ.

ಮಾತುಕತೆ ಸಕ್ಸಸ್ ಕಂಡರೆ ಮಾತ್ರ ನೆಮ್ಮದಿ
ಮಧ್ಯಪ್ರಾಚ್ಯ ಭಾಗದಲ್ಲಿ ಈಗಾಗಲೇ ನೆಮ್ಮದಿ ಹಾಳಾಗಿ ಹೋಗಿದ್ದು, ಯಾವಾಗ ಎಲ್ಲಿ ಯುದ್ಧ ದಿಢೀರ್ ಶುರುವಾಗುತ್ತೋ? ಎಂಬ ಆತಂಕ ಸದಾ ಕಾಡುತ್ತಾ ಇರುತ್ತದೆ. ಏಕೆಂದರೆ ಕಳೆದ ಕೆಲವು ತಿಂಗಳಲ್ಲೇ ಮಧ್ಯಪ್ರಾಚ್ಯ ಭಾಗದಲ್ಲಿ ಹಲವು ಯುದ್ಧ ನಡೆದು ಹೋಗಿದೆ. ಇಂತಿಪ್ಪ ಜಾಗದಲ್ಲೇ ಇರಾನ್ ಮತ್ತು ಅಮೆರಿಕ ನಡುವೆ ಕೂಡ ಯುದ್ಧ ಶುರುವಾದರೆ ಅದು ಭಯಾನಕ ವಾತಾವರಣ ಸೃಷ್ಟಿ ಮಾಡಲಿದೆ.
ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿ ಕೂಡಲೇ ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆಗೆ ಮುಂದಾಗಿವೆ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು. ಆದರೆ ಅಕಸ್ಮಾತ್ ಇಲ್ಲಿ ಶಾಂತಿ ಮೂಡದೆ ಅದು ಯುದ್ಧಕ್ಕೆ ತಿರುಗಿದರೆ ದೊಡ್ಡ ಮಟ್ಟದಲ್ಲಿ ಅಪಾಯ ಗ್ಯಾರಂಟಿ ಎನ್ನಲಾಗುತ್ತಿದೆ. ಇದೇ ಕಾರಣಗಳಿಗೆ ಇದೀಗ ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ಇರಾನ್ ಸಮುದ್ರ ಗಡಿಯಲ್ಲಿ ಅಮೆರಿಕ ಸೇನೆಗೆ ಸೇರಿದ ಬೃಹತ್ ಯುದ್ಧ ನೌಕೆಗಳು ಓಡಾಡುತ್ತಾ ಇದ್ದು, ಯಾವುದೇ ಕ್ಷಣ ಈ ನೌಕೆಗಳು ವಿನಾಶ ಸೃಷ್ಟಿಸುವಷ್ಟು ಶಕ್ತಿಶಾಲಿ ಆಗಿವೆ.
ರಷ್ಯಾ & ಚೀನಾ ಬೆಂಬಲವಿದೆ ಇರಾನ್‌ಗೆ
ಅಮೆರಿಕ ವಿರುದ್ಧ ಯುದ್ಧ ಶುರುವಾದರೆ ಆಗ ಇರಾನ್ ಒಂಟಿಯಾಗಿ ಇರಲ್ಲ, ರಷ್ಯಾ & ಚೀನಾ ಬೆಂಬಲ ಸಿಗಬಹುದು. ಇರಾನ್ ಬೆನ್ನಿಗೆ ರಷ್ಯಾ & ಚೀನಾ ನಾಯಕರು ನಿಂತ ನಂತರ ಪರಿಸ್ಥಿತಿ ಬದಲಾಗಿತ್ತು. ಈ ವಿಚಾರದಲ್ಲಿ ಅಮೆರಿಕ & ಇಸ್ರೇಲ್ ಒಟ್ಟಾಗಿ ನಿಂತು, ಇರಾನ್ ಮೇಲೆ ಬೃಹತ್ ಸೇನಾ ಕಾರ್ಯಾಚರಣೆಯ ನಡೆಸಲು ಚರ್ಚಿಸುತ್ತಿವೆ. ಆದರೆ ಇನ್ನೊಂದು ಕಡೆ ರಷ್ಯಾ ಹಾಗೂ ಚೀನಾ ದಿಢೀರ್ ಇರಾನ್‌ಗೆ ಬೆಂಬಲ ಘೋಷಿಸಿ, ಯುದ್ಧಕ್ಕೆ ಧುಮುಕಿದರೆ ಅದು ಯಾವುದೇ ಮುಲಾಜು ಇಲ್ಲದೆ ದೊಡ್ಡ ಯುದ್ಧವಾಗಲಿದೆ. ಹೀಗಾಗಿಯೇ ಯುದ್ಧಕ್ಕೆ ಬದಲಾಗಿ ಶಾಂತಿ ಮಂತ್ರ ಜಪಿಸಲಾಗುತ್ತಿದೆ.












Click it and Unblock the Notifications