ಸಿಖ್ಖರ ಬಹುಕಾಲದ ಧಾರ್ಮಿಕ ಬೇಡಿಕೆಗೆ ಅಮೆರಿಕದಿಂದ ಸಮ್ಮತಿ
ನ್ಯೂಯಾರ್ಕ್, ಅಕ್ಟೋಬರ್, 9: ತಮ್ಮ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗದಂತೆ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕೆಂಬ ಸಿಖ್ ಸಮುದಾಯದ ಬಹುಕಾಲದ ಬೇಡಿಕೆಯನ್ನು ಅಮೆರಿಕ ಸೇನೆ ಮಾನ್ಯ ಮಾಡಿದೆ. ಮುಖ್ಯವಾಗಿ ಸಿಖ್ ಸೈನಿಕರು ಉದ್ದ ಗಡ್ಡ ಬಿಡಬಾರದು ಮತ್ತು ಪೇಟಾ ಸುತ್ತಬಾರದು ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ.
ಸರ್ಕಾರದ ಈ ನಿಯಮಗಳು ತಮ್ಮ ಧರ್ಮಕ್ಕೆ ವಿರುದ್ಧವಾಗಿದ್ದು, ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತಹ ವಾತವರಣ ಕಲ್ಪಿಸಿಕೊಡಿ ಎಂಬ ಸಿಖ್ಖ್ ಸಮುದಾಯದ ಬೇಡಿಕೆಯನ್ನು ಅಮೆರಿಕಾ ಸೇನೆ ಮನ್ನಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿದೆ.[ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ]

"ಸೇನೆಯಲ್ಲಿರುವ ಎಲ್ಲ ಸಮುದಾಯದ ಭಾವನೆಗಳನ್ನು ನಾವು ಗೌರವಿಸುತ್ತದ್ದೇವೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿದ್ದೇವೆ. ಇದರಿಂದಾಗಿಯೇ ನಮ್ಮ ದೇಶ ಮತ್ತು ಸೇನೆ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಎಂಬ ಹೆಗ್ಗಳಿಕೆ ಪಡೆದುಕೊಂಡಿವೆ'' ಎಂದು ಅಮೆರಿಕಾ ಸಿಖ್ ಸಮುದಾಯದ ನಾಯಕ ಜಿಯೋ ಕ್ರೌವ್ಲಿ ಈ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಆದೇಶ ಶಾಶ್ವತವಲ್ಲ, ಸಂದರ್ಭನುಸಾರ ಅಗತ್ಯವಿದ್ದಲ್ಲಿ ಆದೇಶಗಳನ್ನು ಮಾರ್ಪಾಡುಮಾಡುವ ಸಾಧ್ಯತೆಗಳಿವೆ. ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸಹ ಇರುತ್ತದೆ ಎಂದು ಹೇಳಲಾಗಿದೆ.
ಸಿಖ್ ವ್ಯಕ್ತಿ ಮೇಲೆ ದಾಳಿ: ಕ್ಯಾಲಿಫೋರ್ನಿಯಾದಲ್ಲಿ ಸಿಖ್ಖ್ ಸಮುದಾಯಕ್ಕೆ ಸೇರಿದ ಐಟಿ ಉದ್ಯೋಗಿಯೊಬ್ಬರ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೇ ಅವರ ತಲೆಗೂದಲು ಕತ್ತರಿಸುವ ಮೂಲಕ ಧಾರ್ಮಿಕ ಭಾವನಗಳಿಗೆ ಧಕ್ಕೆ ಉಂಟುಮಾಡಿದ್ದಾರೆ.(ಪಿಟಿಐ)












Click it and Unblock the Notifications