ವೀಸಾ ಪಡೆಯಲು ಅಡ್ಡದಾರಿ: ಇನ್ಫಿ, ಟಿಸಿಎಸ್ ವಿರುದ್ಧ ಅಮೆರಿಕ ಕಿಡಿ
ಹೆಚ್ಚೆಚ್ಚು ವೀಸಾಗಳನ್ನು ಪಡೆಯಲು ಲಾಟರಿ ಪೂಲ್ ನಲ್ಲಿ ಹೆಚ್ಚೆಚ್ಚು ಟಿಕೆಟ್ ಗಳನ್ನು ಹಾಕುವ ಮೂಲಕ ಕಂಪನಿಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದ ವೈಟ್ ಹೌಸ್.
ಲಂಡನ್, ಏಪ್ರಿಲ್ 24: ಅಮೆರಿಕ ಸರ್ಕಾರ ವಾರ್ಷಿಕವಾಗಿ ನೀಡುವ ವೀಸಾ ಕೋಟದಲ್ಲಿ ಸಿಂಹಪಾಲು ಗಳಿಸುವ ನಿಟ್ಟಿನಲ್ಲಿ ಭಾರತೀಯ ಐಟಿ ಕಂಪನಿಗಳಾದ ಟಿಸಿಎಸ್ ಹಾಗೂ ಇನ್ಫೋಸಿಸ್ ಕಂಪನಿಗಳು ಹಾತೊರೆಯುವುದು ಅಮೆರಿಕ ಸರ್ಕಾರ ಕಟುವಾಗಿ ಟೀಕಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ನಂತರ, ಹೊರ ದೇಶಗಳಿಗೆ ನೀಡುವ ವೀಸಾ ನಿಯಮಗಳಲ್ಲಿ ಭಾರೀ ಕಡಿತವನ್ನುಂಟು ಮಾಡಿದ್ದಾರೆ. ಲಾಟರಿ ಎತ್ತುವ ಮೂಲಕ ವೀಸಾ ನೀಡುವಿಕೆ ಪದ್ಧತಿ ಇನ್ನೂ ಚಾಲ್ತಿಯಲ್ಲಿರುವುದರಿಂದ ಟಿಸಿಎಸ್, ಇನ್ಫೋಸಿಸ್ ಕಂಪನಿಗಳು ತಮ್ಮ ಕಡೆಯಿಂದ ಹೆಚ್ಚೆಚ್ಚು ಟಿಕೆಟ್ ಗಳನ್ನು ಲಾಟರಿ ಪೂಲ್ ನಲ್ಲಿ ಹಾಕುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಇದು, ಭಾರತೀಯ ಐಟಿ ಕಂಪನಿಗಳ 'ವೀಸಾ ಬಾಕತನ'ವನ್ನು ಎತ್ತಿ ತೋರಿಸಿದೆ ಎಂದು ವೈಟ್ ಹೌಸ್ ಪ್ರಕಟಣೆ ತಿಳಿಸಿದೆ.

ಲಾಟರಿ ಎತ್ತುವ ಕ್ರಮದಲ್ಲಿ ಕೆಲವು ಕಂಪನಿಗಳು ಹೀಗೆ, ಅಡ್ಡದಾರಿಗಳ ಮೂಲಕ ಹೆಚ್ಚು ವೀಸಾಗಳು ತಮಗೇ ಸಿಗುವಂತೆ ಮಾಡುವುದನ್ನು ತಡೆಯಲು ಟ್ರಂಪ್ ಸರ್ಕಾರ, ಶೀಘ್ರದಲ್ಲೇ ಈ ಲಾಟರಿ ಪದ್ಧತಿ ತೆಗೆದುಹಾಕಿ ಕಂಪನಿಗಳ ಮೆರಿಟ್ ಆಧಾರದ ಮೇರೆಗೆ ವೀಸಾ ನೀಡುವ ಹೊಸ ಪದ್ಧತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.












Click it and Unblock the Notifications