Donald Trump: ಚೀನಾ ಜೊತೆ ತಿಕ್ಕಾಟ ಬಿಟ್ಟು ಸ್ನೇಹಕ್ಕೆ ಮುಂದಾದ ಟ್ರಂಪ್ ಆಡಳಿತ?
ಚೀನಾ ಜಾಗತಿಕ ಉತ್ಪಾದನಾ ವಲಯದಲ್ಲಿ ಕಿಂಗ್ ಆಗಿದ್ದು, ಪ್ರಪಂಚದ ಪ್ರತಿ ಮೂಲೆಯಲ್ಲಿ ಕೂಡ ಚೀನಾ ತಯಾರಿಸುವ ವಸ್ತುಗಳು ಸಿಗುತ್ತವೆ. ಅದರಲ್ಲೂ ಅಮೆರಿಕದಲ್ಲಿ ಚೀನಾ ವಸ್ತು ಇಲ್ಲದೆ ಜೀವನವೇ ನಡೆಯುವುದಿಲ್ಲ ಎನ್ನಬಹುದು. ಇಷ್ಟೆಲ್ಲಾ ಅನಿವಾರ್ಯತೆ ಇದ್ದರು ಕೂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ತೆರಿಗೆ ತಿಕ್ಕಾಟ ಶುರು ಮಾಡಿ ಭಯ ಹುಟ್ಟಿಸಿದ್ದರು. ಇದರ ಜೊತೆಗೆ ಖುದ್ದು ಅಮೆರಿಕದ ನೆಲದಲ್ಲೇ ಅಲ್ಲೋಲ ಕಲ್ಲೋಲ ಕೂಡ ಸೃಷ್ಟಿ ಮಾಡಿದ್ದರು. ಆದರೆ ಇದೀಗ ಪರಿಸ್ಥಿತಿಯೇ ಬದಲಾಗಿ ಹೋಗಿದೆ!
ಅಮೆರಿಕದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆದ್ದು ಹಾಳಾಗಿ ಹೋಗಿದ್ದು, ಯಾವುದೇ ಸಮಯದಲ್ಲಿ ಅಮೆರಿಕದ ಅರ್ಥ ವ್ಯವಸ್ಥೆ ಕುಸಿದು ಬೀಳಬಹುದು ಎಂಬ ಆತಂಕ ಕಾಡುತ್ತಿದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಎದುರು ದೊಡ್ಡ ಸವಾಲುಗಳೇ ಇದ್ದು, ಈಗಿರುವ ಪರಿಸ್ಥಿತಿಯಲ್ಲಿ ಚೀನಾ ಜೊತೆಗೆ ತಿಕ್ಕಾಟ ನಡೆಸುವುದು ಕಷ್ಟ ಕಷ್ಟ. ಇಷ್ಟೆಲ್ಲದರ ನಡುವೆ ಕೂಡ ಟ್ರಂಪ್ ಬಡಿದಾಟ ಶುರು ಮಾಡಿದ್ದು, ಹೆಚ್ಚಿನ ತೆರಿಗೆ ಹಾಕಿ ಚೀನಾಗೆ ಶಾಕ್ ನೀಡಿದ್ದರು. ಇದೇ ಕಾರಣ ಚೀನಾ ಕೂಡ ಟ್ರಂಪ್ ವಿರುದ್ಧ ತಿರುಗಿಬಿದ್ದು ಭಾರಿ ತೆರಿಗೆ ಹಾಕಿತ್ತು. ಹೀಗೆ ಇಬ್ಬರೂ ಬಡಿದಾಡುತ್ತಿದ್ದ ಸಮಯದಲ್ಲಿ ಅಮೆರಿಕದ ಆರ್ಥಿಕತೆ ಒದ್ದಾಡಿ ಹೋಗಿತ್ತು. ಆದರೆ ಇದೀಗ ಅದಕ್ಕೆಲ್ಲಾ ಒಂದು ಉಪಾಯ ಹುಡುಕಲಾಗಿದೆ.

ಚೀನಾ ಜೊತೆ ಅಮೆರಿಕದ ಸ್ನೇಹ!
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾ ವಿಚಾರದಲ್ಲಿ ವರಸೆ ಬದಲಿಸಿದ್ದಾರೆ. ಚೀನಾ ಜೊತೆಗೆ ವಾರ್ ಮಾಡುವುದಕ್ಕಿಂತ ತೆರಿಗೆ ವಿಚಾರದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿ ಮುಂದೆ ಹೋಗಬೇಕು ಅನ್ನೋ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹೀಗಾಗಿಯೇ ಮಾತುಕತೆ ಮೂಲಕ ಚೀನಾ ಜೊತೆಗೆ ಇರುವ ಭಿನ್ನಾಭಿಪ್ರಾಯ ಸರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಯಾಕಂದ್ರೆ ಅಮೆರಿಕದ ಆರ್ಥಿಕ ಪರಿಸ್ಥಿತಿ ನೋಡಿದರೆ ಈ ಸಮಯದಲ್ಲಿ ಕಿತ್ತಾಡಿಕೊಂಡರೆ ಇಬ್ಬರಿಗೂ ಸಮಸ್ಯೆ ಅನ್ನೋದು ಗೊತ್ತಾಗಿದೆ. ಹೀಗಾಗಿಯೇ ಹೊಸ ಪ್ಲಾನ್ ಮಾಡುವುದು ಉತ್ತಮ ಅಂತಾ ಮುಂದೆ ನುಗ್ಗುತ್ತಿದ್ದಾರೆ ಟ್ರಂಪ್.












Click it and Unblock the Notifications