Donald Trump: ನೀನೊಬ್ಬ ಮೂರ್ಖ ಎಂದು ಉಕ್ರೇನ್ ಅಧ್ಯಕ್ಷನಿಗೆ ಬೈದ ಟ್ರಂಪ್, ತೀವ್ರ ಆಕ್ರೋಶ!
ಡೊನಾಲ್ಡ್ ಟ್ರಂಪ್ & ಉಕ್ರೇನ್‌ನ ಅಧ್ಯಕ್ಷನ ನಡುವೆ ನಿನ್ನೆ ಭಾರಿ ದೊಡ್ಡ ಗಲಾಟೆ ನಡೆದು ಹೋಗಿದೆ. ಇಬ್ಬರೂ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಡಿಸೈನ್ ಡಿಸೈನ್ ಕಮೆಂಟ್ಸ್ ಕೂಡ ಬರುತ್ತಿದೆ. ಇಂತಹ ವೇಳೆ, ಉಕ್ರೇನ್ ನೆಲದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ವಿರುದ್ಧ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ತಮ್ಮ ದೇಶದ ಅಧ್ಯಕ್ಷನ ಬೆಂಬಲಕ್ಕೆ ನಿಂತಿದ್ದಾರೆ ಉಕ್ರೇನ್ ಜನ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 3 ವರ್ಷ ಕಳೆದ ಬೆನ್ನಲ್ಲೇ ಅಮೆರಿಕದ ಜೊತೆಯಲ್ಲಿ ಮಹತ್ವದ ಮಾತುಕತೆಗೆ ಅಂತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ವೇತಭವನಕ್ಕೆ ತೆರಳಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನೆರವು ಸಿಗುವ ನಿರೀಕ್ಷೆಯಲ್ಲಿ ಇದ್ದ ವೊಲೊಡಿಮಿರ್ ಝೆಲೆನ್ಸ್ಕಿಗೆ ನಿನ್ನೆ ಆಘಾತ ಎದುರಾಗಿತ್ತು. ದಿಢೀರ್ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿ, ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಹೊರಗೆ ಕಳುಹಿಸಿದ್ದರು. ಈ ರೀತಿಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದ ನಂತರ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ ಬೆನ್ನಿಗೆ ನಿಂತ ಉಕ್ರೇನ್!
ಇನ್ನು ತಮ್ಮ ದೇಶದ ಅಧ್ಯಕ್ಷನಿಗೆ ಈ ರೀತಿ ಡೊನಾಲ್ಡ್ ಟ್ರಂಪ್ ಉಗಿದು, ಬೈದ ನಂತರದಲ್ಲಿ ಉಕ್ರೇನ್ ಪ್ರಜೆಗಳು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲೂ ಇಂತಹ ಸೂಕ್ಷ್ಮ ಸ್ಥಿತಿ ಎದುರಾಗಿರುವ ಸಮಯದಲ್ಲೇ ವೊಲೊಡಿಮಿರ್ ಝೆಲೆನ್ಸ್ಕಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷರ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ರಷ್ಯಾ ಮಾತ್ರ ಡೊನಾಲ್ಡ್ ಟ್ರಂಪ್ ಅವರು ಹೀಗೆ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬೈದು ಹೊರಗೆ ಕಳುಹಿಸಿದ ವಿಚಾರಕ್ಕೆ ಬೆಂಬಲ ನೀಡಿದೆ!
ಬೆಂಬಲ ವಾಪಸ್ ಪಡೆದ ಅಮೆರಿಕ?
2022ರ ಫೆಬ್ರವರಿ ತಿಂಗಳಲ್ಲಿ ಆರಂಭ ಆಗಿದ್ದ ರಷ್ಯಾ & ಉಕ್ರೇನ್ ಯುದ್ಧಕ್ಕೆ ಅಮೆರಿಕದಿಂದ ಬೆಂಬಲ ವ್ಯಕ್ತವಾಗಿತ್ತು. ಆಗ ಅಧಿಕಾರದಲ್ಲಿ ಇದ್ದ ಜೋ ಬೈಡನ್ ನೇರವಾಗಿ ಉಕ್ರೇನ್ ಬೆನ್ನಿಗೆ ನಿಂತು ಲಕ್ಷಾಂತರ ಕೋಟಿ ರೂಪಾಯಿ ಸಹಾಯ ಮಾಡಿದ್ದರು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದು, ಉಕ್ರೇನ್‌ಗೆ ನೀಡುತ್ತಿರುವ ಬೆಂಬಲ ವಪಾಸ್ ಪಡೆಯುತ್ತಾ ಅಮೆರಿಕ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications