Russia & Ukraine: ರಷ್ಯಾ ತೈಲ ಸಂಗ್ರಹದ ಮೇಲೆ ಉಕ್ರೇನ್ ಸೇನೆಯಿಂದ ಭೀಕರ ದಾಳಿ?
ರಷ್ಯಾ & ಉಕ್ರೇನ್ ತಮ್ಮ ತಮ್ಮ ನಾಶಕ್ಕೆ ತಾವೇ ಮುನ್ನುಡಿ ಬರೆದುಕೊಂಡ ರೀತಿ ಕಾಣ್ತಿದೆ. ಯಾಕಂದ್ರೆ ಒಂದು ಕಡೆ ರಷ್ಯಾ ಡ್ರೋನ್ & ಮಿಸೈಲ್ ಮೂಲಕ ಉಕ್ರೇನ್‌ಗೆ ಶಾಕ್ ನೀಡಿ, ತಣ್ಣಗೆ ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ ಇದೇ ಸಮಯದಲ್ಲಿ ಉಕ್ರೇನ್ ಸೇನೆ ತನ್ನ ಡ್ರೋನ್‌ಗಳ ಮೂಲಕ ರಷ್ಯಾ ವಶದಲ್ಲಿ ಇರುವ ಪ್ರದೇಶಗಳ ಮೇಲೆಯೇ ದಾಳಿ ನಡೆಸುತ್ತಿದೆ. ಅದರಲ್ಲೂ, ರಷ್ಯಾ ತೈಲ ಸಂಗ್ರಹದ ಮೇಲೆ ಉಕ್ರೇನ್ ಸೇನೆಯಿಂದ ಭೀಕರ ದಾಳಿ? ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಯುದ್ಧ.. ಯುದ್ಧ.. ಯುದ್ಧ.. ಇದು ಕಳೆದ 2 ವರ್ಷದಿಂದಲೂ ಉಕ್ರೇನ್ ಪರಿಸ್ಥಿತಿ ಆಗಿದೆ. ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪದ ಕಾರಣಕ್ಕೆ ಉಕ್ರೇನ್ & ರಷ್ಯಾ ನಡುವೆ ಯುದ್ಧ ಆರಂಭವಾಗಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24 ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು ಹೀಗೆ ಎರಡು ದೇಶಗಳ ಮಧ್ಯೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನರು ಕೂಡ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದರೂ ಯುದ್ಧಕ್ಕೆ ಬ್ರೇಕ್ ಹಾಕುವ ಪ್ರಯತ್ನಗಳು ನಡೆಯುತ್ತಿಲ್ಲ. ಇದೇ ಸಮಯದಲ್ಲಿ ಮತ್ತೊಂದು ಸ್ಫೋಟಕ ಆರೋಪ ಕೇಳಿಬಂದಿದೆ.

ಕ್ರಿಮಿಯಾ ಮೇಲೆ ಉಕ್ರೇನ್ ಡೆಡ್ಲಿ...
ರಷ್ಯಾ ಸೇನೆಯ ವಶದಲ್ಲಿ ಇರುವ ಕ್ರಿಮಿಯಾ ಮೇಲೆ ಇದೀಗ ಉಕ್ರೇನ್ ಸೇನೆ ಡ್ರೋನ್‌ಗಳನ್ನ ಬಳಕೆ ಮಾಡಿಕೊಂಡು ಭೀಕರ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಕ್ರಿಮಿಯಾದಲ್ಲಿ ಇರುವ ರಷ್ಯಾದ ತೈಲ ಸಂಗ್ರಹ ಉಗ್ರಾಣಗಳ ಮೇಲೆ ಉಕ್ರೇನ್ ಈ ರೀತಿಯಾಗಿ ದಾಳಿ ಮಾಡಿ ಕಿಚ್ಚು ಹೊತ್ತಿಸಿದೆ ಎಂದು ಆರೋಪ ಮಾಡಲಾಗಿದೆ. ಮತ್ತೊಂದು ಕಡೆ ರಷ್ಯಾ ಸೇನೆ ಕೂಡ ಇದಕ್ಕೆ ಉತ್ತರ ಕೊಡಲು ಸಿದ್ಧತೆ ಆರಂಭಿಸಿದೆ ಎನ್ನಲಾಗಿದ್ದು, ಉಕ್ರೇನ್ ಸೇನೆ ಎಲ್ಲೆಲ್ಲೂ ಈ ಸಮಯದಲ್ಲಿ ಅಲರ್ಟ್ ಘೋಷಿಸಿದೆ.












Click it and Unblock the Notifications