Russia & Ukraine: ರಷ್ಯಾ & ಉಕ್ರೇನ್ ಕಾದಾಟದಲ್ಲಿ ಉತ್ತರ ಕೊರಿಯಾ ಸೈನಿಕರು ಬಲಿ?
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉತ್ತರ ಕೊರಿಯಾ ಬಡವಾಯ್ತು... ಅರೆರೆ ರಷ್ಯಾ & ಉಕ್ರೇನ್ ನಡುವೆ ಬಡಿದಾಟ ಇದ್ದರೆ, ಉತ್ತರ ಕೊರಿಯಾಗೆ ಸಮಸ್ಯೆ ಏನು? ಅಂತಾ ಕೇಳ್ತಿದ್ದೀರ. ಅಸಲಿ ಮ್ಯಾಟರ್ ಇಲ್ಲೇ ಇರೋದು. ಅಷ್ಟಕ್ಕೂ, ರಷ್ಯಾ & ಉಕ್ರೇನ್ ಯುದ್ಧದಲ್ಲಿ ರಷ್ಯಾ ಬೆಂಬಲಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಸೈನಿಕರನ್ನು ಕಳುಹಿಸಿದ್ದ. ಆದ್ರೆ ಈಗ ಅದೇ ಸೈನಿಕರು ಒಬ್ಬೊಬ್ಬರಾಗಿ ಹೆಣವಾಗುತ್ತಿದ್ದಾರೆ!
ಇದು ಉತ್ತರ ಕೊರಿಯಾ ಸೈನಿಕರ ಹಣೆ ಬರಹವೋ ಅಥವಾ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದರ್ಪವೋ ಗೊತ್ತಿಲ್ಲ. ತನ್ನ ದೇಶದ ಪ್ರತಿಯೊಬ್ಬರ ಮೇಲೆ ಕೂಡ ಭಾರಿ ಹಿಡಿತ ಹೊಂದಿರುವ ಕಿಮ್ ಜಾಂಗ್ ಉನ್ ತನ್ನ ದಬ್ಬಾಳಿಕೆ ಮುಂದುವರಿಸಿದ್ದಾನೆ. ಅದೇ ರೀತಿ ಉತ್ತರ ಕೊರಿಯಾದ ಸೈನಿಕರ ಮೇಲೆ ಒತ್ತಡ ಹಾಕಿ ಉಕ್ರೇನ್ ವಿರುದ್ಧದ ಯುದ್ಧಕ್ಕೆ ನುಗ್ಗಿಸಿದ್ದ ಆರೋಪ ಕೂಡ ಕಿಮ್ ಜಾಂಗ್ ಉನ್ ವಿರುದ್ಧ ಇದೆ. ಹೀಗಿದ್ದಾಗಲೇ, ನೂರಾರು ಉ.ಕೊರಿಯಾ ಸೈನಿಕರನ್ನು ಉಕ್ರೇನ್ ಬಲಿ ಹಾಕಿದೆಯಂತೆ.

ಉತ್ತರ ಕೊರಿಯಾ ಸೈನಿಕರು ಫಿನಿಷ್?
ರಷ್ಯಾ ಮಿಲಿಟರಿ ಬಳಿ ಇರುವ ಅಸ್ತ್ರ ಒಂದೊಂದಲ್ಲ, ರಷ್ಯಾ ತನ್ನಲ್ಲಿರುವ ಭಯಾನಕ ವೆಪನ್ಸ್ ಹೊರ ತೆಗೆದರೆ ಆಗುವುದೇ ಬೇರೆ. ಯಾಕಂದ್ರೆ ರಷ್ಯಾ ಬಳಿ ಆ ರೀತಿಯ ಅಸ್ತ್ರಗಳು ಕೊಳೆಯುತ್ತಿವೆ ಎಂಬ ಮಾತು ಇದೆ. ಹೀಗಿದ್ದರೂ, ಇಷ್ಟು ದಿನಗಳ ಕಾಲ ಸಾಮಾನ್ಯ ಅಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿತ್ತು ರಷ್ಯಾ ಸೇನೆ. ಆದರೆ ಇದೀಗ ತನ್ನ ಬಳಿ ಇರುವ ವಿನಾಶಕಾರಿ ಅಸ್ತ್ರ ಬಳಸಲು ರಷ್ಯಾ ಮುಂದಾಗಿದೆ. ಹೀಗೆ ಅಸ್ತ್ರಗಳು ಇದ್ದರೂ ಕೆಲವು ಪ್ರದೇಶಗಳಲ್ಲಿ ಖುದ್ದಾಗಿ ಸೈನಿಕರು ಅಂದ್ರೆ ಭೂಸೇನೆ ನುಗ್ಗಿ ಯುದ್ಧ ಮಾಡಬೇಕು. ಅದೇ ಜಾಗದಲ್ಲಿ ಈಗ ಎಡವಟ್ಟು ಆಗ್ತಿದೆ.
ಈ ಸಮಯದಲ್ಲೆ ರಷ್ಯಾ ಭೂಸೇನೆಗೆ ಸೇರಿದ ಲಕ್ಷ ಲಕ್ಷ ಯೋಧರು ಜೀವ ಬಿಟ್ಟಿದ್ದು, ಇಷ್ಟೆಲ್ಲದರ ನಡುವೆ ಉತ್ತರ ಕೊರಿಯಾ ಕಳುಹಿಸಿದ್ದ ಸೈನಿಕರನ್ನು ಈಗ ಉಕ್ರೇನ್ ಜೀವ ತೆಗೆದಿದೆಯಂತೆ. ಈ ವಿಚಾರ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿ ಮಾಡಿದ್ದು, ರಷ್ಯಾ ಸೇನೆಯಲ್ಲಿ ಇರುವ ಉತ್ತರ ಕೊರಿಯಾದ ಇತರ ಸೈನಿಕರಲ್ಲಿ ಭಯ ಶುರುವಾಗಿದೆ!












Click it and Unblock the Notifications