ರಷ್ಯಾ ಜೊತೆ ಉಕ್ರೇನ್ ಕದನ ವಿರಾಮಕ್ಕೆ ಆಗ್ರಹ, ಭಾರತದ ಬಳಿ ಅಂಗಲಾಚಿದ ಉಕ್ರೇನ್!
ಉಕ್ರೇನ್ & ರಷ್ಯಾ ಯುದ್ಧ ಮುಗಿಸುವ ಸಮೀಪಕ್ಕೆ ಬಂದಿದ್ದಾರೆ. ಇಬ್ಬರ ನಡುವೆ ಯುದ್ಧವನ್ನ ನಿಲ್ಲಿಸಬೇಕು ಎಂದು ಅಮೆರಿಕ ಭಾರಿ ದೊಡ್ಡ ಆಫರ್ ಕೊಟ್ಟಿದೆ. ಅದರಲ್ಲೂ ಈಗ 28 ಅಂಶಗಳ ಯೋಜನೆಗೆ ಒಪ್ಪಿಕೊಂಡು ರಷ್ಯಾ ಜೊತೆಗೆ ಶಾಂತಿಯಿಂದ ಬಾಳಬೇಕು ಎಂಬ ಒತ್ತಡ ಉಕ್ರೇನ್‌ನ ಮೇಲೆ ಹೇರಲಾಗುತ್ತಿದೆ. ಹೀಗಿದ್ದಾಗ ಉಕ್ರೇನ್ ಕೂಡ ಭಾರಿ ದೊಡ್ಡ ಗೊಂದಲದಲ್ಲಿ ಮುಳುಗಿ, ಮುಂದೆ ಏನು ಮಾಡುವುದು? ಅನ್ನೋ ಚಿಂತೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಉಕ್ರೇನ್ ವಿದೇಶಾಂಗ ಇಲಾಖೆ ಅಧಿಕಾರಿಗಳು ಭಾರತಕ್ಕೆ ಕರೆಮಾಡಿ ಸಲಹೆ & ಸೂಚನೆ ನೀಡಿ ಅಂತಾ ಈಗ ಅಂಗಲಾಚಿದ್ದಾರೆ.
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕು, ಎಂಬ ಆಗ್ರಹವನ್ನು ಭಾರತ ಈ ಮೊದಲನಿಂದ ಕೂಡ ಮಾಡಿಕೊಂಡು ಬರುತ್ತಿದೆ. ಈ ಯುದ್ಧ ನಿಂತರೆ ಜಗತ್ತಿನಲ್ಲಿ ಮತ್ತೆ ಶಾಂತಿ ನೆಲೆಸಲಿದೆ ಎಂಬುದು ಕೂಡ ಭಾರತದ ಒಳ್ಳೆಯ ಉದ್ದೇಶ ಆಗಿತ್ತು. ಆದರೆ ಉಕ್ರೇನ್ ಮಾತ್ರ ಪದೇ ಪದೇ ಕಿರಿಕ್ ಮಾಡಿ ಭಾರತದ ವಿರುದ್ಧ ಕೂಡ ಹಲವು ಆರೋಪ ಮಾಡಿತ್ತು. ಆಗ ಭಾರತ ಕೂಡ ಸರಿಯಾಗಿ ತಿರುಗೇಟು ನೀಡಿ, ಉಕ್ರೇನ್‌ಗೆ ಬುದ್ಧಿ ಕಲಿಸಿತ್ತು. ಇದೀಗ ಕಾಲ ಬದಲಾಗಿದ್ದು, ಸ್ವತಃ ಉಕ್ರೇನ್ ದಿಢೀರ್ ಅಂತಾ ಭಾರತದ ಬಳಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ.

ಯುದ್ಧ ನಿಂತರೆ ಶಾಂತಿ ಗ್ಯಾರಂಟಿ?
ಹೌದು, ಯುರೋಪ್ ಮಾತ್ರವಲ್ಲ ಇಡೀ ಜಗತ್ತೇ ಇದೀಗ ರಷ್ಯಾ & ಉಕ್ರೇನ್ ಯುದ್ಧದ ಆರ್ಭಟ ಕಂಡು ಹೆದರಿದೆ. ಇನ್ನೊಂದು ಕಡೆ ಯಾವಾಗ ರಷ್ಯಾ ದೇಶ ಪರಮಾಣು ಬಾಂಬ್ ಪರೀಕ್ಷೆಯನ್ನ ಮತ್ತೆ ಆರಂಭ ಮಾಡಿತ್ತೋ ಅಲ್ಲಿಂದ ಇನ್ನಷ್ಟು ಭಯ ಶುರುವಾಗಿತ್ತು. ಎಲ್ಲವನ್ನೂ ಈಗ ಅರ್ಥ ಮಾಡಿಕೊಂಡು ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ಈ ವಿಚಾರದಲ್ಲಿ ಉಕ್ರೇನ್ ಮಾತ್ರ ಇನ್ನೂ ಗೊಂದಲದಲ್ಲೇ ಮುಳುಗಿದೆ. ಆದಷ್ಟು ಬೇಗ ಯುದ್ಧಕ್ಕೆ ಬ್ರೇಕ್ ಹಾಕಿ ಎಂದು ಟ್ರಂಪ್ ಹೇಳುತ್ತಿದ್ದು, ರಷ್ಯಾ ಶಾಂತಿ ಮಾತುಕತೆಗೆ ಸಿದ್ಧ ಎಂದಿದೆ. ಇದೇ ಸಮಯದಲ್ಲಿ ಭಾರತಕ್ಕೆ ಕರೆ ಮಾಡಿ ಸಲಹೆ & ಸೂಚನೆಗಳನ್ನು ಕೇಳಿದೆ ಉಕ್ರೇನ್. ಯುದ್ಧವನ್ನ ನಿಲ್ಲಿಸಿದರೆ ತನ್ನ ಭೂಭಾಗ ಕಳೆದುಕೊಳ್ಳುವ ಆತಂಕವನ್ನು ಕೂಡ ಉಕ್ರೇನ್ ಎದುರಿಸುತ್ತಿದೆ.
ರಷ್ಯಾ ಕಡೆಯಿಂದ ಮುಂದುವರಿದ ದಾಳಿ
ಒಟ್ನಲ್ಲಿ 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಒಂದು ಹಂತಕ್ಕೆ ಬಂದು ತಲುಪಿದೆ. ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲುವ ಮುನ್ಸೂಚನೆ ಕಂಡು ಬರುತ್ತಿದ್ದು, ಈಗ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಇಟ್ಟಿರುವ ಶರತ್ತುಗಳಿಗೆ ಒಪ್ಪಿಕೊಳ್ಳುವ ಬಗ್ಗೆ ಎಲ್ಲಾ ಚರ್ಚೆ ಸಾಗಿದೆ. ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕ ತೀವ್ರ ರಾಜತಾಂತ್ರಿಕ ಒತ್ತಡ ಹಾಕುತ್ತಿದ್ದು, ಇನ್ನೊಂದು ಕಡೆ ರಷ್ಯಾ ಕೂಡ ತನ್ನ ದಾಳಿಯನ್ನ ಮುಂದುವರಿಸುತ್ತಿದೆ.












Click it and Unblock the Notifications