ರಷ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಉಕ್ರೇನ್ ಸಜ್ಜು!
ಕೀವ್, ಉಕ್ರೇನ್: ರಷ್ಯಾ ವಿರುದ್ಧ ಉಕ್ರೇನ್ ಸೇನೆ ರೊಚ್ಚಿಗೆದ್ದಿದ್ದು, ನಿನ್ನೆ ಡಿನಿಪ್ರೊ ನಗರದ ಮೇಲೆ ಭೀಕರ ದಾಳಿ ನಡೆಸಿದ್ದ ರಷ್ಯಾ ಸೇನೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗೆ ಉಕ್ರೇನ್ ಸೇಡಿನ ಮಾತು ಹೇಳುತ್ತಿದ್ದಂತೆ ರಷ್ಯಾ & ಉಕ್ರೇನ್ ಗಡಿಯಲ್ಲಿ ಮತ್ತೆ ಪರಿಸ್ಥಿತಿ ಸೂಕ್ಷ್ಮವಾಗಿದೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿ ತಿಳಿಯೋಣ ಬನ್ನಿ.
ರಷ್ಯಾ ಸೇನೆ ಉಕ್ರೇನ್ ವಿರುದ್ಧ ತೀವ್ರ ದಾಳಿ ಮುಂದುವರಿಸಿದೆ. ನಿನ್ನೆ ರಷ್ಯಾ ಸೇನೆ ಹಾರಿಸಿದ ಕ್ಷಿಪಣಿ ಒಂದು ನೇರವಾಗಿ ಡಿನಿಪ್ರೊ ನಗರದ ಆಸ್ಪತ್ರೆ ಮೇಲೆ ಬಿದ್ದಿದೆ (Russia Ukraine War). ಚಿಕಿತ್ಸೆ ಪಡೆಯಲು ಬಂದಿದ್ದವರ ಮೇಲೆ ಕ್ಷಿಪಣಿ ದಾಳಿಯಾಗಿದ್ದು, ಕನಿಷ್ಠ ಇಬ್ಬರು ಮೃತಪಟ್ಟು 30 ಜನ ಸಾವು & ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉಕ್ರೇನ್ ಸೇನೆ ಕೂಡ ರೊಚ್ಚಿಗೆದ್ದು ಮರುದಾಳಿ ನಡೆಸಲು ನಮ್ಮ ಬಳಿ ಸೇನೆ ಸಿದ್ಧವಾಗಿದೆ ಎಂದಿದೆ.

ರಷ್ಯಾ & ಉಕ್ರೇನ್ ಯುದ್ಧ 456ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟುದಿನ ಪರೋಕ್ಷವಾಗಿ ಉಕ್ರೇನ್ ಪರ ನಿಂತಿದ್ದ ಅಮೆರಿಕ ನೇರವಾಗಿಯೂ ಸಹಾಯ ಮಾಡುತ್ತಿದೆ. ಉಕ್ರೇನ್‌ಗೆ ಭಾರಿ ಪ್ರಮಾಣದ ಅಸ್ತ್ರ ಪೂರೈಕೆ ಮಾಡಿದ ಆರೋಪ ಕೂಡ ಅಮೆರಿಕ ವಿರುದ್ಧ ಇದೆ. ಈ ಹೊತ್ತಲ್ಲಿ ರಷ್ಯಾ ಪಡೆಗಳು ಕೂಡ ಉಕ್ರೇನ್ ವಿರುದ್ಧ ತಮ್ಮ ದಾಳಿ ತೀವ್ರಗೊಳಿಸಿ ಸೇಡು ತೀರಿಸಿಕೊಳ್ಳುತ್ತಿವೆ. ಮತ್ತೊಂದ್ಕಡೆ ಉಕ್ರೇನ್ ಜನರು ಪರಿತಪಿಸುತ್ತಿದ್ದಾರೆ, ಅಮೆರಿಕ ನೀಡಿದ ವೆಪನ್ಸ್ ಹಿಡಿದು ಸೇಡು ತೀರಿಸಿಕೊಳ್ಳಲು ಉಕ್ರೇನ್ ಸಜ್ಜಾಗಿ ನಿಂತಿದೆ (Russia Ukraine War).
ಹತ್ತಾರು ವರ್ಷ ಮುಂದುವರಿಯುತ್ತಾ ಯುದ್ಧ?
ಡಿಮಿಟ್ರಿ ಮೆಡ್ವೆಡೆವ್, ಈ ಹೆಸರನ್ನ ಬಹುಪಾಲು ಜನರು ಕೇಳೇ ಇರುತ್ತಾರೆ. ಏಕೆಂದರೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಪ್ತ ಡಿಮಿಟ್ರಿ ಮೆಡ್ವೆಡೆವ್. ರಷ್ಯಾ ಮಾಜಿ ಅಧ್ಯಕ್ಷ ಈ ಡಿಮಿಟ್ರಿ ಮೆಡ್ವೆಡೆವ್. ಈಗ ಪುಟಿನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು, ಯುದ್ಧ ತಂತ್ರ ಹೆಣೆಯುತ್ತಿದ್ದಾರೆ. ಪುಟಿನ್ ಕಟ್ಟಿರುವ ಭದ್ರತಾ ಮಂಡಳಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್. ಇಂತಹ ವ್ಯಕ್ತಿ ಹೇಳಿಕೆಯೊಂದನ್ನ ನೀಡಿದ್ದು ರಷ್ಯಾ & ಉಕ್ರೇನ್ ಯುದ್ಧವು ಹತ್ತಾರು ವರ್ಷ ಮುಂದುವರಿಯುತ್ತೆ ಎಂದಿದ್ದಾರೆ ಅಂತಾ ರಷ್ಯಾದ ಮಾಧ್ಯಮ ಸ್ಫೋಟಕ ವರದಿ ನೀಡಿದೆ.

500 ದಿನ ಪೂರೈಸುವತ್ತಾ ಮುಂದುವರಿದಿದೆ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗಲೇ ಜಗತ್ತು ಡಿಸೈಡ್ ಆಗಿತ್ತು. ಈ ಯುದ್ಧ ಒಂದೆರಡು ವಾರದಲ್ಲಿ ಮುಗಿದು ಹೋಗುತ್ತೆ, ರಷ್ಯಾ ಎದುರು ಉಕ್ರೇನ್ ಬೇಗ ಸೋತು ಹೋಗುತ್ತದೆ ಅಂತಾ. ಆದ್ರೆ ಈಗ ಏನಾಗಿದೆ ಹೇಳಿ? ಇನ್ನೇನು ಒಂದೂವರೆ ತಿಂಗಳು ಕಳೆದರೆ ರಷ್ಯಾ & ಉಕ್ರೇನ್ ಯುದ್ಧ 500 ದಿನ ಪೂರೈಸುತ್ತದೆ.
ದೀರ್ಘಕಾಲದ ಯುದ್ಧಕ್ಕೆ ರಷ್ಯಾ ಸಜ್ಜು!
ಹೌದು, ಉಕ್ರೇನ್ ಯುದ್ಧ ಶುರುವಾದ ಸಂದರ್ಭದಲ್ಲೇ ರಷ್ಯಾ ಒಂದು ದೀರ್ಘಕಾಲದ ಯುದ್ಧಕ್ಕೆ ಸಜ್ಜಾಗಿಯೇ ಬಂದಂತೆ ಕಾಣುತ್ತಿದೆ. ರಷ್ಯಾದ ಯುದ್ಧ ತಂತ್ರ & ಉಕ್ರೇನ್ ವಿರುದ್ಧ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಸಾಕು ಅನುಮಾನ ಬಾರದೆ ಇರದು. ಏಕೆಂದರೆ ಈ ಜಗತ್ತಿನಲ್ಲೇ 2ನೇ ಬಲಿಷ್ಠ ಸೇನೆಯನ್ನು ಹೊಂದಿರುವ ರಷ್ಯಾ ಪಡೆಗೆ ಉಕ್ರೇನ್ ಯಾವ ಲೆಕ್ಕ? ಆದರೂ ಯುದ್ಧ ಮುಂದುವರಿಯುತ್ತಿದೆ ಏಕೆ? ಯಾವ ಕಾರಣಕ್ಕೆ? ಎಂಬ ಪ್ರಶ್ನೆ ಮೂಡಿರುವಾಗಲೇ ಶಾಕಿಂಗ್ ನ್ಯೂಸ್ ಸಿಕ್ಕಿದೆ.

ಯುದ್ಧದ ಮೂಲಕ ಉಕ್ರೇನ್ ಸ್ನೇಹಿತರಿಗೆ ಪೆಟ್ಟು?
ಅಂದಹಾಗೆ ಇಂತಹದ್ದೊಂದು ಮಾತನ್ನ ಕೂಡ ತಳ್ಳಿಹಾಕುವಂತೆ ಇಲ್ಲ. ಹೇಗೆಂದರೆ ಉಕ್ರೇನ್ ಪರ ನಿಂತಿರುವ ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಪಾಠ ಕಲಿಸುವ ಉದ್ದೇಶ ಕೂಡ ಪುಟಿನ್ ತಲೆಯಲ್ಲಿ ಇರಬಹುದು. ಈ ಉದ್ದೇಶದ ಜೊತೆಗೆ ಯುರೋಪ್‌ನ ನ್ಯಾಟೋ ರಾಷ್ಟ್ರಗಳಿಗೆ ರಷ್ಯಾ ತಾಕತ್ ತೋರಿಸುವ ಪ್ರಯತ್ನ ಕೂಡ ಇಲ್ಲಿ ಅಡಗಿರಬಹುದು ಎಂಬ ಮಾತು ಕೇಳಿಬರುತ್ತಿದೆ.












Click it and Unblock the Notifications