Russia: ರಷ್ಯಾ ಸೈನಿಕರ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಉಕ್ರೇನ್!
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದ ನಂತರ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಸುಮಾರು ಎರಡು ಮುಕ್ಕಾಲು ವರ್ಷಗಳಿಂದ ಉಕ್ರೇನ್ & ರಷ್ಯಾ ಯುದ್ಧದ ಕೆನ್ನಾಲಿಗೆಯಲ್ಲಿ ಬೇಯುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಸುಮಾರು 6 ಲಕ್ಷ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನ ಕಳೆದುಕೊಂಡಿದೆ ಅಂತಾ ಇದೀಗ ಉಕ್ರೇನ್ ಆರೋಪ ಮಾಡಿದೆ. ಅಲ್ಲದೆ ಯುದ್ಧದ ಬಗ್ಗೆ ಇನ್ನೂ ಅನೇಕ ಸ್ಫೋಟಕ ಆರೋಪ ಮಾಡಿದೆ ಉಕ್ರೇನ್!
2022ರ ಫೆಬ್ರವರಿ ತಿಂಗಳ ಆರಂಭದಲ್ಲಿ ರಷ್ಯಾ & ಉಕ್ರೇನ್ ನಡುವೆ ದೊಡ್ಡ ಮಟ್ಟದ ಕಿರಿಕ್ ಶುರುವಾಗಿತ್ತು. ಆದರೆ ಈ ಕಿರಿಕ್ ಆದಷ್ಟು ಬೇಗ ತಣ್ಣಾಗಾಗುತ್ತೆ ಎಂಬ ನಿರೀಕ್ಷೆ ಇತ್ತು. ಈ ಪರಿಸ್ಥಿತಿಯಲ್ಲೇ ಇಬ್ಬರ ನಡುವೆ ಬಡಿದಾಟ ಜೋರಾಗಿಬಿಟ್ಟಿತ್ತು. ನೋಡ ನೋಡುತ್ತಲೇ ಆ ಕಡೆಯಿಂದ ರಷ್ಯಾ ಯುದ್ಧ ಘೋಷಣೆ ಮಾಡಿಬಿಟ್ಟಿತ್ತು. 2022ರ ಫೆಬ್ರವರಿ ತಿಂಗಳ ಕೊನೆಯಲ್ಲಿ ರಷ್ಯಾ & ಉಕ್ರೇನ್ ವಾರ್ ಶುರುವಾಗಿತ್ತು. ಹೀಗೆ ಯುದ್ಧ ಶುರುವಾದ ನಂತರ ರಷ್ಯಾ ಸೇನೆ ಏನೆಲ್ಲಾ ಕಳೆದುಕೊಂಡಿದೆ ಗೊತ್ತೆ? ಉಕ್ರೇನ್ ಇದೀಗ ನೀಡಿರುವ ಭಯಾನಕ ಲೆಕ್ಕದ ಕುರಿತು ಮಾಹಿತಿ ತಿಳಿಯಲು ಮುಂದೆ ಓದಿ.

8,869 ಯುದ್ಧ ಟ್ಯಾಂಕರ್‌ಗಳು...
ರಷ್ಯಾ 6 ಲಕ್ಷ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಳ್ಳುವ ಜೊತೆಗೆ ಈಗ 8,869 ಯುದ್ಧ ಟ್ಯಾಂಕರ್‌ಗಳು, ಹಾಗೇ 17,476 ಯುದ್ಧ ವಾಹನಗಳು, 25,495 ವಾಹನ ಸೇರಿದಂತೆ ಯುದ್ಧಕ್ಕೆ ತೈಲ ಸರಬರಾಜು ಮಾಡುವ ವಾಹನಗಳನ್ನ ಕೂಡ ರಷ್ಯಾ ಕಳೆದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ರಷ್ಯಾ ಇದುವರೆಗೂ ಸುಮಾರು 18,795 ಫಿರಂಗಿ, ಹಾಗೂ 1,204 ಅತ್ಯಾಧುನಿಕ ಕ್ಷಿಪಣಿ ಉಡಾವಣಾ ಯಂತ್ರಗಳನ್ನ ಕೂಡ ಕಳೆದುಕೊಂಡಿದೆ ಎಂದು ಉಕ್ರೇನ್ ಆರೋಪಿಸಿದೆ. ಇದರ ಜೊತೆಗೆ 369 ಯುದ್ಧ ವಿಮಾನ & 328 ಹೆಲಿಕಾಪ್ಟರ್ ಕೂಡ ರಷ್ಯಾ ಸೇನೆ ಕೈಬಿಟ್ಟು ಹೋಗಿದ್ದು, 16,186 ಡ್ರೋನ್‌ಗಳನ್ನು ಕೂಡ ರಷ್ಯಾ ಸೇನೆ ಕಳೆದುಕೊಂಡಿದೆ ಎಂದು ಉಕ್ರೇನ್ ಇದೀಗ ಲೆಕ್ಕ ಕೊಟ್ಟಿದೆ.
ಭೀಕರ ಯುದ್ಧಕ್ಕೆ ಹಾಕಬೇಕಿದೆ ಬ್ರೇಕ್!
ರಷ್ಯಾ & ಉಕ್ರೇನ್ ಯುದ್ಧಕ್ಕೆ ಆದಷ್ಟು ಬೇಗ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಈಗ ಇದೆ. ಒಂದು ಕಡೆ ಉಕ್ರೇನ್ ಹೀಗೆ ರಷ್ಯಾ ಮೇಲೆ ದಾಳಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದರೆ ರಷ್ಯಾ ಸೇನೆ ಕೂಡ ಉಕ್ರೇನ್ ವಿರುದ್ಧ ಘೋರ ದಾಳಿ ನಡೆಸುತ್ತಿದೆ. ಇದರ ಪರಿಣಾಮ, ಇಬ್ಬರ ಈ ಜಗಳ ಲಕ್ಷಾಂತರ ಅಮಾಯಕರ ಜೀವ ತೆಗೆದಿದೆ ಎಂಬ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಹಾಗೇ ಲೆಕ್ಕವಿಲ್ಲದಷ್ಟು ಜನ ಬೀದಿಗೆ ಬಿದ್ದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2022ರ ಫೆಬ್ರವರಿಯಲ್ಲಿ ಆರಂಭವಾಗಿರುವ ಯುದ್ಧ ಇನ್ನೇನು ಕೆಲವೇ ದಿನದಲ್ಲಿ 3 ವರ್ಷ ಪೂರೈಸಲಿದೆ.
ಇಂತಹ ಸಮಯದಲ್ಲೇ ಇಬ್ಬರ ಮಧ್ಯೆ ಸಂಧಾನವನ್ನು ನಡೆಸುವ ಪ್ರಯತ್ನ ಫಲ ನೀಡುತ್ತಿಲ್ಲ, ಹೀಗಾಗಿ ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿಂತು ಉಕ್ರೇನ್ ಅಧ್ಯಕ್ಷ ಇಡೀ ಜಗತ್ತಿನ ಎದುರು ಯುದ್ಧ ನಿಲ್ಲಿಸುವಂತೆ ಅಂಗಲಾಚಿದ್ದರು. ಹೀಗಿದ್ದರೂ ಉಕ್ರೇನ್ ಸಂಪೂರ್ಣ ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ ಎಂಬ ಆರೋಪವನ್ನ ರಷ್ಯಾ ಮಾಡುತ್ತಿದೆ. ಇದೇ ಕಾರಣಕ್ಕೆ ಈಗ ರಷ್ಯಾ & ಉಕ್ರೇನ್ ನಡುವೆ ಸಂಧಾನ ಕೂಡ ಯಶಸ್ವಿ ಆಗುತ್ತಿಲ್ಲ ಎಂಬ ಆರೋಪವಿದೆ.












Click it and Unblock the Notifications