ಉಕ್ರೇನ್ ರಾಜಧಾನಿಯಲ್ಲಿ ರಷ್ಯಾ ಸೇನೆಗೆ ‘ದೀಪಾವಳಿ’ ಹಬ್ಬ!

ಉಕ್ರೇನ್: ರಷ್ಯಾ ಸೇನೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ವಿರುದ್ಧ ಮುಗಿಬಿದ್ದಿದ್ದು, ಮನಸ್ಸಿಗೆ ಬಂದಂತೆ ತನ್ನ ಕ್ಷಿಪಣಿ ಹಾರಿಸಿದೆ. ಪರಿಣಾಮ ಉಕ್ರೇನ್ ನಗರಗಳಲ್ಲಿ 'ದೀಪಾವಳಿ' ಶುರುವಾದಂತೆ ಕಾಣುತ್ತಿದ್ದು ಎಲ್ಲೆಂದ್ರಲ್ಲಿ ಕ್ಷಿಪಣಿಗಳು ಸ್ಫೋಟಗೊಳ್ಳುತ್ತಿವೆ. ಆದರೆ ಪುಟಿನ್ ಸೇನೆಗೆ ತಿರುಗೇಟು ನೀಡೋಕೆ ಉಕ್ರೇನ್ ಕೂಡ ಮರುದಾಳಿ ಆರಂಭ ಮಾಡಿದ್ದು, ಉಕ್ರೇನ್ ರಾಜಧಾನಿ ನರಕವಾಗಿ ಬದಲಾಗಿದೆ.

ಪುಟಿನ್ ಇದೀಗ ಉಕ್ರೇನ್ ಕಥೆ ಮುಗಿಸಲು, ಉಕ್ರೇನ್ ಯುದ್ಧಕ್ಕೆ (Russia Ukraine War) ಕೊನೆಯ ಮೊಳೆ ಹೊಡೆಯಲು ಸಜ್ಜಾದಂತೆ ಕಾಣ್ತಿದೆ. ಪರಿಣಾಮ ರಷ್ಯಾ ಸೇನೆ ಭೀಕರ ದಾಳಿ ಶುರು ಮಾಡಿದ್ದು, ಒಂದೇ ಬಾರಿ 18 ಕ್ಷಿಪಣಿಗಳು ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಾರಿವೆ. ಉತ್ತರ, ದಕ್ಷಿಣ ಮತ್ತು ಪೂರ್ವದಿಂದ ಕೀವ್‌ನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಹೀಗೆ ಒಂದೇ ಬಾರಿಗೆ ನಸುಕಿನಲ್ಲಿ ಕ್ಷಿಪಣಿಗಳು ರಷ್ಯಾ ಕಡೆಯಿಂದ ನುಗ್ಗಿದ್ದು ನೋಡಿ ಉಕ್ರೇನ್ ಬೆಚ್ಚಿಬಿದ್ದಿತ್ತು. ಆಗ ನಡೆದಿದ್ದೇ ದೊಡ್ಡ ಹೈಡ್ರಾಮಾ!

russia ukraine war

ಒಂದೇ ಏಟಿಗೆ 18 ಕ್ಷಿಪಣಿ ಉಡೀಸ್!

ಹೌದು, ರಷ್ಯಾ ವಿರುದ್ಧ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನೆಲಕಚ್ಚಿದೆ. ಇಂತಹ ಹೊತ್ತಲ್ಲೇ ನ್ಯಾಟೋ & ಅಮೆರಿಕ ಸಿಕ್ಕಾಪಟ್ಟೆ ಸಹಾಯ ಮಾಡಿ, ಉಕ್ರೇನ್‌ಗೆ ಬೆನ್ನೆಲುಬಾಗಿವೆ. ಹೀಗಾಗಿ ಹೊಸ ಎನರ್ಜಿ ಜೊತೆಗೆ ರಣತಂತ್ರ ರೂಪಿಸಿ ರಷ್ಯಾ ವಿರುದ್ಧ ಭೀಕರ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾ ಸೇನೆ ಹಾರಿಸಿದ್ದ 18 ಕ್ಷಿಪಣಿಗಳನ್ನ ತನ್ನ ಕ್ಷಿಪಣಿ ನಿರೋಧಕದ ಸಹಾಯದಿಂದ ಹೊಡೆದು ಉರುಳಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಾರಿಬಂದ 18 ಕ್ಷಿಪಣಿಗಳನ್ನ ಧೂಳ್ ಧೂಳ್ ಮಾಡಿದೆ ಉಕ್ರೇನ್ ಸೇನೆ.

4 ವಿಮಾನದ ಬಳಿಕ 18 ಮಿಸೈಲ್ ಉಡೀಸ್

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelenskyy) ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೆಂಡವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಷ್ಯಾಗೆ ಸೇರಿದ 4 ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿತ್ತು ಉಕ್ರೇನ್. ಇದಾದ ಬಳಿಕ ಸದ್ಯ ಬರೋಬ್ಬರಿ 18 ರಷ್ಯಾದ ಮಿಸೈಲ್‌ಗಳನ್ನು ಉಕ್ರೇನ್ ಉಡೀಸ್ ಮಾಡಿದೆ. ಈ ಮೂಲಕ ಮೊದಲೇ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿ ಇನ್ನಷ್ಟು ಕಗ್ಗಂಟಾಗಿದೆ. ಯುದ್ಧ ಇಂದು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಎನ್ನುವಾಗಲೇ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದೆ ಉಕ್ರೇನ್ ಮತ್ತು ರಷ್ಯಾ ಸೇನೆ.

russia ukraine war

ಅಮೆರಿಕದ ಕುತಂತ್ರ ಇದೆಯಾ?

ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಇರಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ರು ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ.

ಉಕ್ರೇನ್ ಅಧ್ಯಕ್ಷನಿಗೆ ಮುಹೂರ್ತ?

ಹೌದು, ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬ ಆರೋಪದ ನಡುವೆ, ರಷ್ಯಾ ಪಡೆಗಳು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮೂಲಕ ಝೆಲೆನ್‌ಸ್ಕಿಯನ್ನ ಟಾರ್ಗೆಟ್ ಮಾಡಲು ಮುಂದಾಗಿವೆ ಎಂದು ಆರೋಪಿಸಲಾಗಿದೆ.

russia ukraine war

ನೇರವಾಗಿ ಉಕ್ರೇನ್ ಬೆನ್ನಿಗೆ ಅಮೆರಿಕ!

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆಯ ಕೃತ್ಯಗಳಿಗೆ ಕಾರಣ ಎಂಬ ಆರೋಪ ಇದೆ. ಇಷ್ಟುದಿನ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ ಈ ರಾಷ್ಟ್ರಗಳು, ನೇರವಾಗಿ ಉಕ್ರೇನ್ ನೆರವಿಗೆ ನಿಂತಿವೆ. ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ಸದ್ಯ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ನೆರವು ನೀಡುತ್ತಿವೆ. ಈ ಮೂಲಕ ರಷ್ಯಾ ಮುಗಿಸಲು ಪ್ರಯತ್ನಿಸುತ್ತಿವೆ, ಆದರೆ ಅದು ಕನಸಿನ ಮಾತು ಇದರಿಂದ ಅಮೆರಿಕ & ಪಟಾಲಂ ತೊಂದರೆ ಅನುಭವಿಸುತ್ತೆ ಎಂಬ ಮಾತು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+