ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕ್ರಮಕೈಗೊಳ್ಳಿ: ಉಕ್ರೇನ್ ಅಧ್ಯಕ್ಷ!

ದಿ ಹೇಗ್‌: ಸುಮ್ಮನೆ ಇರಲಾರದೆ ಏನೋ ಮಾಡಿದಂತಾಗಿದೆ ಉಕ್ರೇನ್ ಸ್ಥಿತಿ. ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ಡೆಡ್ಲಿ ದಾಳಿ ನಡೆದು ಒಂದೆರಡು ದಿನ ಕಳೆಯುವ ಒಳಗೆ, ಪಾಶ್ಚಿಮಾತ್ಯ ರಾಷ್ಟ್ರಗಳ ಬಳಿ ತೆರಳಿ ಪುಟಿನ್ ವಿರುದ್ಧ ಕಂಪ್ಲೇಂಟ್ ಹೇಳಿದ್ದಾರೆ ಉಕ್ರೇನ್ ಅಧ್ಯಕ್ಷ! ಹಾಗಾದರೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ರಷ್ಯಾ ಅಧ್ಯಕ್ಷರ ವಿರುದ್ಧ ನೀಡಿದ ದೂರು ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಉಕ್ರೇನ್ ಮೇಲೆ ರಷ್ಯಾ ಸೇನೆ, ರಷ್ಯಾ ಮೇಲೆ ಉಕ್ರೇನ್ ಸೇನೆ ಪರಸ್ಪರ ದಾಳಿ ನಡೆಸುತ್ತಾ ವಿನಾಶಕ್ಕೆ ಮುನ್ನುಡಿ ಬರೆಯುತ್ತಿವೆ. ಈ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳು ಸದ್ದೇ ಇಲ್ಲದೆ ಯುದ್ಧಕ್ಕೆ ಬೆಂಬಲ ನೀಡುತ್ತಾ, ಉಕ್ರೇನ್‌ಗೆ ಬಲ ತುಂಬುತ್ತಿವೆ ಎಂಬ ಆರೋಪ ಇದೆ. ಇಷ್ಟೆಲ್ಲಾ ಆರೋಪ, ಪ್ರತ್ಯಾರೋಪದ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ದಿಢೀರ್ ಅಂತಾ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಭೇಟಿ ನೀಡಿದ್ದಾರೆ. ಇಷ್ಟೇ ಆಗಿದ್ರೆ ಸರಿ, ಅಲ್ಲಿ ಕೂಡ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾರೆ!

Ukraine’s President demands for Tribunal to prosecute Russian president Putin

ಝಲೆನ್‌ಸ್ಕಿ ಮನವಿಯಲ್ಲಿ ಏನಿದೆ?

ಹೌದು, ಉಕ್ರೇನ್‌ ಮೇಲಿನ ಆಕ್ರಮಣಕ್ಕೆ ಮತ್ತು ಯುದ್ಧ ಅಪರಾಧಗಳಿಗೆ ರಷ್ಯಾವನ್ನು ಹೊಣೆಯಾಗಿಸಲು ವಿಶೇಷ ನ್ಯಾಯಮಂಡಳಿ ರಚಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು ಮೊದಲೇ ಹದಗೆಟ್ಟಿದ್ದ ರಷ್ಯಾ & ಉಕ್ರೇನ್ ಪರಿಸ್ಥಿತಿಯನ್ನ ಇನಷ್ಟು ಕೆಡಿಸಿ ಹಾಕಿದೆ. ಯುದ್ಧಾಪರಾಧದ ಆರೋಪಗಳ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್ ವಾರಂಟ್‌ ಹೊರಡಿಸಿರುವ ಐಸಿಸಿಗೆ ಉಕ್ರೇನ್ ಅಧ್ಯಕ್ಷ ಭೇಟಿ ನೀಡಿ ಈ ರೀತಿ ಒತ್ತಾಯ ಮಾಡಿರುವುದು ಕುತೂಹಲ ಕೆರಳಿಸಿದೆ.

ರಷ್ಯಾ ಅಧ್ಯಕ್ಷ ಪುಟಿನ್ ಅರೆಸ್ಟ್ ಆಗ್ತಾರಾ?

ಯುದ್ಧಾಪರಾಧದ ಆರೋಪಗಳ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್ ವಾರಂಟ್‌ ಹೊರಡಿಸಿದ ಬೆನ್ನಲ್ಲೇ ವ್ಲಾಡಿಮಿರ್‌ ಪುಟಿನ್‌ ಬಂಧನವಾಗುತ್ತಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಅದು ಸಾಧ್ಯವಿಲ್ಲ, ಏಕೆಂದರೆ ಪುಟಿನ್‌ ವಿರುದ್ಧ ಐಸಿಸಿ ವಿಚಾರಣೆ ನಡೆಸುವ ಸಾಧ್ಯತೆ ತುಂಬಾ ಕಮ್ಮಿ. ಪೊಲೀಸ್‌ ಬಲವನ್ನೇ ಹೊಂದಿರದ ಐಸಿಸಿ ಪುಟಿನ್ ಬಂಧಿಸಲು ಆಗಲ್ಲ. ಆದರೆ ಈ ಆದೇಶದ ಮೂಲಕ ರಷ್ಯಾ ಅಧ್ಯಕ್ಷರ ಹೆಸರಿಗೆ ಹಿನ್ನಡೆ ತರಬಹುದು ಅಷ್ಟೇ. ಇದೀಗ ಉಕ್ರೇನ್ ಅಧ್ಯಕ್ಷ ಬೇರೆ ರೀತಿ ಆಟ ಶುರು ಮಾಡಿರುವುದು ರಷ್ಯಾ ರೊಚ್ಚಿಗೇಳುವಂತೆ ಮಾಡಿದೆ.

Ukraine’s President demands for Tribunal to prosecute Russian president Putin

ಐಸಿಸಿ ವಿರುದ್ಧ ತಿರುಗಿಬಿದ್ದಿದ್ದ ರಷ್ಯಾ!

ಈಗಾಗಲೇ ಮಾಸ್ಕೋ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ತೀರ್ಪಿನ ವಿರುದ್ಧ ತಿರುಗಿಬಿದ್ದಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ದಿಢೀರ್ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಆದರೂ ಉಕ್ರೇನ್ ಅಧ್ಯಕ್ಷನ ಆರೋಪ ಗಟ್ಟಿಯಾಗಿ ನಿಲ್ಲುವುದು ಅನುಮಾನ. 'ರಷ್ಯಾ ಆಕ್ರಮಿತ ಉಕ್ರೇನ್‌ ಪ್ರದೇಶದಿಂದ ಮಕ್ಕಳ ಗಡೀಪಾರು, ಕಾನೂನುಬಾಹಿರವಾಗಿ ರಷ್ಯಾ ಒಕ್ಕೂಟಕ್ಕೆ ಮಕ್ಕಳನ್ನು ವರ್ಗಾಯಿಸಿರುವ ಯುದ್ಧಾಪರಾಧಕ್ಕೆ ಪುಟಿನ್ ಮತ್ತು ಅವರ ಅಧಿಕಾರಿಗಳು ಹೊಣೆ' ಎಂದು ಐಸಿಸಿ ಕಳೆದ ತಿಂಗಳು ಆದೇಶ ಪ್ರಕಟಿಸಿತ್ತು.

ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?

ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಈ ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾದ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬುದನ್ನ ಈಗ ಪರೋಕ್ಷವಾಗಿ ತಿಳಿಸಿದೆ ರಷ್ಯಾ ಸೇನೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ರಷ್ಯಾ ವಿರುದ್ಧ ದೂರು ಹೇಳಲು ಉಕ್ರೇನ್ ಅಧ್ಯಕ್ಷರು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+