ಉಕ್ರೇನ್‌ ದಾಳಿ: ರಷ್ಯಾದ ಬೆಕ್ಕುಗಳ ಮೇಲೂ ನಿರ್ಬಂಧ ಹೇರಿಕೆ!

ಮಾಸ್ಕೋ, ಮಾರ್ಚ್ 03: ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಘೋಷಣೆ ಮಾಡಿ ದಾಳಿಯನ್ನು ಮಾಡಲು ಆರಂಭ ಮಾಡಿದ ಬೆನ್ನಲ್ಲೇ ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದೆ. ಅಮೆರಿಕ, ಕೆನಡಾ ಸೇರಿದಂತೆ ಹಲವಾರು ರಾಷ್ಟ್ರಗಳು ಆರ್ಥಿಕ ನಿರ್ಬಂಧವನ್ನು ವಿಧಿಸಿದೆ. ಈ ನಡುವೆ ರಷ್ಯಾದ ಬೆಕ್ಕುಗಳ ಮೇಲೆಯೂ ನಿರ್ಬಂಧವನ್ನು ವಿಧಿಸಲಾಗಿದೆ.

ಉಕ್ರೇನ್‌ನಲ್ಲಿ ಮಾಸ್ಕೋದ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ (FIFe) ಎಂಬ ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಂಘಟನೆಯು ರಷ್ಯಾದಲ್ಲಿ ಸಾಕಣೆ ಮಾಡುವ ಬೆಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಎನ್‌ಜಿಒ FIFe ಎಕ್ಸಿಕ್ಯೂಟಿವ್ ಬೋರ್ಡ್, "ರಷ್ಯಾದ ಒಕ್ಕೂಟದ ಸೈನ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿ ಯುದ್ಧವನ್ನು ಪ್ರಾರಂಭಿಸಿದೆ. ಇದು ಆಘಾತ ಮತ್ತು ಗಾಬರಿಯಾದ ವಿಚಾರವಾಗಿದೆ," ಎಂದು ಹೇಳಿದೆ. ಹಾಗೆಯೇ ಈ ನಿಟ್ಟಿನಲ್ಲಿ ರಷ್ಯಾದ ಬೆಕ್ಕುಗಳ ಮೇಲೆಯೂ ನಿರ್ಬಂಧವನ್ನು ಹೇರಲಾಗುತ್ತದೆ ಎಂದು ತಿಳಿಸಿದೆ.

Ukraine-Russia War: Restrictions Imposed on Russian Cats

FIFe ಎಕ್ಸಿಕ್ಯೂಟಿವ್ ಬೋರ್ಡ್ ಹೇಳಿಕೆಯಲ್ಲಿ ಏನೇನಿದೆ?

"ಅನೇಕ ಮುಗ್ಧ ಜನರು ಸತ್ತರು, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಲಕ್ಷಾಂತರ ಉಕ್ರೇನಿಯನ್ನರು ತಮ್ಮ ಜೀವಗಳನ್ನು ಉಳಿಸಲು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾದ ಸ್ಥಿತಿ ಉಂಟಾಯಿತು. ರಷ್ಯಾದ ಈ ಆಕ್ರಮಣದಿಂದಾಗಿ ವಿನಾಶ ಮತ್ತು ಅವ್ಯವಸ್ಥೆಯನ್ನು ನಾವೆಲ್ಲರೂ ಕಾಣಬಹುದಾಗಿದೆ," ಎಂದು ಕೂಡಾ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.

"ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮೌನವಾಗಿದ್ದು, ಏನನೂ ಮಾಡದೆ ಇರಲು ನಾವು ಬಯಸುವುದಿಲ್ಲ," ಎಂದು ಹೇಳಿರುವ ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಂಘಟನೆ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್, "ಈ ನಿಟ್ಟಿನಲ್ಲಿ ನಾವು ಕೂಡಾ ಕ್ರಮವನ್ನು ಕೈಗೊಂಡಿದ್ದೇವೆ. ಮಾರ್ಚ್ 1ರಿಂದ ರಷ್ಯಾದಿಂದ ಯಾವುದೇ ಬೆಕ್ಕನ್ನು ಆಮದು ಮಾಡಿಕೊಳ್ಳಬಾರದು ಮತ್ತು ರಷ್ಯಾದ ಹೊರಗಿನ ಯಾವುದೇ FIFe ಬೆಕ್ಕುಗಳ ವಂಶಾವಳಿಯ ಪುಸ್ತಕದಲ್ಲಿ ನೋಂದಾಯಿಸಬಾರದು ಎಂದು ನಾವು ನಿರ್ಧಾರ ಮಾಡಿದ್ದೇವೆ," ಎಂದು ಹೇಳಿದೆ.

"ರಷ್ಯಾದಲ್ಲಿ ವಾಸಿಸುವ ಪ್ರದರ್ಶಕರಿಗೆ ಸೇರಿದ ಯಾವುದೇ ಬೆಕ್ಕನ್ನು ರಷ್ಯಾದ ಹೊರಗಿನ ಯಾವುದೇ FIFe ಪ್ರದರ್ಶನದಲ್ಲಿ ನಮೂದಿಸಲಾಗುವುದಿಲ್ಲ. ಪ್ರದರ್ಶಕರು ತಮ್ಮ ಸದಸ್ಯತ್ವವನ್ನು ಹೊಂದಿದ್ದರೂ ಕೂಡಾ ನಾವು ಯಾವುದೇ FIFe ಪ್ರದರ್ಶನದಲ್ಲಿ ನಮೂದಿಸಲ್ಲ," ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಉಕ್ರೇನ್‌ನ ಬೆಕ್ಕು ಅಭಿಮಾನಿಗಳಿಗೆ ಬೆಂಬಲ

ಸದ್ಯ ಅಂತಾರಾಷ್ಟ್ರೀಯ ಬೆಕ್ಕು ಅಭಿಮಾನಿಗಳ ಸಂಘಟನೆ ಫೆಡರೇಶನ್ ಇಂಟರ್ನ್ಯಾಷನಲ್ ಫೆಲೈನ್ ಈ ನಿರ್ಬಂಧವನ್ನು ಮೇ 31ರವರೆಗೆ ಹೇರಿಕೆ ಮಾಡಿದೆ. ಹಾಗೆಯೇ ಅಗತ್ಯವಿದ್ದಾಗ ಈ ನಿರ್ಬಂಧವನ್ನು ಪರಿಷ್ಕರಣೆ ಅಥವಾ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದೆ. ಇನ್ನು ಪ್ರಸ್ತುತ ಈ ಯುದ್ಧ ಕಾರಣದಿಂದಾಗಿ ಉಕ್ರೇನ್‌ನಲ್ಲಿ ಪರಿಸ್ಥಿತಿಯು ಶೋಚನೀಯವಾಗಿದೆ. ಈ ಹಿನ್ನೆಲೆಯಿಂದಾಗಿ ಉಕ್ರೇನ್‌ನಲ್ಲಿ ಬೆಕ್ಕು ಸಾಕುವವರಿಗೆ ಬೆಂಬಲ ನೀಡಲು FIFe ಮುಂದಾಗಿದೆ. ಉಕ್ರೇನ್‌ನಲ್ಲಿ ಬೆಕ್ಕು ಸಾಕುವವರಿಗೆ ಬೆಂಬಲ ನೀಡಲು ತನ್ನ ಬಜೆಟ್‌ನ ಒಂದು ಭಾಗವನ್ನು ವಿನಿಯೋಗಿಸಲು FIFe ಮಂಡಳಿಯು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಯುಕೆ, ಯುಎಸ್, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವಾರು ದೇಶಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿವೆ ಮತ್ತು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಈ ದೇಶಗಳು ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ನೆರವಿನೊಂದಿಗೆ ಸಹಾಯ ಮಾಡಲು ಉಕ್ರೇನ್‌ಗೆ ಭರವಸೆ ನೀಡಿವೆ. ಗಮನಾರ್ಹವಾಗಿ, ಯುಎಸ್, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ಪ್ರಮುಖ ಬ್ಯಾಂಕ್‌ಗಳ ಮೇಲೆ ನಿರ್ಬಂಧವನ್ನು ಹೇರಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+