ಉಕ್ರೇನ್ ಪರಮಾಣು ಸ್ಥಾವರದಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕದಳ: ಸ್ಪೋಟದ ಭಯ ದೂರ
ಕೀವ್, ಮಾರ್ಚ್ 04: ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ (Zaporizhzhia) ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಉಕ್ರೇನಿಯನ್ ತುರ್ತು ಸೇವೆಗಳು ಶುಕ್ರವಾರ ತಿಳಿಸಿದೆ. ರಷ್ಯಾ ಶೆಲ್ ದಾಳಿಯಿಂದಾಗಿ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಉಕ್ರೇನ್‌ನ ತುರ್ತು ಸೇವೆಗಳು ರಷ್ಯಾದ ಮಿಲಿಟರಿ ಅಂತಿಮವಾಗಿ ರಕ್ಷಕರಿಗೆ ಪರಮಾಣು ವಿದ್ಯುತ್ ಸ್ಥಾವರ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ನಂತರ ಬೆಂಕಿಯನ್ನು ನಂದಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "06:20 (04:20 GMT) ಕ್ಕೆ ಎನರ್‌ಗೋಡರ್‌ನಲ್ಲಿರುವ ಝಪೊರಿಝಿಯಾ ಎನ್‌ಪಿಪಿಯ ತರಬೇತಿ ಕಟ್ಟಡದಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ," ಎಂದು ಕೂಡಾ ತುರ್ತು ಸೇವೆಗಳು ಫೇಸ್‌ಬುಕ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿವೆ.
ಸದ್ಯ ರಷ್ಯಾ ಪರಮಾಣು ಸ್ಥಾವರದ ಮೇಲಿನ ದಾಳಿಯನ್ನು ನಿಲ್ಲಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅಗ್ನಿಶಾಮಕದಳವು ಆಗಮಿಸಿ ಬೆಂಕಿಯನ್ನು ನಂದಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಸ್ಪೋಟದ ಭಯ ಕೂಡಾ ದೂರವಾಗಿದೆ.
Recommended Video

ಆಗ್ನೇಯದಲ್ಲಿರುವ ಕೈಗಾರಿಕಾ ನಗರವಾದ ಝಪೋರಿಝಿಯಾದಲ್ಲಿನ ಈ ಪರಮಾಣು ಸ್ಥಾವರವು ದೇಶದ ಪರಮಾಣು ಶಕ್ತಿಯ ಅಂದಾಜು 40 ಪ್ರತಿಶತವನ್ನು ಪೂರೈಸುತ್ತದೆ. ಝೆಲೆನ್ಸ್ಕಿ ಪ್ರಕಾರ, ಉಕ್ರೇನ್‌ನ 15 ರಿಯಾಕ್ಟರ್‌ಗಳಲ್ಲಿ ಆರು ರಿಯಾಕ್ಟರ್‌ಗಳನ್ನು ಹೊಂದಿದೆ. ಇನ್ನು ರಷ್ಯಾದ ಸೇನೆಯು ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರ ಝಪೊರಿಝಿಯಾವನ್ನು ವಶಕ್ಕೆ ಪಡೆದಿದೆ ಎಂದು ಕೂಡಾ ವರದಿಯಾಗಿದೆ.
ರಷ್ಯಾದ ವಿರುದ್ಧ ಉಕ್ರೇನ್ ಅಧ್ಯಕ್ಷ ವಾಗ್ದಾಳಿ
ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ನಡೆಸಿ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾವು ಪರಮಾಣು ಭಯೋತ್ಪಾದನೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಸ್ಕೋ ಶುಕ್ರವಾರ "ಪರಮಾಣು ಭಯೋತ್ಪಾದನೆ" ಯನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದರು. ರಷ್ಯಾದ ಪಡೆಗಳು ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದ ನಂತರ ಚೆರ್ನೋಬಿಲ್ ದುರಂತವನ್ನು "ಪುನರಾವರ್ತಿಸಲು" ಬಯಸಿದ್ದರು ಎಂದು ಕೂಡಾ ದೂರಿದ್ದಾರೆ.
"ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ಪರಮಾಣು ವಿದ್ಯುತ್ ಘಟಕಗಳ ಮೇಲೆ ಗುಂಡಿನ ದಾಳಿ ನಡೆಸಿಲ್ಲ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಕಚೇರಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. "ಇದು ನಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಘಟನೆ ಇದಾಗಿದೆ. ಭಯೋತ್ಪಾದಕ ಧೇಶವು ಈಗ ಪರಮಾಣು ಭಯೋತ್ಪಾದನೆಯನ್ನು ಆಶ್ರಯಿಸಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.
ಸದ್ಯ ರಷ್ಯಾ ಪರಮಾಣು ಸ್ಥಾವರದ ಮೇಲಿನ ದಾಳಿಯನ್ನು ನಿಲ್ಲಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಝಪೊರಿಝಿಯಾ (Zaporizhzhia) ಪರಮಾಣು ವಿದ್ಯುತ್ ಸ್ಥಾವರಕ್ಕೆ ಅಗ್ನಿಶಾಮಕದಳವು ಆಗಮಿಸಿ ಬೆಂಕಿಯನ್ನು ನಂದಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇನ್ನು ಇದಕ್ಕೂ ಮುನ್ನ ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಸ್ಪೋಟದ ಆತಂಕವನ್ನು ವ್ಯಕ್ತಪಡಿಸಿದ್ದರು. ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ, "ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೊರಿಝಿಯಾ ಸ್ಫೋಟಿಸಿದರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ಸ್ಪೋಟವಾಗಲಿದೆ," ಎಂದು ಹೇಳಿದ್ದರು. ಹಾಗೆಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡಾ ರಷ್ಯಾಕ್ಕೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ರಷ್ಯಾ ಅಗ್ನಿಶಾಮಕದಳಕ್ಕೆ ಅವಕಾಶ ನೀಡಿದೆ. ಆದರೆ ಸ್ಥಾವರವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications