Russia & Ukraine: 3ನೇ ಮಹಾಯುದ್ಧ ಗ್ಯಾರಂಟಿ? ಉಕ್ರೇನ್ ಅಧ್ಯಕ್ಷನ ಮಾತು ಕೇಳಿ!

ಉಕ್ರೇನ್ & ರಷ್ಯಾ ಯುದ್ಧದಲ್ಲಿ ಉತ್ತರ ಕೊರಿಯಾ ನೇರ ಎಂಟ್ರಿ ಪಡೆಯಲು ಸಜ್ಜಾಗಿದ್ದು, ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿಯ ನಿರ್ಧಾರ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳು ಈ ವಿಚಾರದಲ್ಲಿ ಉತ್ತರ ಕೊರಿಯಾ ವಿರುದ್ಧ ರೊಚ್ಚಿಗೆದ್ದಿದ್ದು, ಪರಿಣಾಮ ನೆಟ್ಟಗೆ ಇರಲ್ಲ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ 3ನೇ ಮಹಾಯುದ್ಧದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ!

ಯುದ್ಧ.. ಯುದ್ಧ.. ಯುದ್ಧ... ಹೀಗೆ ಎಲ್ಲಿ ಕೇಳಿದರೂ ಬರೀ ಯುದ್ಧಗಳ ವಿಚಾರವೇ, ಯುದ್ಧ ಬಿಟ್ಟು ಬೇರೆ ಮಾತುಗಳು ಜಗತ್ತಿನಾದ್ಯಂತ ಈಗ ಹಾಟ್ ನ್ಯೂಸ್ ಆಗಿ ಓಡಾಡುತ್ತಿಲ್ಲ. 2022ರ ಫೆಬ್ರವರಿ ತಿಂಗಳಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧ ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಈ ಯುದ್ಧ ತಣ್ಣಗಾಗುತ್ತಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿದೆ ಶತ್ರುವಿನ ಮೇಲೆರಗುತ್ತಿದೆ. ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಕೂಡ ವಿಫಲವಾಗುತ್ತಿವೆ. ಇಂತಹ ಕಠಿಣವಾದ ಸಂದರ್ಭದಲ್ಲಿ ಉಕ್ರೇನ್ ಸೇನೆಗೆ ಅಮೆರಿಕ ನೀಡುತ್ತಿರುವ ಸಹಾಯವೇ ಆಧಾರವಾಗಿದೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದ್ಕಡೆ 3ನೇ ಮಹಾಯುದ್ಧದ ಭೀತಿ ಇದೀಗ ಎದುರಾಗಿದೆ!

Ukraine Reacted Over The Korean Soldiers Joining The Russian Military

3ನೇ ಮಹಾಯುದ್ಧ ಗ್ಯಾರಂಟಿ?

ಮತ್ತೊಂದು ಮಹಾಯುದ್ಧ ಅಂದ್ರೆ ವರ್ಲ್ಡ್ ವಾರ್ ಆಗುತ್ತಾ? ಈ ಪ್ರಶ್ನೆ ಇದೀಗ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕಂದ್ರೆ ಪ್ರಪಂಚದ ವಾತಾವರಣ ನೋಡಿದರೆ ಈಗಿನ ಸ್ಥಿತಿಯಲ್ಲಿ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಎಂಬ ಭಯ ಮೂಡುತ್ತಿದೆ. ಇದಕ್ಕೆಲ್ಲಾ ಉಪ್ಪನ್ನು ಸುರಿಯುವಂತೆ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೊಸ ಬಾಂಬ್ ಸಿಡಿಸಿ, ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉತ್ತರ ಕೊರಿಯಾ ಇದೀಗ ರಷ್ಯಾ ಸೇನೆ ಪರವಾಗಿ ಹೋರಾಡಲು ಸೈನಿಕರನ್ನು ಕಳಿಸಲು ತೀರ್ಮಾನ ಮಾಡಿದ್ದು, ಇದರ ಪರಿಣಾಮ 3ನೇ ಮಹಾಯುದ್ಧ ಗ್ಯಾರಂಟಿ ಅಂತಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ!

ಏನಿದು ಹೊಸ ಕಥೆ ಗುರೂ?

ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ನೂರಾರು ಸಮಸ್ಯೆ ಎದುರಿಸುತ್ತಿದೆ. ಈ ಪೈಕಿ ರಷ್ಯಾ ನೆಲದಲ್ಲಿ ದೊಡ್ಡ ತಲ್ಲಣ ಶುರುವಾಗಿದ್ದು, ಈಗಾಗಲೇ ರಷ್ಯಾ ಮಿಲಿಟರಿ ಲಕ್ಷ ಲಕ್ಷ ಸೈನಿಕರನ್ನ ಕಳೆದುಕೊಂಡಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ರಷ್ಯಾ ಬಳಿ ಇರುವ ಲಕ್ಷ ಲಕ್ಷ ಸೈನಿಕರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಜೀವ ಬಿಟ್ಟ ಸುದ್ದಿಯು ಭಯ ಹುಟ್ಟಿಸಿದೆ. ಹೀಗಾಗಿ ರಷ್ಯಾ ಸೇನೆಗೆ ಸೇರುವ ಸೈನಿಕರ ಸಂಖ್ಯೆ ಕೂಡ ಕಡಿಮೆ ಆಗ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗ ರಷ್ಯಾಗೆ ದೊಡ್ಡ ಲಾಟರಿ ಹೊಡೆದಿದ್ದು, ಉತ್ತರ ಕೊರಿಯಾ ರಷ್ಯಾ ಪರವಾಗಿ ಹೋರಾಟ ನಡೆಸಲು ತನ್ನ 10 ಸಾವಿರ ಸೈನಿಕರನ್ನೇ ಗಿಫ್ಟ್ ಕೊಡುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+