Ukraine War: ಪುಟಿನ್ ಬಿಟ್ಟು ಬೇರೆಯವರ ಜೊತೆ ಮಾತುಕತೆ ಇಲ್ಲ ಎಂದ ಉಕ್ರೇನ್ ಅಧ್ಯಕ್ಷ!

ರಷ್ಯಾ & ಉಕ್ರೇನ್ ಯುದ್ಧ ತಪ್ಪಿಸಲು ಎಲ್ಲಾ ರೀತಿಯ ಹರಸಾಹಸ ಮಾಡಿ ಅಮೆರಿಕ ಕೂಡ ಸುಸ್ತಾಗಿ ಕೂತಿದೆ. ರಷ್ಯಾ & ಉಕ್ರೇನ್ ನಡುವೆ ಹೊಂದಾಣಿಕೆ ಬಾರದ ಕಾರಣಕ್ಕೆ ಯುದ್ಧವನ್ನ ನಿಲ್ಲಿಸುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಯುದ್ಧಕ್ಕೆ ಒಂದು ಅಂತ್ಯ ಕಾಣಿಸಬೇಕು & ಆ ಮೂಲಕ ಯುರೋಪ್ ಭಾಗದಲ್ಲಿ ಶಾಂತಿ ಮೂಡುವಂತೆ ಮಾಡಬೇಕು ಎಂಬುದೇ ಇದೀಗ ಅಮೆರಿಕದ ಉದ್ದೇಶವಾಗಿತ್ತು. ಇಂತಹ ಸಂದರ್ಭದಲ್ಲೇ ರಷ್ಯಾ & ಉಕ್ರೇನ್ ನಡುವೆ ಮಹತ್ವದ ಚರ್ಚೆ ಶುರುವಾಗುತ್ತಿದೆ.

ಯುರೋಪ್ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಭಾರಿ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿ ಮಾಡಿದೆ. ಅಲ್ಲದೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಹಲವು ಯುದ್ಧಗಳು ಎದುರಾದವು. ಇದನ್ನೆಲ್ಲಾ ಗಮನಿಸಿದರೆ ರಷ್ಯಾ & ಉಕ್ರೇನ್ ಹೀಗೆಯೇ ಬಡಿದಾಡುತ್ತಿದ್ದರೆ, ಭವಿಷ್ಯದಲ್ಲಿ ಪರಿಸ್ಥಿತಿ ಇನ್ನೂ ಕೈಮೀರಿ ಹೋಗಲಿದೆ ಅನ್ನೋ ವಿಚಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ತಿಳಿದಿತ್ತು. ಆದರೂ ಅವರು ಯುದ್ಧ ನಿಲ್ಲಿಸಲು ಮಾಡಿದ ಪ್ರಯತ್ನಗಳು ಬೇಗ ಫಲ ನೀಡಲೇ ಇಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ರಷ್ಯಾ & ಉಕ್ರೇನ್ ನಡುವೆ ಟರ್ಕಿಯಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.

Ukraine President Volodymyr Zelenskyy Said This About Meeting The Russian President

ಉಕ್ರೇನ್ ಅಧ್ಯಕ್ಷನ ಡಿಮ್ಯಾಂಡ್ ಏನು?

ಅಂದಹಾಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದೀಗ ಹೊಸ ಡಿಮ್ಯಾಂಡ್ ಒಂದನ್ನ ಇಟ್ಟಿದ್ದು, ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದೆ. ರಷ್ಯಾ ಜೊತೆಗೆ ಕದನ ವಿರಾಮ ಚರ್ಚೆಗೆ ಸಿದ್ಧ ಎಂದು ಹೇಳಿರುವ ವೊಲೊಡಿಮಿರ್ ಝೆಲೆನ್ಸ್ಕಿ, ನಾನು ರಷ್ಯಾದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಜೊತೆ ಚರ್ಚೆ ಮಾಡುವುದಿಲ್ಲ. ನಾನು ಕೇವಲ ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಮಾತ್ರ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ವೊಲೊಡಿಮಿರ್ ಝೆಲೆನ್ಸ್ಕಿ ಡಿಮ್ಯಾಂಡ್‌ಗೆ ಕೂಡ ರಷ್ಯಾ ಒಪ್ಪಿಗೆ ಸೂಚಿಸಿದೆ. ಮತ್ತೊಂದು ಕಡೆ ಟರ್ಕಿಯಲ್ಲಿ ಸಭೆಯನ್ನ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+