ಅಬ್ಬಬ್ಬಾ ಇದಾ ಸ್ಕೆಚ್ಚು? ಅಮೆರಿಕ ಚುನಾವಣೆ ಬಗ್ಗೆ ಉಕ್ರೇನ್ ಅಧ್ಯಕ್ಷ ಹೇಳಿದ್ದು ಏನು ಕೇಳಿ!
ಅಮೆರಿಕ
ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಇದೀಗ ಭಾರಿ ಕುತೂಹಲ ಕೆರಳಿದೆ. ಅಮೆರಿಕದ ಅಧ್ಯಕ್ಷ ಪಟ್ಟ ಯಾರ ಪಾಲಿಗೆ? ಎಂಬ ಪ್ರಶ್ನೆ ಇದೀಗ ಜತ್ತಿನಾದ್ಯಂತ ಕಾಡುತ್ತಿದೆ. ಒಂದು ಕಡೆ ಶತ್ರು ದೇಶಗಳು ಅಮೆರಿಕದ ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿದ್ದರೆ, ಈ ಸಮಯದಲ್ಲೇ ಅಮೆರಿಕದ ಮಿತ್ರ ದೇಶಗಳಿಗೆ ಈ ವಿಚಾರದಲ್ಲಿ ಸಣ್ಣ ಭಯ ಕಾಡುತ್ತಿದೆ. ಅದರಲ್ಲೂ, ಉಕ್ರೇನ್ ಅಧ್ಯಕ್ಷ ಇದೀಗ ನೀಡಿರುವ ಹೇಳಿಕೆ ಹೊಸ ಅಲೆ ಎಬ್ಬಿಸಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ರಷ್ಯಾ
ತನ್ನ ವಿರುದ್ಧ ಯುದ್ಧ ಸಾರಿದ ನಂತರ ಉಕ್ರೇನ್ ಪಾಡು ಹೀನಾಯ ಸ್ಥಿತಿಗೆ ತಲುಪಿಬಿಟ್ಟಿದೆ. ಅಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉಕ್ರೇನ್ ಜನರಿಗೆ ಎದುರಾಗಿದೆ. ಹೀಗೆ ಯುದ್ಧ ಶುರು ಆಗಲು ಖುದ್ದು ಉಕ್ರೇನ್ ಅಧ್ಯಕ್ಷನ ಎಡವಟ್ಟು ಕೂಡ ಕಾರಣ ಎಂಬ ಆರೋಪ ಕೂಡ ಇದೆ. ಇದೆಲ್ಲಾ ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಉಕ್ರೇನ್ ಬೀದಿಗೆ ಬೀಳುವ ಲಕ್ಷಣಗಳು ಕಾಣುತ್ತಿದೆ ಎಂಬುದು ಉಕ್ರೇನ್ ವಿರೋಧಿಗಳ ಮಾತು. ಇಂತಹ ಸಮಯದಲ್ಲೇ ಅಮೆರಿಕದ ಮೇಲೆ ಅವಲಂಬಿತವಾಗಿ ಈಗ ವಿಲವಿಲ ಒದ್ದಾಡುತ್ತಿರುವ ಉಕ್ರೇನ್, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟು ಕೂತಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷ ಅಮೆರಿಕ ಚುನಾವಣೆ ಬಗ್ಗೆ ನೀಡಿರುವ ಹೇಳಿಕೆ... id='are-slot-2' class='oiad oi-axt oiadv'>












Click it and Unblock the Notifications