ರಷ್ಯಾ ವಿರುದ್ಧ ರಿವೇಂಜ್‌ಗೆ ಅನುಮತಿ ಕೇಳಿದ ಉಕ್ರೇನ್ ಅಧ್ಯಕ್ಷ: ಹೋಗು ಗುರು ಮುಖ ತೊಳ್ಕೊ ಅಂತಿದ್ದಾರೆ ನೆಟ್ಟಿಗರು!
ಉಕ್ರೇನ್ ಅಧ್ಯಕ್ಷನಿಗೆ ಅದೆಷ್ಟೇ ಹೇಳಿದರೂ ಬುದ್ಧಿ ಬರುವ ಸೀನ್ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ರಷ್ಯಾ ವಿರುದ್ಧ ಪದೇ ಪದೇ ಕಿರಿಕ್ ಮಾಡುತ್ತಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈಗ ಹೊಸ ಬೇಡಿಕೆ ಇಟ್ಟಿದ್ದು, ಈ ಡಿಮ್ಯಾಂಡ್ ಕೇಳಿ ಖುದ್ದು ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳೇ ಬೆಚ್ಚಿಬಿದ್ದಿವೆ. ಯಾಕಂದ್ರೆ ಉಕ್ರೇನ್ ಅಧ್ಯಕ್ಷ ಕೇಳಿರುವ ಅನುಮತಿ ಸಾಮಾನ್ಯದ್ದು ಅಲ್ಲ, ಇಡೀ ರಷ್ಯಾ ಸರ್ವನಾಶ ಮಾಡಲು & ರಿವೇಂಜ್ ತೆಗೆದುಕೊಳ್ಳಲು ಭಯಾನಕ ಅಸ್ತ್ರ ಬಳಸುವಂತಹದ್ದು! ಉಕ್ರೇನ್ ಅಧ್ಯಕ್ಷನ ಈ ಮಾತು ಕೇಳಿ ಪಾಶ್ಚಿಮಾತ್ಯ ನಾಯಕರು ಏನು ಹೇಳಿದ್ದಾರೆ ಗೊತ್ತಾ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಅಂತಾ ಇಡೀ ಜಗತ್ತು ಈಗ ಬಡಿದಾಡುತ್ತಿದೆ. ಈ ಸಮಯದಲ್ಲೇ ಲಕ್ಷಾಂತರ ಜನರು ಜೀವ ಕಳೆದುಕೊಂಡು, ಕೋಟ್ಯಂತರ ಕುಟುಂಬಗಳು ಈ ಯುದ್ಧದ ಪರಿಣಾಮ ನರಳುತ್ತಿವೆ. ಹೀಗಿದ್ದರೂ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣಗಳು ಈಗ ಗೋಚರಿಸುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗ ಕೂಡ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನೀಡಿರುವ ಹೇಳಿಕೆ ವೈರಲ್ ಆಗುತ್ತಿದ್ದು, ರಷ್ಯಾ ಮತ್ತಷ್ಟು ರೊಚ್ಚಿಗೆದ್ದು ಉಕ್ರೇನ್ ವಿರುದ್ದ ಪ್ರತಿದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ, ಉಕ್ರೇನ್ ಅಧ್ಯಕ್ಷರು ಹೇಳಿದ್ದು ಏನು? ಈ ಬಗ್ಗೆ ತಿಳಿಯಲು ಮುಂದೆ ಓದಿ.

ರಷ್ಯಾ ವಿರುದ್ಧ ದೊಡ್ಡ ಮಟ್ಟದ ದಾಳಿ?
ಅಷ್ಟಕ್ಕೂ ರಷ್ಯಾ ಸೈನಿಕರನ್ನು ಉಕ್ರೇನ್ ನೆಲದಿಂದ ಓಡಿಸುವುದು ಮಾತ್ರವಲ್ಲ ಈಗ ರಷ್ಯಾದ ಮೇಲೆ ನಾವು ದಾಳಿ ಕೂಡ ಮಾಡಬೇಕಿದೆ. ಇದಕ್ಕಾಗಿ ನಮಗೆ ಶಕ್ತಿಶಾಲಿ ಶೆಲ್‌ಗಳು ಸೇರಿದಂತೆ ಕಿರು ಕ್ಷಿಪಣಿಗಳನ್ನ ಬಳಸಲು ಅನುಮತಿ ನೀಡಬೇಕು ಎಂದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಎದುರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ. ಹೀಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ರಷ್ಯಾ ನೆಲದ ವಿರುದ್ಧ ತೀವ್ರ ದಾಳಿ ಮಾಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದು, ರಷ್ಯಾ ಸೇನೆಯನ್ನು ಮತ್ತಷ್ಟು ಕೆರಳಿಸಿ ಕೆಂಡವಾಗುವಂತೆ ಮಾಡಿದೆ.
ಉಕ್ರೇನ್ ಸೇನೆ, ರಷ್ಯಾ ಮೇಲೆ ಗಂಭೀರ ಪ್ರಮಾಣದ ದಾಳಿ ಮಾಡುವ ಮೊದಲು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಅನುಮತಿ ಪಡೆಯಬೇಕಿದೆ. ಯಾಕಂದ್ರೆ ಉಕ್ರೇನ್ ಸೇನೆಗೆ ದಾಳಿ ಮಾಡಲು ಸಹಾಯ ಮಾಡುತ್ತಿರುವುದೇ ಪಾಶ್ಚಿಮಾತ್ಯ ದೇಶಗಳು. ಹೀಗಿದ್ದಾಗ ಅವರ ಅನುಮತಿ ಇಲ್ಲದೆ ರಷ್ಯಾ ವಿರುದ್ಧ ಗಂಭೀರ ದಾಳಿ ಮಾಡಬಾರದು ಎಂಬ ಆಗ್ರಹ ಇದ್ದು, ಈ ಹಿನ್ನೆಲೆಯಲ್ಲಿ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಹತ್ವದ ಮನವಿ ಮಾಡಿದ್ದಾರೆ.
ಜಗತ್ತಿಗೆ ಶುರುವಾಗಿದೆ ಹೊಸ ಟೆನ್ಷನ್!
ಕೆಲ ಗಂಟೆಗಳ ಹಿಂದಷ್ಟೇ ಅಮೆರಿಕ ದೇಶವು ಉಕ್ರೇನ್‌ಗೆ ₹250 ಮಿಲಿಯನ್ ಡಾಲರ್ ಅಂದ್ರೆ ಸುಮಾರು 2,098 ಕೋಟಿ ರೂಪಾಯಿ ವೆಚ್ಚದ ಶಸ್ತ್ರಾಸ್ತ್ರಗಳ ನೆರವನ್ನು ನೀಡುವ ಘೋಷಣೆ ಮಾಡಿದೆ. ಅಲ್ಲದೆ ಈ ಕುರಿತು ಮಹತ್ವದ ಸಭೆ ಕೂಡ ಆಯೋಜನೆ ಮಾಡಲಾಗಿತ್ತು. ಇದೇ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಮಾಡಿರುವ ಮನವಿ ಬಗ್ಗೆ ಚರ್ಚೆ ಶುರುವಾಗಿದೆ. ಯಾಕಂದ್ರೆ, ಈ ಯುದ್ಧ ನಿಲ್ಲದೆ ಹೋದರೆ 3ನೇ ಮಹಾಯುದ್ಧ ನಡೆಯುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಂಧಾನಕ್ಕೆ ಉಕ್ರೇನ್ ಅಧ್ಯಕ್ಷ ಒಪ್ಪುತ್ತಿಲ್ಲ ಎಂಬ ಆರೋಪ ರಷ್ಯಾದ ಅಧ್ಯಕ್ಷ ಪುಟಿನ್‌ರದ್ದು. ಹೀಗೆ ಇಬ್ಬರ ಕಿತ್ತಾಟ ಜಗತ್ತಿಗೆ ಟೆನ್ಷನ್ ಕೊಡುತ್ತಿದೆ.












Click it and Unblock the Notifications