ಶಾಂತಿಗಾಗಿ ರಷ್ಯಾ ಕಡೆಯಿಂದ ಅದೊಂದೇ ಡಿಮ್ಯಾಂಡ್, ಉಕ್ರೇನ್ ಒಪ್ಪದಿದ್ದರೆ ಯುದ್ಧ ನಿಲ್ಲಲ್ಲ | Ukraine Peace Deal

ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಇನ್ನು 20 ದಿನಗಳಲ್ಲಿ 4 ವರ್ಷ ಸಂಪೂರ್ಣವಾಗಲಿದೆ. ಹೀಗೆ ಎರಡೂ ದೇಶಗಳ ನಡುವಿನ ಭೀಕರ ಕದನ ಹೇಗಾದರೂ ನಿಲ್ಲಬೇಕು, ಎಂಬ ಜಗತ್ತಿನ ಆಸೆಯು ಈಗ ಆಸೆಯಾಗಿಯೇ ಉಳಿಯುತ್ತಿದೆ. ಏಕೆಂದರೆ ಒಂದು ಕಡೆ ಉಕ್ರೇನ್ ತಗ್ಗಿಬಗ್ಗಿ ನಡೆದು ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ, ಹಾಗೇ ಇನ್ನೊಂದು ಕಡೆ ರಷ್ಯಾ ಕೂಡ ತಕ್ಷಣಕ್ಕೆ ತಲೆಬಾಗಿ ಯುದ್ಧವನ್ನ ನಿಲ್ಲಿಸಲು ಒಪ್ಪುತ್ತಿಲ್ಲ. ಇಬ್ಬರ ಈ ಪ್ರತಿಷ್ಠೆಯ ಕಾರಣಕ್ಕೆ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಹೀಗಿದ್ದಾಗ, ರಷ್ಯಾ ಶಾಂತಿ ಒಪ್ಪಂದ ಮಾಡಿಕೊಳ್ಳಲು ತನ್ನದು ಅದೊಂದೇ ಡಿಮ್ಯಾಂಡ್ ಎಂದು ಮತ್ತೊಮ್ಮೆ ಒತ್ತಿ ಒತ್ತಿ ಹೇಳಿದೆ.

ಚಳಿಗಾಲ ಮುಗಿಯುವ ಒಳಗೆ ಹೇಗಾದರೂ ಈ ಯುದ್ಧ ನಿಲ್ಲಬೇಕು ಎಂಬುದು ಎಲ್ಲರ ಒತ್ತಾಯ, ಏಕೆಂದರೆ ಮೈ ಹೆಪ್ಪುಗಟ್ಟುವ ಚಳಿ ನಡುವೆ ಉಕ್ರೇನ್ ದೇಶದಲ್ಲಿ ಪ್ರಜೆಗಳು ಜೀವ ಬಿಡುತ್ತಿದ್ದಾರೆ. ರಷ್ಯಾ ಸೇನೆ ಉಕ್ರೇನ್‌ ದೇಶದ ಬಹುತೇಕ ವಿದ್ಯುತ್ ಸರಬರಾಜು ವಲಯವನ್ನು ಧ್ವಂಸಗೊಳಿಸಿದ್ದು, ಇದೇ ಹಿನ್ನೆಲೆ ತನಗೆ ಬೇಕಿರುವ ವಿದ್ಯುತ್ ಪಡೆಯಲು ಉಕ್ರೇನ್ ಯುರೋಪ್ ಸ್ನೇಹಿತ ದೇಶಗಳ ಬಳಿ ಕಾಲು ಹಿಡಿಯುತ್ತಾ ಒದ್ದಾಡುತ್ತಿದೆ.

Ukraine Peace Deal

ಹೀಗಿದ್ದಾಗ ಹೇಗಾದರೂ ಮಾಡಿ ಯುದ್ಧ ನಿಲ್ಲಿಸೋಣ ಅಂತಾ ಟ್ರಂಪ್ ಅವರು, ತಮ್ಮ ಅಧಿಕಾರಿಗಳ ತಂಡವನ್ನೇ ರಷ್ಯಾಗೆ ಕಳಿಸಿ ಶಾಂತಿ ಒಪ್ಪಂದಕ್ಕೆ ಒದ್ದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ರಷ್ಯಾ ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದ್ದು, ನಮ್ಮ ಷರತ್ತುಗಳಿಗೆ ಉಕ್ರೇನ್ ಒಪ್ಪಿದರೆ ಮಾತ್ರ ಯುದ್ಧ ನಿಲ್ಲಿಸುತ್ತೇವೆ. ಇಲ್ಲವಾದರೆ ಯುದ್ಧ ನಿಲ್ಲುವ ಮಾತೇ ಇಲ್ಲ ಎಂಬ ಸಂದೇಶ ರವಾನೆ ಮಾಡಿದೆ. ಈ ವಿಚಾರ ಇದೀಗ ಮತ್ತೆ ರಷ್ಯಾ & ಉಕ್ರೇನ್ ನಡುವೆ ಇನ್ನಷ್ಟು ದಾಳಿಯ ಬಗ್ಗೆ ಮುನ್ಸೂಚನೆ ಕೂಡ ನೀಡಿದಂತೆ ಕಾಣುತ್ತಿದೆ.

ರಷ್ಯಾ ಷರತ್ತುಗಳಿಗೆ ಒಪ್ಪುತ್ತಾ ಉಕ್ರೇನ್?

ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ರಷ್ಯಾ ಇಟ್ಟಿರುವ ಪ್ರಮುಖ ಷರತ್ತುಗಳ ಪೈಕಿ, ಯುದ್ಧ ಶುರುವಾದ ನಂತರ ರಷ್ಯಾ ವಶಕ್ಕೆ ಪಡೆದಿರುವ ಪ್ರದೇಶಗಳನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಈ ಮೂಲಕ ಉಕ್ರೇನ್ ತನ್ನ ದೇಶದ ಸಾಕಷ್ಟು ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಕಳೆದುಕೊಂಡು ಒದ್ದಾಡಬೇಕಿದೆ. ಇದರೊಂದಿಗೆ ಉಕ್ರೇನ್ ನ್ಯಾಟೋ ಜೊತೆಗೆ ಸೇರದಂತೆ, ಯುರೋಪ್ ಒಕ್ಕೂಟ ಸೇರದಂತೆ ರಷ್ಯಾ ಒತ್ತಡ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಹೀಗಿದ್ದಾಗ ಉಕ್ರೇನ್ ಕೂಡ ಸುಲಭವಾಗಿ ಈ ಎಲ್ಲಾ ಆಗ್ರಹಗಳಿಗೆ ಮಣಿಯುವುದು ಅನುಮಾನ. ಇದೇ ಕಾರಣಕ್ಕೆ ಯುದ್ಧ ಇನ್ನಷ್ಟು ದಿನ ಮುಂದುವರಿಯುವ ಆತಂಕ ಆವರಿಸಿದೆ.

450 ಡ್ರೋನ್ ಮೂಲಕ ದಾಳಿ

ಉಕ್ರೇನ್ ವಿರುದ್ಧ ಕೆಲವು ದಿನಗಳ ಹಿಂದಷ್ಟೇ ರಷ್ಯಾ ಸೇನೆ ಸುಮಾರು 450 ಡ್ರೋನ್ ಹಾಗೂ 70 ಕ್ಷಿಪಣಿ ಹಾರಿಸುವ ಮೂಲಕ, ಕೆಲವು ದಿನಗಳ ಹಿಂದಷ್ಟೇ ಭಯಾನಕ ದಾಳಿಯನ್ನು ನಡೆಸಿತ್ತು. ರಷ್ಯಾ ಸೇನೆ ಭೀಕರ ದಾಳಿಗೆ ಉಕ್ರೇನ್ ಕೂಡ ತತ್ತರಿಸಿ ಹೋಗಿ ಮತ್ತೆ ಅಮೆರಿಕ ಬಳಿ ಯುದ್ಧವನ್ನ ನಿಲ್ಲಿಸುವಂತೆ ಬೇಡಿಕೊಂಡಿದೆ. ಹೀಗಿದ್ದಾಗ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ರಷ್ಯಾ, ನಮ್ಮೆಲ್ಲಾ ಡಿಮ್ಯಾಂಡ್ ಒಪ್ಪುವ ತನಕವೂ ಈ ಯುದ್ಧ ನಿಲ್ಲಿಸಲು ನಾವು ಸಿದ್ಧವಿಲ್ಲ ಎಂದಿದೆ.

ಮತ್ತೊಂದು ಕಡೆ ಚಳಿಯಲ್ಲಿ ಉಕ್ರೇನ್ ಪ್ರಜೆಗಳು ಜೀವ ಬಿಡುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಈ ವಿಪರೀತ ಚಳಿಯ ನಡುವೆ ಸೂಕ್ತ ಹೀಟರ್ ವ್ಯವಸ್ಥೆ ಇಲ್ಲದೆ ಒದ್ದಾಡುವ ಸ್ಥಿತಿ ಅಲ್ಲಿನ ಜನರಿಗೆ ಎದುರಾಗುತ್ತಿದೆ. ಅಮೆರಿಕ ಕೂಡ ಯುದ್ಧ ನಿಲ್ಲಿಸಲು ಎಲ್ಲಾ ಪ್ರಯತ್ನ ಮಾಡಿದ್ದು, ಇದು ಫಲ ನೀಡುತ್ತಾ? ಎಂಬ ವಿಚಾರವನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+