ಉಕ್ರೇನ್ ಸೇನೆಗೆ ಗೆಲ್ಲುವುದು ಅಲ್ಲ ಬದುಕುವುದು ಕೂಡ ಕಷ್ಟ ಕಷ್ಟ!

ಒಂದು.. ಎರಡು.. ಮೂರು.. ಹೀಗೆ ರಷ್ಯಾ & ಉಕ್ರೇನ್ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 978 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ರಷ್ಯಾ & ಉಕ್ರೇನ್ ನಡುವೆ ಈ ರೀತಿಯಾಗಿ ಕಿರಿಕ್ ಶುರುವಾದ ನಂತರ ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲಲಿದೆ, ರಷ್ಯಾ ತನ್ನ ಸಿಟ್ಟು ಕಡಿಮೆ ಮಾಡಿಕೊಂಡು ಸೇನೆ ವಾಪಸ್ ಕರೆಸಿಕೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದ್ರೆ ಇದೀಗ ಆಗಿರುವುದು ಏನು? ಉಕ್ರೇನ್ ಪರಿಸ್ಥಿತಿ ಹೇಗಿದೆ? ಹುಮ್ಮಸ್ಸಿನಲ್ಲಿ ಯುದ್ಧ ಆರಂಭಿಸಿ ಈಗ ನರಳುತ್ತಿರುವ ರಷ್ಯಾ ಕಥೆ ಏನಾಗ್ತಿದೆ?

ಯುದ್ಧಗಳಿಂದ ಏನೂ ಆಗಲ್ಲ, ಶಾಂತಿ & ಸೌಹಾರ್ಧತೆ ಮಾತ್ರ ಎಲ್ಲವನ್ನೂ ಸರಿ ಮಾಡುತ್ತೆ ಎಂಬುದು ಭಾರತದ ನಿಲುವು. ಇದೇ ಕಾರಣಕ್ಕೆ ಭಾರತ ಯಾವುದೇ ದೇಶದ ಜೊತೆ ಕೂಡ, ಯುದ್ಧದ ನಿರ್ಧಾರಕ್ಕೆ ಮುಂದುವರಿಯಲ್ಲ. ಹೀಗಾಗಿ ಭಾರತದ ಜೊತೆಗೆ ಬಹುದೊಡ್ಡ ದ್ವೇಷ & ಶತ್ರುತ್ವ ಯಾವುದೇ ದೇಶಕ್ಕೂ ಇಲ್ಲ. ಹೀಗಾಗಿ ಭಾರತ ನೆಮ್ಮದಿಯಾಗಿ ಇದೆ. ಆದರೆ ಇದೇ ಸಮಯದಲ್ಲಿ ಪಾಶ್ಚಿಮಾತ್ಯ ದೇಶಗಳು ಮಾತ್ರ ಯುದ್ಧ... ಯುದ್ಧ... ಯುದ್ಧ... ಅಂತಲೇ ಯುದ್ಧದ ಜಪ ಮಾಡುತ್ತಿವೆ. ಅದರಲ್ಲೂ ನೆಮ್ಮದಿಯಾಗಿದ್ದ ಉಕ್ರೇನ್ ಈಗ ಧಗಧಗ ಹೊತ್ತಿ ಉರಿಯುತ್ತಿದೆ.

Ukraine Military Is Suffering To Survive Against Russia Now

ಅಮೆರಿಕದ ಜೊತೆ ಸೇರಿ ತಪ್ಪಾಯ್ತಾ?

ಉಕ್ರೇನ್ ಮಿಲಿಟರಿ ತಾನು ರಷ್ಯಾ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಇತ್ತು. ರಷ್ಯಾ ಸೇನೆ 2022 ರಲ್ಲಿ ಯುದ್ಧ ಶುರು ಮಾಡಿದಾಗ ರೊಚ್ಚಿಗೆದ್ದು ಮರುದಾಳಿ ಆರಂಭಿಸಿ, ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಗುಟುರು ಹಾಕಿತ್ತು. ಆದರೆ ಈಗ ನೋಡಿದರೆ ರಷ್ಯಾ ಸೇನೆ ವಿರುದ್ಧ ಗೆಲ್ಲುವ ಮಾತು ಬಿಡಿ, ಉಕ್ರೇನ್ ಸೇನೆಗೆ ಜೀವ ಉಳಿಸಿಕೊಳ್ಳುವುದು ಕೂಡ ಕಷ್ಟವೇ ಆಗುತ್ತಿದೆ. ಯಾಕಂದ್ರೆ ರಷ್ಯಾ ಕೊಡುತ್ತಿರುವ ಒಂದೊಂದು ಏಟಿಗೂ ನಲುಗಿ ಹೋಗಿದೆ ಉಕ್ರೇನ್ ಮಿಲಿಟರಿ.

ವ್ಲಾದಿಮಿರ್ ಪುಟಿನ್ ಐಡಿಯಾ ಏನು?

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪ್ಲಾನ್ ಪ್ರಕಾರ, ಮುಂದಿನ 10 ವರ್ಷದ ತನಕ ಕೂಡ ಉಕ್ರೇನ್ ವಿರುದ್ಧ ಯುದ್ಧ ಮುಂದುವರಿಸುವ ಸಾಧ್ಯತೆ ಇದೆ ಎಂಬ ಆರೋಪ ಈಗ ಕೇಳಿ ಬಂದಿದೆ. ಯಾಕೆ ಅಂದ್ರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧದ ಈ ಯುದ್ಧವನ್ನು ಅಮೆರಿಕ ವಿರುದ್ಧದ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ಒಂದು ಕಡೆ ಉಕ್ರೇನ್ ಸೋತರೆ ಅಮೆರಿಕಗೆ ಮುಖಭಂಗ ಇನ್ನೊಂದು ಕಡೆ ಉಕ್ರೇನ್‌ಗೆ ನೆರವು ಮುಂದುವರಿಸಿದರೆ, ಅಮೆರಿಕ ಆರ್ಥಿಕವಾಗಿ ಸೋಲಲಿದೆ.

ಇದೇ ಕಾರಣಕ್ಕೆ ಪುಟಿನ್ ಯುದ್ಧವನ್ನ ಮುಂದುವರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ಅಂತಾರಾಷ್ಟ್ರೀಯ ವರದಿಗಳಂತೆ ಉಕ್ರೇನ್ ಆರ್ಥಿಕವಾಗಿ ನಾಶವಾಗಿ ಹೋಗಿ, ರಷ್ಯಾ ವಿರುದ್ಧ ಗೆಲ್ಲುವುದು ಬಿಡಿ ಕನಿಷ್ಠ ಬದುಕಿ ಉಳಿಯುವುದು ಕೂಡ ಉಕ್ರೇನ್‌ಗೆ ಈಗ ಕಷ್ಟವಾಗುತ್ತಿದೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+