Ukraine War: ಕದನ ವಿರಾಮ ಬದಲು ಮತ್ತೆ ಬಡಿದಾಟ ಶುರು ಮಾಡಿದ ರಷ್ಯಾ & ಉಕ್ರೇನ್!

ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬಹುದು ಅಂತಾ ಕಾಯುತ್ತಿರುವ ಜನರಿಗೆ ಸಾಕಷ್ಟು ದೊಡ್ಡ ಆಘಾತವೇ ಎದುರಾಗಿದೆ. ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ನಿಲ್ಲಿಸುವ ಬಗ್ಗೆ ಮಾತನಾಡಿ, ಕದನ ವಿರಾಮ ಘೋಷಣೆಗೆ ಒಲವು ತೋರಿದ್ದರು. ಉಕ್ರೇನ್ ಕೂಡ ಈ ಸುದ್ದಿಯಿಂದ ಸಖತ್ ಖುಷಿ ಖುಷಿಯಾಗಿತ್ತು. ಆದರೆ ದಿಢೀರ್ ಏನಾಯ್ತೋ ಗೊತ್ತಿಲ್ಲ ಎರಡೂ ದೇಶಗಳು ಮತ್ತೆ ಫೈಟಿಂಗ್ ಶುರು ಮಾಡಿವೆ.

ರಷ್ಯಾ ಸೇನೆ ಇದೀಗ ಮತ್ತೆ ಉಕ್ರೇನ್ ಮೇಲೆ ದಾಳಿ ಶುರು ಮಾಡಿದ್ದು, ವಾಯು ದಾಳಿಯು ಸೇರಿದಂತೆ ಡ್ರೋನ್‌ಗಳ ಮೂಲಕ ಉಕ್ರೇನ್ ನೆಲದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಹೀಗೆ ರಷ್ಯಾ ನಡೆಸುತ್ತಿರುವ ದಾಳಿಗೆ ಕಂಗಾಲಾಗಿ ಹೋಗಿರುವ ಉಕ್ರೇನ್ ಪಡೆಗಳು, ಓಡಿ ಹೋಗ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ. ರಷ್ಯಾ ಸೇನೆಗೆ ಎದುರು ನಿಂತು ಹೋರಾಡುವ ಶಕ್ತಿ ಇಲ್ಲದೆ, ಉಕ್ರೇನ್ ನಿಶ್ಯಕ್ತವಾಗಿ ಕುಸಿದು ಬಿದ್ದಿದೆ. ಇಂತಹ ಸಮಯದಲ್ಲೇ ಮತ್ತೆ ಮತ್ತೆ ರಷ್ಯಾ ಮಿಲಿಟರಿ ಭರ್ಜರಿ ಅಟ್ಯಾಕ್ ಮುಂದುವರಿಸಿದೆ.

Ukraine Military And Russia Military Started Fight Again

ಬಿತ್ತು.. ಬಿತ್ತು.. ಮಿಸೈಲ್ ಬಿತ್ತು!

ರಷ್ಯಾ ಸೇನೆಯಿಂದ ಹಾರುತ್ತಿರುವ ಕ್ಷಿಪಣಿಗಳು ಹಾಗೂ ಬಾಂಬ್ ಇದೀಗ ಉಕ್ರೇನ್ ಪ್ರಜೆಗಳು ಓಡಿ ಹೋಗುವಂತೆ ಮಾಡುತ್ತಿವೆ. ಉಕ್ರೇನ್ ರಾಜಧಾನಿ ಕೀವ್ ಬಿಟ್ಟರೆ ಇದೀಗ ಎಲ್ಲಾ ಜಾಗ ರಷ್ಯಾ ಸೇನೆಯ ವಶದಲ್ಲೇ ಇದೆ, ಹೀಗಾಗಿ ಉಕ್ರೇನ್ ತನ್ನ ರಾಜಧಾನಿ ಉಳಿಸಿಕೊಳ್ಳಲು ಈಗ ಪರದಾಡುವ ಸ್ಥಿತಿಗೆ ತಲುಪಿದೆ. ಉಕ್ರೇನ್ ರಾಜಧಾನಿ ಕೀವ್ ಕೂಡ ನಾಶವಾಗುವ ಪರಿಸ್ಥಿತಿ ತಲುಪಿದ್ದು, ಉಕ್ರೇನ್ ಅಧ್ಯಕ್ಷ ಕೂಡ ನಿಗೂಢ ಜಾಗದಲ್ಲಿ ಆಶ್ರಯ ಪಡೆದಿರುವ ಮಾಹಿತಿ ಇದೆ. ಅತ್ತ ಡೊನಾಲ್ಡ್ ಟ್ರಂಪ್ ಕೂಡ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತು ಹೋಗಿದ್ದಾರೆ.

ಉಕ್ರೇನ್‌ಗೆ ಬುದ್ಧಿ ಕಲಿಸಬೇಕು ಅಂತಾ ರಷ್ಯಾ...

ಕೆಲವು ದಿನಗಳ ಹಿಂದೆ ಉಕ್ರೇನ್ ಸೇನೆ ಮಾಸ್ಕೋ ಮೇಲೆ ಡ್ರೋನ್ ಅಟ್ಯಾಕ್ ಮಾಡಿತ್ತು, ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನೇ ಇದು ಕೋಪಗೊಳ್ಳುವಂತೆ ಮಾಡಿತ್ತು. ಅಲ್ಲದೇ ಈ ವಿಚಾರದಲ್ಲಿ ತಕ್ಷಣ ಉಕ್ರೇನ್‌ಗೆ ಬುದ್ಧಿ ಕಲಿಸಬೇಕೆಂಬ ಪಣತೊಟ್ಟು, ಶೀಘ್ರದಲ್ಲೇ ಉಕ್ರೇನ್ ಮೇಲೆ ದೊಡ್ಡ ದಾಳಿ ನಡೆಸಲು ರಷ್ಯಾ ಮಿಲಿಟರಿ ತಯಾರಿ ಆರಂಭಿಸಿದೆ ಎಂಬ ಸುದ್ದಿಯೂ ಆಗ ಹರಿದಾಡಿತ್ತು. ಇಷ್ಟೆಲ್ಲದರ ನಡುವೆ ದಿಢೀರ್ ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿಯನ್ನು ಆರಂಭ ಮಾಡಿದ್ದು ಭಾರಿ ಭಯ ಹುಟ್ಟುಹಾಕಿದೆ. ಅಲ್ಲದೆ ಮುಂದಿನ ಕಥೆ ಏನು? ಅನ್ನೋ ಚಿಂತೆ ಕೂಡ ಸ್ಥಳೀಯರಲ್ಲಿ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+