Ukraine War: ರಷ್ಯಾ ವಿರುದ್ಧ ಪ್ರಬಲ ದಾಳಿಗೆ ಸ್ಕೆಚ್ ಹಾಕಿದ ಉಕ್ರೇನ್ ಸೇನೆ?
ಯುದ್ಧ ನಿಲ್ಲಿಸಲು ರಷ್ಯಾ ಒಂದು ಒಪ್ಪಂದಕ್ಕೆ ಬರುತ್ತಿಲ್ಲ, ಉಕ್ರೇನ್ ವಿರುದ್ಧ ತನ್ನ ದಾಳಿ ಮುಂದುವರಿಸಿ ಭಯದ ವಾತಾವರಣ ಹುಟ್ಟುಹಾಕಿದೆ ರಷ್ಯಾ ಮಿಲಿಟರಿ. ಮತ್ತೊಂದು ಕಡೆ ಅಮೆರಿಕ ಕೂಡ ಈ ವಿಚಾರದಲ್ಲಿ ಬೇಸತ್ತು ಹೋಗಿದ್ದು, ನಿಮ್ಮಿಬ್ಬರ ನಡುವೆ ಏನಾದರೂ ಆಗಲಿ ಅಂತಾ ಕೂತುಬಿಟ್ಟಿದೆ. ಇಂತಹ ಸಮಯದಲ್ಲೇ ಇಂದು ರಷ್ಯಾ ಮಾಡಿಕೊಂಡ ಘೋರ ತಪ್ಪು ಇನ್ನೊಂದು ದೊಡ್ಡ ಬಡಿದಾಟಕ್ಕೆ ವೇದಿಕೆ ಕಲ್ಪಿಸಿದೆ. ಹಾಗಾದ್ರೆ ರಷ್ಯಾ ಮಾಡಿರುವ ಎಡವಟ್ಟು ಎಂತಹದ್ದು?
ಯುದ್ಧ.. ಯುದ್ಧ.. ಯುದ್ಧ.. ಹೀಗೆ ಇಡೀ ಯುರೋಪ್ ಇದೀಗ ಯುದ್ಧದ ಜ್ವಾಲೆಯಲ್ಲಿದೆ. ಬೀದಿ, ಬೀದಿಯಲ್ಲಿ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ಸೇನೆಗಳು ಸರ್ವನಾಶಕ್ಕೆ ಸಜ್ಜಾಗಿವೆ. ರಷ್ಯಾ & ಉಕ್ರೇನ್ ನಡುವೆ ಹೀಗೆ ಯುದ್ಧ ನಡೆಯುತ್ತಿದ್ರೆ, ಮತ್ತೊಂದು ಕಡೆಯಲ್ಲಿ ಯುರೋಪ್ ವಿಲವಿಲ ಒದ್ದಾಡುತ್ತಿದೆ. ಅದು ಹೇಗೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆದರೆ ಯುರೋಪ್ ದೇಶಗಳಿಗೆ ಏನು ಕಷ್ಟ? ಅನ್ನೋ ಪ್ರಶ್ನೆ ಮೂಡಿರುವ ಸಮಯದಲ್ಲೇ ಮತ್ತೊಂದು ದುರಂತಕ್ಕೆ ಇದೀಗ ರಷ್ಯಾ ಇಂದು ನಾಂದಿ ಹಾಡಿದೆ. ಅದರಲ್ಲೂ ಉಕ್ರೇನ್ ಬಸ್ ಮೇಲೆ ದಾಳಿ ಮಾಡಿ ರಷ್ಯಾ ಮಿಲಿಟರಿ ದೊಡ್ಡ ತಪ್ಪು ಮಾಡಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಎಡವಟ್ಟು ಮಾಡಿಕೊಂಡ ರಷ್ಯಾ ಸೇನೆ?
ಉಕ್ರೇನ್ ದೇಶದ ಮೇಲೆ ರಷ್ಯಾ ಮಿಲಿಟರಿ ದಾಳಿಯನ್ನ ಇನ್ನಷ್ಟು ಹೆಚ್ಚು ಮಾಡುತ್ತಲೇ ಇದೆ. ರಷ್ಯಾ & ಉಕ್ರೇನ್ ನಡುವೆ ತಿಕ್ಕಾಟದ ಪರಿಣಾಮ ಈಗಾಗಲೇ ಲಕ್ಷ ಲಕ್ಷ ಜನರು ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪವು ಇದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ಈಗಾಗಲೇ ಯುರೋಪ್ ಸರ್ವನಾಶ ಆಗಿ ಹೋಗಿದೆ. ಇಷ್ಟೆಲ್ಲ ಗಲಭೆ ನಡೆದು ಹಿಂಸಾಚಾರ ಭುಗಿಲೆದ್ದರೂ ಯುದ್ಧ ನಿಲ್ಲಿಸಲು ರಷ್ಯಾ & ಉಕ್ರೇನ್ ಮಾತ್ರ ಒಪ್ಪಿಕೊಳ್ಳುತ್ತಿಲ್ಲ.
ಇಷ್ಟೆಲ್ಲದರ ನಡುವೆ, ಇಂದು ರಷ್ಯಾ ನಡೆಸಿರುವ ಡ್ರೋನ್ ದಾಳಿಯಲ್ಲಿ ಉಕ್ರೇನ್ ಬಸ್ ಉಡೀಸ್ ಆಗಿ 9 ನಾಗರಿಕರು ಮೃತಪಟ್ಟಿದ್ದಾರೆ ಎನ್ನುವ ಆರೋಪ ಅಕ್ಷರಶಃ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಮತ್ತೊಂದು ಕಡೆ ರಷ್ಯಾ ತನ್ನ ದೇಶದಲ್ಲಿ ಈ ರೀತಿಯಾಗಿ ಬಸ್ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ, ಉಕ್ರೇನ್ ಕೂಡ ಘೋರವಾದ ಅಟ್ಯಾಕ್ ಮಾಡಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಹಲ್‌ಚಲ್ ಎಬ್ಬಿಸಿದೆ.












Click it and Unblock the Notifications