Russia & Ukraine: ರಷ್ಯಾ ಮುಟ್ಟಿದರೆ ಉಕ್ರೇನ್ ಉಡೀಸ್? ಕಾರಣ ತಿಳಿಯಿರಿ
ರಷ್ಯಾ & ಉಕ್ರೇನ್ ನಡುವೆ 3ನೇ ವ್ಯಕ್ತಿಗಳು ಬಂದು ಫಿಟಿಂಗ್ ಇಡುತ್ತಿದ್ದಾರೆ ಎಂಬ ಆರೋಪ ಈ ಮೊದಲಿನಿಂದ ಕೂಡ ಕೇಳಿ ಬರುತ್ತಿತ್ತು. ಅದರಲ್ಲೂ ಸುಖಾಸುಮ್ಮನೆ ರಷ್ಯಾ & ಉಕ್ರೇನ್ ನಡುವೆ ಕಿರಿಕ್ ಶುರುವಾಗಿದ್ದೇ 3ನೇ ವ್ಯಕ್ತಿಗಳ ಕಿತಾಪತಿಯ ಕಾರಣಕ್ಕೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಈ ಸೂಕ್ಷ್ಮ ಸಂದರ್ಭದಲ್ಲಿ ಉಕ್ರೇನ್ ಈಗ ದೊಡ್ಡ ಎಡವಟ್ಟನ್ನ ಮಾಡಿ, 3ನೇ ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಿದ್ದಾಗಲೇ, ಮತ್ತೊಂದು ಕಡೆ ಉಕ್ರೇನ್ ಇಂತಹ ಎಡವಟ್ಟು ಮಾಡಲ್ಲ ಎಂಬ ಮಾತು ಕೂಡ ಬಲವಾಗುತ್ತಿವೆ. ಈ ಚರ್ಚೆಯ ನಡುವೆ ಯುರೋಪ್ ಖಂಡದಲ್ಲಿ ಏನಾಗುತ್ತಿದೆ? ಬನ್ನಿ ತಿಳಿಯೋಣ.

ಉಕ್ರೇನ್ ಬುಡ ಅಲುಗಾಡಿಸುತ್ತಿದೆ ರಷ್ಯಾ...
ರಷ್ಯಾ ಬಲಶಾಲಿ ದೇಶ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಯಾಕಂದ್ರೆ ರಷ್ಯಾದ ಮಿಲಿಟರಿ ಮಾತ್ರವಲ್ಲ ರಷ್ಯಾ ಆರ್ಥಿಕತೆ ಕೂಡ ಬಲವಾಗಿದೆ. ಹಾಗೇ ರಷ್ಯಾ ಈಗ ಅಭಿವೃದ್ಧಿ ಹೊಂದುತ್ತಿರುವ ವೇಗ ನೋಡಿದರೆ ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ರಷ್ಯಾ ಜಗತ್ತಿನ ನಂಬರ್ 01 ದೇಶವಾಗುತ್ತೆ ಎಂಬ ಮಾತನ್ನು ಹೇಳುತ್ತಿದ್ದಾರೆ ತಜ್ಞರು.
ಹೀಗಿದ್ದಾಗಲೇ ಉಕ್ರೇನ್ ಜೊತೆಗೆ ರಷ್ಯಾ ಯುದ್ಧ ಶುರುವಾಗಿ ಹೊಸ ಟೆನ್ಷನ್ ತಲೆದೂರಿದೆ. ಮತ್ತೊಂದು ಕಡೆ ಉಕ್ರೇನ್ ತನ್ನಲ್ಲಿ ಇರುವ ದೂರಗಾಮಿ ಮಿಸೈಲ್ ಅಂದ್ರೆ ಕ್ಷಿಪಣಿಗಳನ್ನು ಬಳಸುವ ಮೂಲಕ ರಷ್ಯಾ ವಿರುದ್ಧವೇ ದಾಳಿ ಮಾಡುತ್ತಾ? ಎಂಬ ಪ್ರಶ್ನೆ ಈಗ ಮೂಡಿದೆ. ಈ ಪ್ರಶ್ನೆ ಮೂಡಲು ಅಮೆರಿಕ ಅಧ್ಯಕ್ಷ ಬೈಡನ್ ಅವರ ಅದೊಂದು ನಿರ್ಧಾರ ಕಾರಣವಾಗಿದೆ.
ರಷ್ಯಾ ಮುಟ್ಟಿದರೆ ಉಕ್ರೇನ್ ಉಡೀಸ್?
ಅಂದಹಾಗೆ ಇಂತಹ ಅನುಮಾನ ಮೂಡಲು ಕಾರಣವಾಗಿದ್ದು ಅಮೆರಿಕದ ನಿರ್ಧಾರ. ಇಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ಗೆ ಮಹತ್ವದ ಸ್ವಾತಂತ್ರ್ಯ ನೀಡಿ ಆತಂಕ ಹುಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಯಾಕಂದ್ರೆ ಇದುವರೆಗೂ ರಷ್ಯಾ ವಿರುದ್ಧ ಉಕ್ರೇನ್ ದೂರಗಾಮಿ ಕ್ಷಿಪಣಿ ಬಳಸಿ ದಾಳಿ ಮಾಡಿಲ್ಲ. ಆದರೆ ದಿಢೀರ್ ಜೋ ಬೈಡನ್ ಅವರು ಪರ್ಮಿಷನ್ ಕೊಟ್ಟು, ಉಕ್ರೇನ್ ವಿರುದ್ಧ ದಾಳಿ ಮಾಡಲು ಹೇಳ್ತಿದ್ದಾರೆ. ಹೀಗಾಗಿ ಭಯ ಆವರಿಸಿದೆ. ಹಾಗಾದ್ರೆ ಉಕ್ರೇನ್ ಈಗ ರಷ್ಯಾ ವಿರುದ್ಧ ಕ್ಷಿಪಣಿ ಬಳಕೆ ಮಾಡುತ್ತಾ?
ಸ್ವಲ್ಪ ಎಡವಟ್ಟು ಮಾಡಿದರೂ ಧೂಳ್!
ಉಕ್ರೇನ್ ಸ್ಥಿತಿ ನೋಡಿ ಹೇಳುವುದಾದರೆ, ಉಕ್ರೇನ್ ಈಗ ರಷ್ಯಾ ವಿಚಾರದಲ್ಲಿ ದೊಡ್ಡದಾದ ಎಡವಟ್ಟು ಮಾಡಿಕೊಳ್ಳುವುದಿಲ್ಲ. ಯಾಕಂದ್ರೆ ಈ ಸಮಯದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಇಂತಹ ಎಡವಟ್ಟು ಹೆಜ್ಜೆ ಇಟ್ಟರೆ ಕಥೆ ಮುಗೀತು ಅಂತಾನೆ ಅರ್ಥ. ಯಾಕಂದ್ರೆ ಉಕ್ರೇನ್ ಒಂದು ಕ್ಷಿಪಣಿ ಬಳಕೆ ಮಾಡಿದರೆ ರಷ್ಯಾ ಸಾವಿರ ಕ್ಷಿಪಣಿ ಬಳಕೆ ಮಾಡುವಷ್ಟು ಶಕ್ತಿಶಾಲಿ. ಹೀಗಾಗಿ ಉಕ್ರೇನ್ ಕೂಡ ಅಳೆದು ತೂಗಿ ಮುಂದೆ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ.












Click it and Unblock the Notifications