ಉಕ್ರೇನ್ ಡ್ಯಾಂ ಬ್ಲಾಸ್ಟ್: ರಷ್ಯಾ ವಿರುದ್ಧ ಸೇಡಿಗೆ ಸೇಡು ಪಕ್ಕಾ?
ಕೀವ್: ಉಕ್ರೇನ್ ಡ್ಯಾಂ ಸ್ಫೋಟವಾಗಿ ಹತ್ತಾರು ಜನರು ಜೀವ ಬಿಟ್ಟಿದ್ದಾರೆ. ಲಕ್ಷಾಂತರ ಜನರು ಬೀದಿಗೆ ಬಿದ್ದು, ಲೆಕ್ಕವಿಲ್ಲದಷ್ಟು ಮನೆಗಳು ಜಲಾಶಯದ ನೀರಿನಲ್ಲಿ ಮುಳುಗಿ ಹೋಗಿವೆ. ಈ ಪರಿಸ್ಥಿತಿಯಲ್ಲಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ಸೇನೆ ಸಿದ್ಧವಾಗಿದೆ ಅನ್ನೋ ಮಾಹಿತಿ ಸಂಚಲನ ಸೃಷ್ಟಿಸಿದ್ದು, ರಷ್ಯಾ & ಉಕ್ರೇನ್ ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗಿದೆ.
ದಿಢೀರ್ ಖೆರ್ಸನ್ ಪ್ರಾಂತ್ಯದಲ್ಲಿ ಡ್ಯಾಂ ಸ್ಫೋಟಗೊಂಡ ಪರಿಣಾಮ ಲಕ್ಷಾಂತರ ಜನರು ಸಾವಿನ ಸುಳಿಗೆ ಸಿಲುಕಿದ್ದರು. ಕಖೌಕಾ ಜಲಾಶಯದ ನೀರು ನೇರವಾಗಿ ಸಾವಿರಾರು ಕಿಲೋಮೀಟರ್ ಸುತ್ತಮುತ್ತಲ ಪ್ರದೇಶಕ್ಕೆ ನುಗ್ಗಿತ್ತು. ಅಲ್ದೆ ಜೀವ ಉಳಿಸಿಕೊಳ್ಳಲು ಜನ ಮನೆ, ವಸ್ತು, ಊರು ಬಿಟ್ಟು ಹೋಗಿದ್ದಾರೆ. 4ರಿಂದ 5 ಮೀಟರ್ ಎತ್ತರಕ್ಕೆ ನೀರು ನಿಂತುಕೊಂಡಿದೆ. ಇದೇ ಹೊತ್ತಲ್ಲಿ ರಷ್ಯಾ ವಿರುದ್ಧ ಪ್ರತಿದಾಳಿ ನಡೆಸಿ ತನ್ನ ಸೇಡು ತೀರಿಸಿಕೊಳ್ಳಲು ಉಕ್ರೇನ್ ಮುಂದಾಗಿದೆಯಂತೆ. ಅದು ಹೇಗೆ? ರಷ್ಯಾ ಮೇಲೆ ಉಕ್ರೇನ್ ಸೇನೆ ಹೇಗೆ ದಾಳಿ ಮಾಡಬಹುದು? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ (Russia Ukraine War).

ಕೋಳಿ ಜಗಳವೇ ಈಗ ಭೀಕರ ಯುದ್ಧ!
ಕೋಳಿ ಜಗಳದಂತೆ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಅದರಲ್ಲೂ ಕಳೆದ ಕೆಲ ವಾರಗಳಿಂದ ರಷ್ಯಾ ಮತ್ತು ಉಕ್ರೇನ್ ವಿನಾಶಕಾರಿ ಅಸ್ತ್ರಗಳನ್ನ ಬಳಸಿ ಒಬ್ಬರ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಜೂನ್ 6ರ ಮಧ್ಯ ರಾತ್ರಿ ವೇಳೆ ಭೀಕರ ಬಾಂಬ್ & ಸ್ಫೋಟಕ ಬಳಸಿ ಖೆರ್ಸನ್ ಪ್ರಾಂತ್ಯದ ಕಖೌಕಾ ಡ್ಯಾಂ ಬ್ಲಾಸ್ಟ್ ಮಾಡಿದ್ದರು. ಈ ಘಟನೆ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವೆ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋದ ಸಹಾಯ ಪಡೆದು ರಷ್ಯಾ ಮೇಲೆ ಉಕ್ರೇನ್ ಡೆಡ್ಲಿ ಅಟ್ಯಾಕ್ ನಡೆಸೋದು ಪಕ್ಕಾ ಅನ್ನೋ ಮಾಹಿತಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ರಷ್ಯಾದ ಯಾವ ಭಾಗ ಉಕ್ರೇನ್ ಸೇನೆಯ ಮೊದಲ ಟಾರ್ಗೆಟ್? ಮುಂದೆ ಓದಿ.
ರಷ್ಯಾ ರಾಜಧಾನಿ ಉಕ್ರೇನ್ ಸೇನೆಗೆ ಟಾರ್ಗೆಟ್?
ನ್ಯಾಟೋ ಹಾಗೂ ಅಮೆರಿಕ ಸೇನೆ ಉಕ್ರೇನ್‌ಗೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಉಡುಗೊರೆ ಕೊಟ್ಟಿವೆ. ಲಕ್ಷಾಂತರ ಕೋಟಿ ರೂಪಾಯಿ ವೆಚ್ಚದ ಶಸ್ತ್ರಾಸ್ತ್ರವನ್ನ ಉಕ್ರೇನ್ ಸೇನೆ ಈಗಾಗಲೇ ನ್ಯಾಟೋ ಮತ್ತು ಅಮೆರಿಕದಿಂದ ಪಡೆದಿದೆ. ಇದೀಗ ಅದೇ ಅಸ್ತ್ರಗಳನ್ನು ಬಳಸಿ ಭೀಕರ ದಾಳಿ ನಡೆಸಲಿದೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ರಷ್ಯಾ ರಾಜಧಾನಿ ಉಕ್ರೇನ್‌ನ ಮೊದಲ ಟಾರ್ಗೆಟ್. ಕಳೆದ ತಿಂಗಳು ರಷ್ಯಾ ಅಧ್ಯಕ್ಷರ ಮನೆ ಮೇಲೆ ಈ ರೀತಿ ಡೆಡ್ಲಿ ಅಟ್ಯಾಕ್ ನಡೆದಿತ್ತು. ಇದೀಗ ಮತ್ತೆ ಅಂತಹದ್ದೇ ದಾಳಿಯ ಭಯ ಮನೆಮಾಡಿದೆ.

ಅಲರ್ಟ್ ಆಗಿರುವ ರಷ್ಯಾ ಸೇನೆ!
ಉಕ್ರೇನ್ ಡ್ಯಾಂ ಬ್ಲಾಸ್ಟ್ ಬಗ್ಗೆ ಯುರೋಪ್ ಒಕ್ಕೂಟ ಮೊದಲು ಅಸಮಾಧಾನ ಹೊರಹಾಕಿತ್ತು. ಆ ಬಳಿಕ ವಿಶ್ವಸಂಸ್ಥೆ ಕೂಡ ವಾರ್ನಿಂಗ್ ನೀಡಿತ್ತು. ಅಮೆರಿಕ ಈಗಾಗಲೇ ಉಕ್ರೇನ್‌ಗೆ ಇನ್ನಷ್ಟು ವೆಪನ್ಸ್ ಸಪ್ಲೈ ಮಾಡಲು ಮುಂದಾಗಿರುವ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ರಷ್ಯಾ ವಿರುದ್ಧ ಶತ್ರುಗಳು ಒಂದಾಗಿದ್ದಾರೆ ಅನ್ನೋದು ರಷ್ಯಾ ಆರೋಪ. ಇದೇ ಕಾರಣಕ್ಕೆ ರಷ್ಯಾ ಮೇಲೆ ಪ್ರತಿಕಾರದ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ರಷ್ಯಾ ಸೇನೆ ತನ್ನ ದೇಶದ ಡ್ಯಾಂಗಳು ಮತ್ತು ಸೂಕ್ಷ್ಮ ಸ್ಥಳಗಳ ಮೇಲೆ ಕಣ್ಣಿಟ್ಟು ಕಾಯುತ್ತಿದೆ. ಅಲ್ಲದೆ ರಷ್ಯಾ ರಾಜಧಾನಿ ಮಾಸ್ಕೋ ಇದೀಗ 7 ಸುತ್ತಿನ ಕೋಟೆಯಾಗಿ ಬದಲಾಗಿದೆ.

ಹಾಗೇ ಕೆಲ ವರದಿಗಳ ಪ್ರಕಾರ ರಷ್ಯಾ ಮೇಲೆ ಮಿಸೈಲ್ & ಡ್ರೋನ್ ದಾಳಿಗೆ ಉಕ್ರೇನ್ ಸೇನೆಯು ಸನ್ನದ್ಧವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಉಕ್ರೇನ್ ಪಡೆ ರಷ್ಯಾ ಮೇಲೆ ಎರಗಬಹುದು. ಈ ಮೂಲಕ ಡ್ಯಾಂ ಸ್ಫೋಟಗೊಂಡ ಸಿಟ್ಟಿಗೆ ರಿವೇಂಜ್ ತೆಗೆದುಕೊಳ್ಳಲು ಕಾಯುತ್ತಿವೆ. ಆದರೆ ರಷ್ಯಾ ಸೇನೆ ಇದರ ಬಗ್ಗೆ ಮಾಹಿತಿ ಪಡೆದ ಕಾರಣ ರಷ್ಯಾ ಗಡಿ ಭಾಗದ ಹಳ್ಳಿಗಳಲ್ಲಿ ಹೈಅಲರ್ಟ್ ಘೋಷಿಸಿದೆ. ಇದರ ಜೊತೆಗೆ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನೂ ಸನ್ನದ್ಧವಾಗಿ ಇರಿಸಿದ್ದು, ಉಕ್ರೇನ್ ದಾಳಿ ನಡೆಸಿದರೆ ಅದಕ್ಕೆ ತಕ್ಕ ತಿರುಗೇಟು ನೀಡಲು ಸನ್ನದ್ಧವಾಗಿದೆ. ಆದರೆ ಈ ಇಬ್ಬರು ನಾಯಕರ ಕಾದಾಟದಲ್ಲಿ ಅಮಾಯಕರ ಪ್ರಾಣ ಹೋಗುತ್ತಿರುವುದು ದುರಂತವೇ ಸರಿ.












Click it and Unblock the Notifications