Russia & Ukraine: ರಷ್ಯಾ ತೈಲ ಸಂಗ್ರಹ ಘಟಕದ ಮೇಲೆ ಉಕ್ರೇನ್ ದಿಢೀರ್ ದಾಳಿ

ಉಕ್ರೇನ್ ರೊಚ್ಚಿಗೆದ್ದಿದೆ, ಹೀಗೆ ರೊಚ್ಚಿಗೆದ್ದು ಸುಖಾಸುಮ್ಮನೆ ಇಲ್ಲದ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದೆ. ರಷ್ಯಾ ತನ್ನ ವಿರುದ್ಧ ದಾಳಿ ಮಾಡಿದ ನಂತರ ಉಕ್ರೇನ್ ಕೂಡ ಹೀಗೆ ಸೇಡಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿತ್ತು. ಆದ್ರೆ ಕೆಲವು ದಿನಗಳಿಂದ ಡೆಡ್ಲಿ ಅಟ್ಯಾಕ್ ಮಾಡ್ತಾ ಇರುವ ಉಕ್ರೇನ್ ಸೈನಿಕರು ರಷ್ಯಾಗೆ ತೀವ್ರ ಆಘಾತ ನೀಡುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಷ್ಯಾ ತೈಲ ಸಂಗ್ರಹ ಘಟಕವನ್ನೇ ಧೂಳ್ ಧೂಳ್ ಮಾಡಿದೆ ಉಕ್ರೇನ್ ಸೇನೆ.

ಹೌದು, ಪಾಶ್ಚಿಮಾತ್ಯ ದೇಶಗಳ ಬಳಿ ನೆರವು ಪಡೆದು ಮುಂದೆ ನುಗ್ಗುತ್ತಿರುವ ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಘೋರ ದಾಳಿ ನಡೆಸುತ್ತಿದೆ. ರಷ್ಯಾ & ಉಕ್ರೇನ್ ಈ ರೀತಿಯಾಗಿ ಭಾರಿ ಘೋರ ಯುದ್ಧಕ್ಕೆ ನಿಂತಿವೆ. ಒಂದು ಕಡೆ ಉಕ್ರೇನ್ ದಾಳಿ ಮಾಡಿದೆ ಅಂತಾ ರಷ್ಯಾ ಅಟ್ಯಾಕ್ ಮಾಡುತ್ತಿದೆ, ಇನ್ನೊಂದು ಕಡೆ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್ ಅಟ್ಯಾಕ್ ಮಾಡಿ ಭಯ ಹುಟ್ಟಿಸುತ್ತಿದೆ. ಇದೀಗ ರಷ್ಯಾ ಸೇನೆಯ ಪರಮಾಣು ಪಡೆಗಳನ್ನು ಬೆಂಬಲಿಸುವ ತೈಲ ಸಂಗ್ರಹದ ಮೇಲೆಯೇ ಉಕ್ರೇನ್ ದಾಳಿ ಮಾಡಿದೆಯಂತೆ!

Ukraine Launches Attack on Oil Depot Supporting Russian Nuclear Forces

ರಷ್ಯಾಗೆ ಆಘಾತ ನೀಡಿದ ಉಕ್ರೇನ್?

ಇದೀಗ ಹೊರಬಿದ್ದ ಮಾಹಿತಿಗಳ ಪ್ರಕಾರ, ಉಕ್ರೇನ್ ಸೇನೆ ತುಂಬಾ ದೊಡ್ಡ ಮಟ್ಟದಲ್ಲಿಯೇ ರಷ್ಯಾ ತೈಲ ಸಂಗ್ರಹದ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಘೋರವಾಗುತ್ತಿದೆ. ಹಾಗೇ ಯುರೋಪ್ ಸೇರಿದಂತೆ ಇಡೀ ಜಗತ್ತಿನಲ್ಲಿ ಈ ಯುದ್ಧ ಭಯ ಹೆಚ್ಚಾಗುವಂತೆ ಮಾಡುತ್ತಿದೆ. ರಷ್ಯಾ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರ ಹೊರಗೆ ತೆಗೆಯಲು ಚಿಂತಿಸುತ್ತಿರುವ ಸಮಯದಲ್ಲೇ ಉಕ್ರೇನ್ ಈ ರೀತಿ ವರ್ತಿಸಿದೆ.

ಉಕ್ರೇನ್ ಅಧ್ಯಕ್ಷನಿಗೆ ಭಯ ಭಯ!

ಇಸ್ರೇಲ್ & ಗಾಜಾ ಯುದ್ಧದಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಅಮೆರಿಕ, ರಷ್ಯಾ & ಉಕ್ರೇನ್ ಯುದ್ಧದಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶನ ಮಾಡುತ್ತಿಲ್ಲ. ಯಾಕಂದ್ರೆ ಜೋ ಬೈಡನ್ ಅಮೆರಿಕ ಆಡಳಿತ ನಡೆಸುವ ಸಮಯದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿತ್ತು. ಹೀಗಿದ್ದಾಗಲೇ, ಡೊನಾಲ್ಡ್ ಟ್ರಂಪ್ ಅವರು ಈ ಯುದ್ಧವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ.

ಅತ್ತ ಜೋ ಬೈಡನ್ ಇಷ್ಟುದಿನ ಉಕ್ರೇನ್‌ಗೆ ಬೆಂಬಲ ನೀಡಿದ್ದರು. ಆದರೆ ಈಗ ಅವರು ಅಧಿಕಾರ ಬಿಟ್ಟು ಹೋಗುತ್ತಿದ್ದಾರೆ. ಸುಮಾರು 5,00,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈ ಯುದ್ಧದ ನೆರವಿಗೆ ಅಂತಾ ಉಕ್ರೇನ್‌ಗೆ ನೀಡಲಾಗಿದೆ. ಜೋ ಬೈಡನ್ ಸರ್ಕಾರ ನೀಡಿರುವ ಹಣ ಈಗ ಖಾಲಿ ಆಗಿದ್ದು, ಉಕ್ರೇನ್ ನರಳುತ್ತಿದೆ. ಇದೇ ಸಮಯದಲ್ಲಿ ಜೋ ಬೈಡನ್ ಸರ್ಕಾರವು ಕೂಡ ಜಾಗ ಖಾಲಿ ಮಾಡುತ್ತಿದ್ದು ಟ್ರಂಪ್ ಆಡಳಿತ ಶುರುವಾಗಲಿದೆ. ಇದೇ ಕಾರಣಕ್ಕೆ ಭಯ ಭಯದಲ್ಲೇ ನರಳುತ್ತಿದೆ ಉಕ್ರೇನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+