Russia & Ukraine: ಉಕ್ರೇನ್‌ನಲ್ಲಿ ಕರೆಂಟ್ ಢಮಾರ್, ರಷ್ಯಾ ದಾಳಿಗೆ ನಡುಕ!
ಉಕ್ರೇನ್ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ಯಾಕೆ ಅಂದ್ರೆ ರಷ್ಯಾ ಕೊಡುತ್ತಿರುವ ಪ್ರತಿ ಏಟಿಗೂ ಉತ್ತರ ಸಿಗದೆ ತತ್ತರಿಸಿ ಹೋಗುತ್ತಿದೆ ಉಕ್ರೇನ್. ರಷ್ಯಾ ಸೇನೆ ಪಕ್ಕಾ ಪ್ಲಾನಿಂಗ್ ಮಾಡಿ ಉಕ್ರೇನ್ ನೆಲದ ಮೇಲೆ ಅಟ್ಯಾಕ್ ಮಾಡುತ್ತಿದೆ. ಹೀಗಿದ್ದಾಗ ಚಳಿಗಾಲದ ಸಮಯದಲ್ಲಿ ಉಕ್ರೇನ್‌ನ ವಿದ್ಯುತ್ ಮೂಲ ಸೌಕರ್ಯಗಳ ಮೇಲೆ, ದಾಳಿ ಮಾಡುವ ಕೆಲಸವನ್ನು ರಷ್ಯಾ ಅಚ್ಚುಕಟ್ಟಾಗಿ ಮುಂದುವರಿಸಿದೆ. ಹಾಗಾದರೆ ಇದೀಗ ರಷ್ಯಾ ನಡೆಸಿದ ದಾಳಿಯಲ್ಲಿ ಏನೆಲ್ಲಾ ಅನಾಹುತ ಸಂಭವಿಸಿದೆ? ಬನ್ನಿ ತಿಳಿಯೋಣ.
ಉಕ್ರೇನ್ ಸೇನೆ ರಷ್ಯಾ ಎದುರು ಇವತ್ತು ಶರಣಾಗುತ್ತೋ? ನಾಳೆ ಶರಣಾಗುತ್ತೋ? ಅಂತಾ ಜಗತ್ತೇ ಕಾಯುತ್ತಿದೆ. ಯಾಕಂದ್ರೆ ಈಗಾಗಲೇ ಲಕ್ಷಾಂತರ ಜನರನ್ನು ಕಳೆದುಕೊಂಡು ಪರದಾಡುತ್ತಿರುವ ಉಕ್ರೇನ್ ದೇಶಕ್ಕೆ, ಬಲಿಷ್ಠವಾದ ರಷ್ಯಾ ಸೇನೆಯನ್ನು ಎದುರಿಸುವ ಶಕ್ತಿ ಇಲ್ಲವಾಗಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿದ್ದರೂ ಉಕ್ರೇನ್ ಮಾತ್ರ ಶರಣಾಗುವ ಮಾತನ್ನು ಆಡುತ್ತಿಲ್ಲ. ಈ ಸಮಯದಲ್ಲೇ ರಷ್ಯಾ ಕೂಡ ತನ್ನ ಬಳಿ ಇರುವ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಿಕೊಂಡು ದಾಳಿ ಮುಂದುವರಿಸಿದೆ. ಅದೇ ರೀತಿ ರಷ್ಯಾ ಮಾಡಿದ ಡ್ರೋನ್ ದಾಳಿಗೆ ಉಕ್ರೇನ್ ವಿದ್ಯುತ್ ಘಟಕಗಳು ಶೇಕ್ ಆಗಿವೆ.

ಕರೆಂಟ್ ಇಲ್ಲ, ಹೀಟರ್ ಸಿಗುತ್ತಿಲ್ಲ!
ಉಕ್ರೇನ್ ದೇಶದ ಮೈಕೊಲೈವ್ ಪ್ರದೇಶದ ಮೇಲೆ ರಷ್ಯಾ ಮಿಲಿಟರಿ ಮತ್ತೊಮ್ಮೆ ಡೆಡ್ಲಿ ಡ್ರೋನ್ ಅಟ್ಯಾಕ್ ಮಾಡಿದೆ. ಈ ದಾಳಿಯ ಪರಿಣಾಮ ಮೈಕೊಲೈವ್ ಪ್ರದೇಶದಲ್ಲಿ ವಿದ್ಯುತ್ ಮೂಲ ಸೌಕರ್ಯವೇ ಹಾಳಾಗಿ ಹೋಗಿದೆ. ದಿಢೀರ್ ಕರೆಂಟ್ ಕೂಡ ಕೈಕೊಟ್ಟಿದ್ದು, ಸುಮಾರು 1 ಲಕ್ಷ ಜನರು ಚಳಿಯಲ್ಲಿ ಹೀಟರ್ ಸೌಕರ್ಯ ಸಿಗದೆ ನಡುಗುವ ಸ್ಥಿತಿ ಎದುರಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಆರೋಪ ಮಾಡಿದ್ದಾರೆ. ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡುವಾಗಲೇ ಈ ರೀತಿ ಘಟನೆ ನಡೆದಿದೆ.
ಯುದ್ಧ ಯಾವಾಗ ನಿಲ್ಲಬಹುದು?
ರಷ್ಯಾ ಸೇನೆ ಬಲಿಷ್ಠವಾಗಿದ್ದು, ಉಕ್ರೇನ್‌ನ ಮಿಲಿಟರಿಗೆ ಹೋಲಿಕೆ ಮಾಡಿದರೆ ರಷ್ಯಾ ಮಿಲಿಟರಿ ತುಂಬಾ ಸ್ಟ್ರಾಂಗ್. ಇದೇ ಕಾರಣಕ್ಕೆ ರಷ್ಯಾ ಸೇನೆ ಕೊಡುತ್ತಿರುವ ಪ್ರತಿ ಏಟಿಗೂ ಉಕ್ರೇನ್ ನಲುಗಿ ಹೋಗಿದೆ. ಪರಿಸ್ಥಿತಿ ಭಯ ಹುಟ್ಟಿಸುತ್ತಿದ್ದು, ಮುಂದೆ ಪರಮಾಣು ಬಾಂಬ್ ಬಳಕೆ ಆಗುತ್ತಾ? ಅನ್ನೋ ಡೌಟ್ ಕೂಡ ಕಾಡುತ್ತಿದೆ. ಹಾಗೇ ಜಾಗತಿಕ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಭಾರಿ ದೊಡ್ಡ ಚರ್ಚೆ ಕೂಡ ಆರಂಭವಾಗಿದೆ. ಒಟ್ನಲ್ಲಿ ಆದಷ್ಟು ಬೇಗ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಬೇಕು ಎಂಬುದೇ ಜಗತ್ತಿನ ಆಶಯ.












Click it and Unblock the Notifications