India & Ukraine: ಬಂದ.. ಬಂದ.. ಬಾಗಿಲಿಗೆ ಬಂದ ಶತ್ರು.. ಪುಟಿನ್ ಹೆಣೆದ ಬಲೆಗೆ ಸಿಲುಕಿದ ಉಕ್ರೇನ್ ಮಿಲಿಟರಿ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೀಗ ಮತ್ತೊಮ್ಮೆ ಜಗತ್ತಿನಲ್ಲಿ ಭಯ ಹುಟ್ಟಿಸಿದ್ದಾರೆ. ಉಕ್ರೇನ್ ವಿರುದ್ಧ ಯುದ್ಧ ಸಾರಿ ಜಗತ್ತಿಗೆ ನಡುಕ ತರಿಸಿದ್ದ ವ್ಲಾದಿಮಿರ್ ಪುಟಿನ್ ಬೇರೆಯದ್ದೇ ಸ್ಕೆಚ್ ಹಾಕಿ, ಉಕ್ರೇನ್ ಸೇನೆಯನ್ನ ರಷ್ಯಾ ಒಳಗೆ ನುಗ್ಗುವಂತೆ ಮಾಡಿದ್ದಾರೆ ಎಂಬ ಭಾರೀ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ರಷ್ಯಾ ಒಳಗೆ ಉಕ್ರೇನ್ ಮಿಲಿಟರಿ ಬರೋದಕ್ಕೆ ಬಿಟ್ಟು ಪುಟಿನ್ ಹೆಣೆದಿರುವ ಬಲೆ ಎಂತಹದ್ದು ಗೊತ್ತಾ? ಬನ್ನಿ ತಿಳಿಯೋಣ.
ಉಕ್ರೇನ್ & ರಷ್ಯಾ ಯುದ್ಧ ಕ್ಷಣಕ್ಕೊಂದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಈ ಯುದ್ಧ ಭಾರಿ ಗಂಭೀರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಒಂದ್ಕಡೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರ ನಿಂತಿದ್ದರೆ, ಮತ್ತೊಂದು ಕಡೆಯಲ್ಲಿ ರಷ್ಯಾ ಪರವಾಗಿ ಚೀನಾ ನಿಂತಿದೆ. ಅಲ್ಲದೆ ಉತ್ತರ ಕೊರಿಯಾ ಕೂಡ ಸಾಥ್ ನೀಡುತ್ತಿದ್ದು, ಹೀಗಿದ್ದರೂ ಉಕ್ರೇನ್ ಸೇನೆ ದಿಢೀರ್ ಅಂತಾ ರಷ್ಯಾ ಒಳಗಡೆ ನುಗ್ಗಿಬಿಟ್ಟಿದೆ. ಅರೆರೆ ಇದರಿಂದ ಉಕ್ರೇನ್ ಸೇನೆಗೆ ಏನು ನಷ್ಟ ಅಂದ್ರಾ? ಪುಟಿನ್ ಹೆಣೆದಿರುವ ಬಲೆ ಬಗ್ಗೆ ಇದೀಗ ತಿಳಿಯೋಣ ಬನ್ನಿ.

ಉಕ್ರೇನ್ ನಾಶಕ್ಕೆ ಪುಟಿನ್ ಬಲೆ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ನೇರವಾಗಿಯೇ ತಿಕ್ಕಾಟ ನಡೆಯುತ್ತಿದೆ. ಅತ್ತ ಪಾಶ್ಚಿಮಾತ್ಯ ದೇಶಗಳು ಕೂಡ ಉಕ್ರೇನ್ ಬೆನ್ನಿಗೆ ನಿಲ್ಲುವಂತೆ ಕಂಡರೂ ಪರೋಕ್ಷವಾಗಿ ರಷ್ಯಾ ವಿರುದ್ಧ ಹಗೆ ಸಾಧಿಸುತ್ತಿವೆ ಎಂಬ ಆರೋಪ ಇದೆ. ಹೀಗೆ ಪಾಶ್ಚಿಮಾತ್ಯ ದೇಶಗಳ ಲಕ್ಷಾಂತರ ಕೋಟಿ ಸಹಾಯದ ಹೊರತಾಗಿ ಕೂಡ ಉಕ್ರೇನ್ ಸೇನೆಗೆ ಈ ಯುದ್ಧದಲ್ಲಿ ಭಾರಿ ಹಿನ್ನಡೆ ಆಗಿತ್ತು. ಆದರೆ ಇದೀಗ ದಿಢೀರ್ ರಷ್ಯಾ ವಿರುದ್ಧ ಉಕ್ರೇನ್ ಸೇನೆ ತಿರುಗಿಬಿದ್ದಿದೆ, ಅಲ್ಲದೆ ರಷ್ಯಾ ನೆಲದ ಒಳಗೆ ನುಗ್ಗುವ ಮೂಲಕ ಸಾಧನೆ ಮಾಡುತ್ತಿದೆ ಅಂತಾ ಇಡೀ ಜಗತ್ತು ನಂಬಿ ಕೂತಿತ್ತು. ಆದರೆ ಆಗುತ್ತಿರುವುದೇ ಬೇರೆ!
ಶತ್ರುಗಳನ್ನ ಮುಗಿಸುತ್ತಿದೆಯಾ ರಷ್ಯಾ?
ಜಗತ್ತಿನಲ್ಲೇ ರಷ್ಯಾದ ಬಳಿ ಇರುವಷ್ಟು ಭೂಮಿ ಯಾವುದೇ ದೇಶದ ಬಳಿಯೂ ಇಲ್ಲ ಬಿಡಿ. ರಷ್ಯಾ ದೊಡ್ಡ ದೇಶ, ಹೀಗಾಗಿ ರಷ್ಯಾ ಒಳಗೆ ನುಸುಳುವುದು ಸುಲಭ ಅಂದುಕೊಂಡರೆ ಆ ನಿರ್ಧಾರ ಕನಸಾಗಿಯೇ ಉಳಿಯುತ್ತದೆ. ಯಾಕಂದ್ರೆ ರಷ್ಯಾ ದೇಶ ಎಷ್ಟೇ ದೊಡ್ಡದಾಗಿ ಅಂದ್ರೆ ವಿಶಾಲವಾಗಿ ಇದ್ದರೂ ಅದನ್ನು ಕಾಪಾಡಿಕೊಂಡು ಬರುವುದು ಅಲ್ಲಿನ ನಾಯಕರಿಗೆ ಗೊತ್ತು.
ಅದ್ರಲ್ಲೂ ರಷ್ಯಾ ಗಡಿಯಲ್ಲಿ ಭಾರಿ ಬಿಗಿ ಭದ್ರತೆ ಇರುತ್ತದೆ. ಹೀಗಿದ್ದಾಗ ಉಕ್ರೇನ್ ಮಿಲಿಟರಿ ನುಗ್ಗಿ ನುಗ್ಗಿ ರಷ್ಯಾ ಒಳಗೆ ಬಂದರೂ ರಷ್ಯಾ ಸುಮ್ಮನೆ ಕೂತಿದೆಯಾ? ಇಲ್ಲ ಬಿಡಿ, ಯಾಕೆ ಅಂದ್ರೆ ಈಗ ಉಕ್ರೇನ್ ಸೇನೆಯನ್ನ ರಷ್ಯಾ ಗಡಿಯ ಒಳಗೆ ಕರೆಸಿಕೊಂಡು ಹೊಡೆದು ಹಾಕುವ ಸ್ಕೆಚ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಈಗ ಆತಂಕ ಕೂಡ ಎದುರಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದಲ್ಲಿ ಯುರೋಪ್ ದೇಶಗಳು ಈಗ ನಡುಗುತ್ತಿವೆ.












Click it and Unblock the Notifications