Russia & Ukraine: ಒಂದೇ ಏಟಿಗೆ ಉಕ್ರೇನ್ ಕಥೆ ಮುಗಿಸಲು ರಷ್ಯಾ ಸೇನೆಯ ಪ್ಲಾನ್?

ರಷ್ಯಾ ಇದೀಗ ಉಕ್ರೇನ್‌ಗೆ ಕೊಡುತ್ತಿರುವ ಒಂದೊಂದು ಏಟು ಕೂಡ ಅಲ್ಲಿನ ಜನರ ಸಮೇತ ರಾಜಕಾರಣಿಗಳು ಕೂಡ ನಲುಗಿ ಹೋಗುವಂತೆ ಮಾಡುತ್ತಿದೆ. ರಷ್ಯಾ & ಉಕ್ರೇನ್ ಘೋರವಾದ ಯುದ್ಧ ನಡೆಸುತ್ತಿದ್ದು, ಇದರ ಪರಿಣಾಮ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ಕೂಡ ಕೈಜೊಡಿಸಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗುವಂತೆ ಆಗಿದೆ. ಹಾಗಾದ್ರೆ, ಒಂದೇ ಏಟಿಗೆ ಉಕ್ರೇನ್ ಕಥೆ ಮುಗಿಸಲು ರಷ್ಯಾ ಸೇನೆ ಪ್ಲಾನ್ ಹಾಕಿದೆಯಾ?

ಉಕ್ರೇನ್‌ಗೆ ರಷ್ಯಾ ಇದುವರೆಗೂ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ, ಅದರಲ್ಲೂ ಯುದ್ಧ ಮೊದಲು ಆರಂಭವಾಗಿದ್ದು ಇದೇ ಉಕ್ರೇನ್ ಮಾಡಿದ ಎಡವಟ್ಟಿನ ಪರಿಣಾಮ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ತಿಕ್ಕಾಟ ಕೂಡ ಜೋರಾಗಿದ್ದು, ಉಕ್ರೇನ್‌ನ ಜನರು ಕೂಡ ಈ ಬಗ್ಗೆ ಚಿಂತೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ. ಉಕ್ರೇನ್ ಅಧ್ಯಕ್ಷರ ಎಡವಟ್ಟೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣ ಎನ್ನುವ ಗಂಭೀರ ಆರೋಪಗಳು ಇವೆ. ಹೀಗಿದ್ದಾಗಲೇ, ರಷ್ಯಾ ಕೂಡ ಉಕ್ರೇನ್ ಸೇನೆ & ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಇದೇ ನಿರ್ಧಾರ ಇದೀಗ ಭಯ ಭಯ ಹುಟ್ಟು ಹಾಕುತ್ತಿದ್ದು, ಮುಂದೆ ಏನಾಗುತ್ತೋ...

Ukraine Is In Fear About Heavy Attack From The Russia After New Type Missiles Used In The War

ಉಕ್ರೇನ್ ದೇಶದ ಪರಿಸ್ಥಿತಿ ಹೀನಾಯ!

ಹೌದು, ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಯಾವುದೇ ಕಾರಣಕ್ಕೂ ರಷ್ಯಾ ವಿರುದ್ಧ ಉಕ್ರೇನ್ ಸೇನೆ ಗೆಲುವು ಕಾಣಲು ಆಗಲ್ಲ ಎನ್ನಬಹುದು. ಯಾಕಂದ್ರೆ ರಷ್ಯಾ ತುಂಬಾ ಬಲಿಷ್ಠವಾಗಿದೆ & ಅಷ್ಟೇ ಗಟ್ಟಿಯಾಗಿ ದಾಳಿ ಕೂಡ ನಡೆಸುತ್ತಿದೆ. ಇಂತಹ ಸಮಯದಲ್ಲಿ ಕೂಡ ಉಕ್ರೇನ್ & ಆ ದೇಶದ ಅಧ್ಯಕ್ಷ, ರಷ್ಯಾ ಜೊತೆಗೆ ಮಾತುಕತೆ ಮಾಡಿ ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ. ಈ ಕಾರಣಕ್ಕೆ ಇದೀಗ ಉಕ್ರೇನ್ ಮೇಲೆ ಪರಮಾಣು ಬಾಂಬ್ ದಾಳಿಗೆ ರಷ್ಯಾ ಚಿಂತನೆ ನಡೆಸಿದೆಯಾ? ಎಂಬ ಪ್ರಶ್ನೆ ಮೂಡಿದೆ.

ರಷ್ಯಾ ಕಠಿಣ ನಿರ್ಧಾರ ಕೈಗೊಳ್ಳುತ್ತಾ?

ಇಂತಹ ಅನುಮಾನ ಮೂಡಲು ಮತ್ತೊಂದು ಕಾರಣ ಏನು ಅಂದ್ರೆ, ರಷ್ಯಾ ಬಳಿ ಬಲಿಷ್ಠ ಪರಮಾಣು ಅಸ್ತ್ರಗಳು ಇವೆ. ಈಗಾಗಲೇ ಹೊಸ ರೀತಿಯ ಹೈಪರ್‌ಸಾನಿಕ್ ಕ್ಷಿಪಣಿ ಬಳಸಿದ ರಷ್ಯಾ, ಉಕ್ರೇನ್ ವಿರುದ್ಧ ದಾಳಿ ಮಾಡಿದೆ. ಅದೇ ರೀತಿ ಇದೀಗ ಪರಮಾಣು ಅಸ್ತ್ರಗಳನ್ನೂ ಬಳಸಿ, ಭೀಕರ ದಾಳಿ ನಡೆಸುತ್ತಾ? ಎಂಬ ಅನುಮಾನ ಮೂಡಿದೆ. ಅಲ್ಲದೆ ಇದು ಜಗತ್ತಿನ ಪ್ರತಿಯೊಂದು ದೇಶಕ್ಕೂ ಅಪಾಯ ತರುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ವಿಚಾರದಲ್ಲಿ ರಷ್ಯಾ ತಪ್ಪು ಮಾಡಲ್ಲ, ಆದರೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂಬ ಭಾರಿ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+