Russia-Ukraine War: ಉಕ್ರೇನ್ ಬುಡಕ್ಕೆ ಮತ್ತೆ ಬತ್ತಿ ಇಟ್ಟ ರಷ್ಯಾ ಮಿಲಿಟರಿ?
ರಷ್ಯಾ & ಉಕ್ರೇನ್ ಯುದ್ಧಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುತ್ತಿಲ್ಲ, ತಾರ್ಕಿಕ ಅಂತ್ಯ ಬಿಟ್ಟುಬಿಡಿ ರಷ್ಯಾ & ಉಕ್ರೇನ್ ಯುದ್ಧ ಯಾವಾಗ ನಿಲ್ಲುತ್ತದೆ? ಎಂಬ ಒಂದು ಸಣ್ಣ ಮುನ್ಸೂಚನೆ ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧದ ಹಿನ್ನೆಲೆ ಈಗಾಗಲೇ ಜಗತ್ತಿನಲ್ಲಿ ಹಲವು ಯುದ್ಧಗಳು ಪರೋಕ್ಷವಾಗಿ ಸೃಷ್ಟಿಯಾಗಿವೆ. ಇದೇ ಸಮಯ ನೋಡಿಕೊಂಡು ಇನ್ನಷ್ಟು ಯುದ್ಧಗಳನ್ನ ಶುರು ಮಾಡಲು ಮತ್ತಷ್ಟು ದೇಶಗಳು ಕಾಯುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇದೀಗ ಉಕ್ರೇನ್ ಬುಡಕ್ಕೆ ಮತ್ತೆ ಬತ್ತಿ ಇಟ್ಟ ರಷ್ಯಾ ಮಿಲಿಟರಿ? ಎಂಬ ಪ್ರಶ್ನೆ ಕಾಡತೊಡಗಿದೆ, ಯಾಕೆ ಗೊತ್ತಾ? ಮುಂದೆ ಓದಿ.
ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಆ ಕಡೆ ಬಿದ್ದರೆ ಮುಳ್ಳು & ಈ ಕಡೆ ಬಿದ್ದರೆ ಪ್ರಪಾತ. ಅದ್ರಲ್ಲೂ ರಷ್ಯಾ ವಿರುದ್ಧ ಯುದ್ಧ ಶುರುವಾದ ನಂತರ ಉಕ್ರೇನ್ ಪರಿಸ್ಥಿತಿ ಹೀನಾಯವಾಗಿದೆ. ರಷ್ಯಾ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಯಾಕಂದ್ರೆ ರಷ್ಯಾ ಕೆಪಾಸಿಟಿ ಆ ರೇಂಜ್‌ಗೆ ಇದ್ದು, ಅಮೆರಿಕದ ವಿರುದ್ಧವಾಗಿ ಈಗಾಗಲೇ ರಷ್ಯಾ ದೊಡ್ಡ ಸಂಘಟನೆ ಕಟ್ಟಿಕೊಳ್ಳುತ್ತಿದೆ. ಅಮೆರಿಕ ವಿರುದ್ಧ ತಿರುಗಿಬಿದ್ದ ದೇಶಗಳು ರಷ್ಯಾ ಸೇನೆ ಬೆಂಬಲಕ್ಕೆ ನಿಲ್ಲುತ್ತಿವೆ. ಉಕ್ರೇನ್ ಮಾತ್ರ ಅಮೆರಿಕ ಬೆಂಬಲ ಪಡೆಯುತ್ತಿದ್ದು ಪರಿಸ್ಥಿತಿಯನ್ನ ಕಠಿಣವಾಗಿಸಿದೆ. ಇಂತಹ ಸಮಯದಲ್ಲೇ ರಷ್ಯಾ ಸೇನೆಯಿಂದ ಉಕ್ರೇನ್ ಮೂಲ ಸೌಕರ್ಯ ಉಡೀಸ್ ಮಾಡುವ ಪ್ರಕ್ರಿಯೆ ಬಲು ಜೋರಾಗಿದೆ!

ಉಕ್ರೇನ್ ಮೇಲೆ ರಷ್ಯಾ ಡೆಡ್ಲಿ ಅಟ್ಯಾಕ್?
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಡ್ರೋನ್ ದಾಳಿ ಬಗ್ಗೆ ಆಗಾಗ ಸೌಂಡ್ ಆಗುತ್ತಲೇ ಇರುತ್ತೆ, ಈಗಲು ಕೂಡ ಅಷ್ಟೇ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಡ್ರೋನ್ ಮೂಲಕ ಭೀಕರ ದಾಳಿಯ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. 19 ಡ್ರೋನ್‌ಗಳ ಮೂಲಕ ಇದೀಗ, ರಷ್ಯಾ ಸೇನೆ ಉಕ್ರೇನ್‌ನ ಮೂಲ ಸೌಕರ್ಯ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿಕೊಂಡು ರಾತ್ರೋರಾತ್ರಿ ಹೀಗೆ ದಾಳಿ ಮಾಡಿ ದಾಳ ಉರುಳಿಸಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಉಕ್ರೇನ್ ಮತ್ತು ರಷ್ಯಾ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಘೋರ ಪರಿಣಾಮ ಬೀರುವ ಭಯ ಹುಟ್ಟು ಹಾಕಿದೆ.
ಒಂದೊಂದೇ ಪ್ರದೇಶಗಳು ರಷ್ಯಾ ವಶಕ್ಕೆ?
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಬರೋಬ್ಬರಿ ಎರಡು ಮುಕ್ಕಾಲು ವರ್ಷವೇ ಕಳೆದು ಹೋಗಿದೆ. ಈ ಎರಡು ಮುಕ್ಕಾಲು ವರ್ಷದಲ್ಲಿ, ಉಕ್ರೇನ್ ದೇಶದ ಪೂರ್ವ ಭಾಗ ರಷ್ಯಾದ ಭಾಗಶಃ ಹಿಡಿತಕ್ಕೆ ಸಿಕ್ಕಾಗಿದೆ. ಇದು ಉಕ್ರೇನ್ ಅಧ್ಯಕ್ಷ್ಯ ಝೆಲೆನ್ಸ್‌ಸ್ಕಿ ಮತ್ತು ಉಕ್ರೇನ್ ದೇಶದ ಬೆಂಬಲಕ್ಕೆ ನಿಂತಿರುವ ಅಮೆರಿಕದ ಬೇಸರಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲೇ ಈಗ ರಷ್ಯಾ ಮತ್ತಷ್ಟು ಪ್ರದೇಶಗಳನ್ನ ಉಕ್ರೇನ್ ವಶದಿಂದ ಕಿತ್ತುಕೊಂಡಿದೆ. ಅದರಲ್ಲೂ ರಷ್ಯಾದ ಮಿಲಿಟರಿ ಉಕ್ರೇನ್ ರಾಜಧಾನಿ ಸುತ್ತಮುತ್ತಲ ಭಾಗದಲ್ಲಿ ಸಾಕಷ್ಟು ಹಿಡಿತ ಸಾಧಿಸುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸುವ ಮುನ್ಸೂಚನೆ ನೀಡಿದೆ.












Click it and Unblock the Notifications