Russia & Ukraine: 700 ಕಿಲೋ ಮೀಟರ್ ದೂರಕ್ಕೂ ನುಗ್ಗಿ ದಾಳಿ ಮಾಡುವ ರಾಕೆಟ್-ಡ್ರೋನ್ ಉಕ್ರೇನ್ ಸೇನೆಗೆ ಲಭ್ಯ!
ಉಕ್ರೇನ್ & ರಷ್ಯಾ ಒಬ್ಬರನ್ನ ಮತ್ತೊಬ್ಬರು ನಾಶ ಮಾಡುವಷ್ಟು ರೊಚ್ಚಿಗೆದ್ದು ಕೂತಿದ್ದಾರೆ. ಇದೇ ಕಾರಣಕ್ಕೆ 3ನೇ ಮಹಾಯುದ್ಧ ಕೂಡ ಇಲ್ಲಿಂದಲೇ ಆರಂಭ ಆಗಲಿದೆಯಾ? ಎನ್ನುವಂತೆ ಇದೀಗ ಭಯ ಕೂಡ ಕಾಡುತ್ತಿದೆ. ಮತ್ತೊಂದು ಕಡೆ ರಷ್ಯಾ ಕೂಡ ಉಕ್ರೇನ್ ವಿರುದ್ಧ ಭಾರಿ ಘೋರ ದಾಳಿ ಮಾಡುತ್ತಿದೆ. ಹೀಗಿದ್ದಾಗಲೇ, 700 ಕಿಲೋ ಮೀಟರ್ ದೂರಕ್ಕೂ ನುಗ್ಗಿ ದಾಳಿ ಮಾಡುವ ರಾಕೆಟ್-ಡ್ರೋನ್ ಉಕ್ರೇನ್ ಸೇನೆಗೆ ಲಭ್ಯವಾಗಿದೆ!
ಅಮೆರಿಕದ ಸಹಾಯ ಪಡೆದು ರಷ್ಯಾ ವಿರುದ್ಧ ಉಕ್ರೇನ್ ಘೋರವಾಗಿ ದಾಳಿ ಮಾಡುತ್ತಿದೆ, ಈ ಮೂಲಕ ರಷ್ಯಾ ಜೊತೆಗೆ ತಿಕ್ಕಾಟ ಇನ್ನಷ್ಟು ಹೆಚ್ಚು ಮಾಡುತ್ತಿದೆ ಎಂಬ ಗಂಭೀರವಾದ ಆರೋಪ ಉಕ್ರೇನ್ ವಿರುದ್ಧ ಇದೆ. ಅದರಲ್ಲೂ ರಷ್ಯಾ ಸೇನೆ ಈಗಾಗಲೇ ಉಕ್ರೇನ್ ದೇಶಕ್ಕೆ, ಭಾರಿ ದೊಡ್ಡ ಆಘಾತ ನೀಡಿದೆ. ಹೀಗಾಗಿ ಮೊದಲೇ ಚಿಂತೆಯಲ್ಲಿ ನರಳುತ್ತಿರುವ ಉಕ್ರೇನ್ ಸೇನೆಗೆ ಅಮೆರಿಕ ಬೆನ್ನೆಲುಬಾಗಿ ನಿಂತಿದೆ. ಇಂತಹದ್ದೇ ಪರಿಸ್ಥಿತಿಯಲ್ಲಿ, ರಷ್ಯಾ ಮಿಲಿಟರಿಯ ಎದೆ ನಡುಗಿಸಲು 700 ಕಿಲೋ ಮೀಟರ್ ದೂರಕ್ಕೂ ನುಗ್ಗಿ ದಾಳಿ ಮಾಡುವ ರಾಕೆಟ್-ಡ್ರೋನ್ ಬಳಕೆಗೆ ಮುಂದಾಗಿದೆ ಉಕ್ರೇನ್.

33 ತಿಂಗಳ ಯುದ್ಧಕ್ಕೆ ಬ್ರೇಕ್?
ಉಕ್ರೇನ್ ಇದೀಗ ಪರಿಚಯಿಸಿರುವ ಹೊಸ ಅಸ್ತ್ರವು ಭಯ ಹುಟ್ಟಿಸುತ್ತಿದೆ. ಯಾಕೆ ಅಂದರೆ, ಈ ಹೊಸ ಅಸ್ತ್ರವು ಸುಮಾರು 700 ಕಿಲೋ ಮೀಟರ್ ದೂರಕ್ಕೂ ಹಾರಬಲ್ಲದು. ಇಷ್ಟು ಮಾತ್ರ ಅಲ್ಲ, 'ಪೆಕ್ಲೋ' ಎಂದು ಹೆಸರು ಇಟ್ಟಿರುವ ಈ ರಾಕೆಟ್-ಡ್ರೋನ್ ಖುದ್ದು ಉಕ್ರೇನ್ ದೇಶದ ನೆಲದಲ್ಲೇ ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುತ್ತೆ. ಹೀಗಾಗಿ, ರಷ್ಯಾ ಮಿಲಿಟರಿಗೆ ಕೂಡ ಈ ವಿಚಾರದಲ್ಲಿ ಟೆನ್ಷನ್ ಶುರುವಾಗಿದೆ.
ಭಾರಿ ಏಟು ಕೊಡಲು ರಷ್ಯಾ ಸಿದ್ಧತೆ?
ರಷ್ಯಾ ಅದೆಷ್ಟೇ ವಾರ್ನಿಂಗ್ ಕೊಡುತ್ತಿದ್ದರೂ ಉಕ್ರೇನ್ ಮಾತ್ರ ಮಾತು ಕೇಳುತ್ತಿಲ್ಲ. ಹೀಗಾಗಿ ರಷ್ಯಾ ಕೂಡ ಭಾರಿ ಟೆನ್ಷನ್ ಮಾಡಿಕೊಂಡು ತೀವ್ರವಾದ ದಾಳಿಗೆ ಇದೀಗ ಮುಂದಾಗಿರುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಅಮೆರಿಕದ ಜೊತೆಗೆ ಸೇರಿಕೊಂಡು ರಷ್ಯಾ ಒಳಗಡೆಗೆ ಕೂಡ ನುಗ್ಗಿ ದಾಳಿ ಮಾಡಲು ಉಕ್ರೇನ್ ಸೇನೆ ಈಗ ಕಾಯುತ್ತಿದೆ ಎಂದು ಆರೋಪಿಸಲಾಗಿದೆ.
ರಷ್ಯಾ ರಾಜಧಾನಿ ಮಾಸ್ಕೋ ಉಕ್ರೇನ್ ಗಡಿಗೆ ತುಂಬಾ ಹತ್ತಿರದಲ್ಲೇ ಇದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ರಷ್ಯಾ ಮೇಲೆ ಹೀಗೆ ಉಕ್ರೇನ್ ದಾಳಿ ಮಾಡಬಹುದು ಎಂಬ ಆತಂಕ ಮೂಡಿದೆ. ರಷ್ಯಾ ಸೇನೆ ಕೂಡ ಗಡಿ ಭಾಗದಲ್ಲಿ ಅಲರ್ಟ್ ಆಗಿದ್ದು, ಎಲ್ಲವನ್ನೂ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ನಿಂತಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಜಗತ್ತಿಗೆ ಮತ್ತಷ್ಟು ಟೆನ್ಷನ್... ಟೆನ್ಷನ್... ಕೊಡುತ್ತಿದೆ.












Click it and Unblock the Notifications