ಉಕ್ರೇನ್ ವಿವಾದ: ನಮಗೆ ಯುದ್ಧ ಬೇಡ ಎಂದು ಹಿಂದೆ ಸರಿದ ರಷ್ಯಾ

ಮಾಸ್ಕೋ, ಫೆಬ್ರವರಿ 16: ನಮಗೆ ಯುದ್ಧ ಬೇಡವೆಂದು ರಷ್ಯಾ ಹಿಂದೆ ಸರಿದಿದೆ, ಯಾವ ಸಂದರ್ಭದಲ್ಲಿ ಬೇಕಾದರೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಬಹುದು ಎನ್ನುವ ಭಯ ಇದೀಗ ದೂರವಾದಂತಿದೆ.

ಉಕ್ರೇನ್‌ ಗಡಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ ಒಂದಷ್ಟುಮಂದಿಯನ್ನು ರಷ್ಯಾ ವಾಪಸ್‌ ಕರೆಸಿಕೊಂಡಿದೆ.

2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯವನ್ನು ರಷ್ಯಾ ವಶಕ್ಕೆ ತೆಗೆದುಕೊಂಡಿತ್ತು. ಅದಾದ ನಂತರ ಎರಡೂ ದೇಶಗಳ ಸಂಬಂಧ ಹಳಸಿಹೋಗಿತ್ತು. ಈ ನಡುವೆ ಅಮೆರಿಕ- ಬ್ರಿಟನ್‌ ನೇತೃತ್ವದ ನ್ಯಾಟೋ ಪಡೆ ಸೇರಲು ಉಕ್ರೇನ್‌ ಮುಂದಾಗಿತ್ತು.

Ukraine Crisis: Russia Announces End Of Military Drills in Crimea

ಉಕ್ರೇನ್‌ ಬಳಸಿಕೊಂಡು ತನ್ನ ಗಡಿಯಲ್ಲಿ ಅಮೆರಿಕ ಸೇನಾ ನೆಲೆ ತೆರೆಯಲು ಯತ್ನಿಸುತ್ತಿದೆ ಎಂದು ನಂಬಿದ ರಷ್ಯಾ, ನ್ಯಾಟೋಗೆ ಉಕ್ರೇನ್‌ ಸೇರದಂತೆ ಬೆದರಿಸಲು ಆ ದೇಶದ ಗಡಿಗೆ ಯೋಧರನ್ನು ಜಮಾವಣೆ ಮಾಡಿತ್ತು. ವಿವಿಧ ದೇಶಗಳ ಮಧ್ಯಪ್ರವೇಶದೊಂದಿಗೆ ಇದು ವಿಕೋಪಕ್ಕೆ ಹೋಗಿತ್ತು.

ರಷ್ಯನ್ ಸೈನಿಕರು ಉಕ್ರೇನ್ ಗಡಿ ಬಿಟ್ಟು ಮರಳುತ್ತಿರುವ ದೃಶ್ಯಗಳನ್ನು ರಷ್ಯಾದ ಅಧಿಕೃತ ಮಾಧ್ಯಮ ಬಿತ್ತರಿಸಿದ್ದು, ಯುದ್ಧ ಟ್ಯಾಂಕ್, ಕ್ಷಿಪಣಿ ವಾಹನಗಳು ಕೂಡ ಮರಳತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ರಷ್ಯಾ ಹಿಂಪಡೆದಿದೆ.

ರಷ್ಯನ್ ಪಡೆಗಳು ಉಕ್ರೇನ್ ಗಡಿಯಿಂದ ಮರಳುತ್ತಿರುವುದರಿಂದ, ಕಳೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ಸಂಘರ್ಷವೊಂದು ಸುಖಾಂತ್ಯ ಕಾಣುವ ನಿರೀಕ್ಷೆ ಗರಿಗೆದರಿದೆ. ಉಕ್ರೇನ್ ಪರ ನ್ಯಾಟೋ ಸದಸ್ಯ ರಾಷ್ಟ್ರಗಳ ಗಟ್ಟಿ ಧ್ವನಿ ಹಾಗೂ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳು ಸಂಘರ್ಷವನ್ನು ಕೊನೆಗಾಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.

ಹೀಗಾಗಿ ರಾಜತಾಂತ್ರಿಕ ಮಾರ್ಗದಲ್ಲಿ ನಡೆದ ಸಂಧಾನ ಪ್ರಕ್ರಿಯೆಗಳ ಫಲ ಇದಾಗಿದ್ದು, ರಷ್ಯಾ ಮತ್ತಷ್ಟು ಯೋಧನ್ನು ಹಿಂಪಡೆದುಕೊಂಡರೆ ಯುದ್ಧ ಸಾಧ್ಯತೆ ಕ್ಷೀಣಿಸಲಿದೆ.

ಉಕ್ರೇನ್‌ ಗಡಿಗೆ ನಿಯೋಜಿಸಲಾಗಿದ್ದ ಒಂದಷ್ಟು ತುಕಡಿಗಳು ತಮ್ಮ ಕಾರ್ಯ ಮುಗಿಸಿ, ಗಂಟು ಮೂಟೆ ಕಟ್ಟಿಕೊಂಡಿವೆ. ಈಗಾಗಲೇ ರೈಲು, ರಸ್ತೆ ಮಾರ್ಗವಾಗಿ ತಮ್ಮ ಸೇನಾ ನೆಲೆಗಳಿಗೆ ಪ್ರಯಾಣ ಆರಂಭಿಸಿವೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮುಖ್ಯ ವಕ್ತಾರ ಇಗೋರ್‌ ಕೊನಾಶೆಂಕೋವ್‌ ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ಎರಗುವ ರಷ್ಯಾದ ಚಿಂತನೆ ಕೇವಲ ಆ ಎರಡೂ ದೇಶಗಳ ನಡುವಣ ಬಿಕ್ಕಟ್ಟು ಮಾತ್ರವೇ ಆಗಿರದೆ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ಪರೋಕ್ಷ ಸಮರವೆಂದೇ ಬಿಂಬಿತವಾಗಿತ್ತು. ಶೀತಲ ಸಮರದ ಅಂತ್ಯದ ಬಳಿಕ ಸೃಷ್ಟಿಯಾದ ಮಹಾ ಬಿಕ್ಕಟ್ಟು ಇದಾಗಿತ್ತು.

ರಷ್ಯಾ ಏನಾದರೂ ಉಕ್ರೇನ್‌ ಮೇಲೆ ದಾಳಿ ಮಾಡಿದರೆ ಉಕ್ರೇನ್‌ ಬೆಂಬಲಕ್ಕೆ ನಿಲ್ಲುವುದಾಗಿ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ಘೋಷಣೆ ಮಾಡಿದ್ದವು. ಹೀಗಾಗಿ ಈ ಸಮರ ವಿಕೋಪಕ್ಕೆ ಹೋಗುವ ಸಾಧ್ಯತೆ ಇತ್ತು.

ಈ ಹಿನ್ನೆಲೆಯಲ್ಲಿ ಸಂಘರ್ಷ ತಪ್ಪಿಸಲು ಹಲವು ದೇಶಗಳು ರಷ್ಯಾ ಜತೆ ರಾಜತಾಂತ್ರಿಕವಾಗಿ ಮಾತುಕತೆ ನಡೆಸಿದ್ದವು. ರಷ್ಯಾದ ಹೊಸ ನಡೆಯಿಂದಾಗಿ ಉಕ್ರೇನ್‌ ಮಾತ್ರವೇ ಅಲ್ಲದೆ ಇಡೀ ಯುರೋಪ್‌ ಕೊಂಚ ನಿರಾಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+