Ukraine War: ನಿಲ್ಲದ ಯುದ್ಧ, ಗೊಂದಲದಲ್ಲಿ ಉಕ್ರೇನ್ ಜನ- ಮುಂದಿನ ಕಥೆ ಏನು?
ಹೊಡಿ ಮಗ.. ಹೊಡಿ ಮಗ.. ಅಂತಾ ಉಕ್ರೇನ್‌ನ ಓಡಾಡಿಸಿಕೊಂಡು ಬಾರಿಸಿದೆ ರಷ್ಯಾದ ಸೇನೆ. ಇಷ್ಟಾದರೂ ರಷ್ಯಾಗೆ ಮಾತ್ರ ನೆಮ್ಮದಿ ಸಿಕ್ಕಿಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಕಳೆದ 3 ವರ್ಷದಿಂದಲೂ ಯುದ್ಧ ನಿಲ್ಲಿಸುವ ನಿರ್ಧಾರ ಕೈಗೊಳ್ಳುತ್ತಿಲ್ಲ. ಕೆಲವೇ ದಿನಗಳ ಮಟ್ಟಿಗೆ ಕದನ ವಿರಾಮ ಘೋಷಣೆ ಮಾಡಿದರೂ ಅದು ಪದೇ ಪದೇ ಉಲ್ಲಂಘನೆ ಆಗುತ್ತಿದೆ. ಇಂತಹ ಸಮಯದಲ್ಲೇ ಯುದ್ಧ ನಿಲ್ಲುವ ವಿಚಾರದಲ್ಲಿ ಉಕ್ರೇನ್ ಜನ ಸಿಕ್ಕಾಪಟ್ಟೆ ಗೊಂದಲದಲ್ಲಿದ್ದಾರೆ.
ಯುದ್ಧ ಮಾಡಿದರೆ ನೆಮ್ಮದಿ ಹಾಳಾಗುತ್ತದೆ, ಆರ್ಥಿಕತೆ ಒದ್ದಾಡಿ ಹೋಗುತ್ತದೆ. ಜನರ ಬದುಕು ಬೀದಿಗೆ ಬೀಳುತ್ತದೆ, ಸರ್ಕಾರ ಮೈತುಂಬಾ ಸಾಲ ಮಾಡಬೇಕಾದ ಸ್ಥಿತಿಗೆ ಬರುತ್ತದೆ. ಇಂತಹ ಪರಿಸ್ಥಿತಿಗೆ ಉಕ್ರೇನ್ & ರಷ್ಯಾ ಎರಡೂ ಸಾಕ್ಷಿ ಆಗಿವೆ. ಇಷ್ಟೆಲ್ಲಾ ಎಡವಟ್ಟು ಮಾಡಿಕೊಂಡು ಪರದಾಡುತ್ತಿದ್ದರೂ, ದಾರಿಗೆ ಮಾತ್ರ ಬಂದಿಲ್ಲ ಉಕ್ರೇನ್ & ರಷ್ಯಾ. ಇದೇ ಸಮಯದಲ್ಲಿ ಈಗ ಇನ್ನಷ್ಟು ಗೊಂದಲ ಶುರುವಾಗಿದ್ದು, ಜನರ ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರೂ ಯುದ್ಧಕ್ಕೆ ಮಾತ್ರ ಬಾಂಬ್ & ಮಿಸೈಲ್ ಸಿಗುತ್ತಿವೆ. ಹೀಗಿದ್ದಾಗಲೇ, ಉಕ್ರೇನ್ ಜನರು ಕೂಡ ಬೇಸತ್ತು ಹೋಗಿ ರೊಚ್ಚಿಗೆದ್ದಿದ್ದಾರೆ.

ಉಕ್ರೇನ್ ಸೇನೆ ಉಡೀಸ್ ಆಗೋಯ್ತಾ?
ಈಗಾಗಲೇ ಪ್ರಮುಖ ಪ್ರದೇಶಗಳನ್ನು ಕಳೆದುಕೊಂಡು ಪರದಾಡುತ್ತಿರುವ ಉಕ್ರೇನ್ ಪರಿಸ್ಥಿತಿ ಹೀನಾಯವಾಗಿದೆ. ರಷ್ಯಾ ಸೇನೆ ಎದುರು ಭಾಗಶಃ ಸೋಲು ಅನುಭವಿಸಿರುವ ಉಕ್ರೇನ್ ಈಗ ಸಂಪೂರ್ಣ ಭೂಭಾಗ ಕಳೆದುಕೊಳ್ಳುವ ಚಿಂತೆಯಲ್ಲಿ ಮುಳುಗಿದೆ. ಈ ಹೊತ್ತಲ್ಲೇ ಉಕ್ರೇನ್ ಮಾತ್ರ ಪದೇ ಪದೇ ಅಮೆರಿಕ & ಟ್ರಂಪ್ ಮೊರೆ ಹೋಗುತ್ತಿದೆ. ಇಷ್ಟೆಲ್ಲದರ ನಡುವೆ ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ನಿಲ್ಲಿಸುವ ಮಾತು ಆಡಿದರೂ ಅದು ವರ್ಕೌಟ್ ಆಗುತ್ತಿಲ್ಲ.












Click it and Unblock the Notifications