Russia & Ukraine: ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ, ಸೌದಿ ಅರೇಬಿಯಾದಲ್ಲಿ ಮೀಟಿಂಗ್!

ರಷ್ಯಾ & ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದೇ ಬಿಟ್ಟಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಯುದ್ಧ ನಿಂತು ಹೋಗುವುದು ಗ್ಯಾರಂಟಿ ಆಗುತ್ತಿದೆ. ಯಾಕೆ ಅಂದ್ರೆ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಯುದ್ಧ ನಿಲ್ಲಿಸಲು ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಿದೆ. ಇಂತಹ ಸಮಯದಲ್ಲೇ, ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ ಇಡಲಾಗಿದ್ದು ಸೌದಿ ಅರೇಬಿಯಾದಲ್ಲಿ ಭರ್ಜರಿ ಮೀಟಿಂಗ್ ಆಯೋಜನೆ ಮಾಡಲಾಗಿದೆ.

ರಷ್ಯಾ & ಉಕ್ರೇನ್ ನಡುವೆ ವಾರ್ ಆಗುತ್ತಿದ್ದು, ಗೆಲುವಿಗೆ ಇಬ್ಬರೂ ಬಡಿದಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಒಂದು ಕೈ ಮೇಲೆ ಇರುವ ರಷ್ಯಾಗೆ ಈಗ ಡೊನಾಲ್ಡ್ ಟ್ರಂಪ್‌ರ ಆಗಮನ ಕೂಡ ಬಲ ನೀಡುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್‌ ಕೂಡ ರಷ್ಯಾ ಪರ ಇದ್ದಾರೆ ಎನ್ನಬಹುದು. ಆದರೆ ಇದೇ ವೇಳೆ ಉಕ್ರೇನ್‌ಗೆ ಮಾತ್ರ ಭಯ ಭಯ ಶುರುವಾಗಿತ್ತು. ಯುದ್ಧದಲ್ಲಿ ಅನಾಥವಾಗಿ ನರಳುತ್ತಿತ್ತು ಉಕ್ರೇನ್, ಇಂತಹ ಸ್ಥಿತಿಯಲ್ಲೇ ಖುದ್ದು ಅಮೆರಿಕ ಮುಂದೆ ನಿಂತು ಮಹತ್ವದ ಸಂಧಾನ ನಡೆಸಿ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

Ukraine and US to Discuss Russia-Ukraine War in Saudi Arabia

ಸೌದಿ ಅರೇಬಿಯಾದಲ್ಲಿ ಮಹತ್ವದ ಮೀಟಿಂಗ್!

ಉಕ್ರೇನ್ ಜೊತೆಗೆ ಅಮೆರಿಕದ ಅಧಿಕಾರಿಗಳು ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ಅಲ್ಲದೆ ರಷ್ಯಾ ಜೊತೆಗಿನ ಯುದ್ಧ ನಿಲ್ಲಿಸಲು ಮಾಹಿತಿ ಪಡೆಯಲಿದ್ದು, ಅಂತಿಮ ನಿರ್ಧಾರಕ್ಕೆ ಕೂಡ ಬರಲಿದ್ದಾರೆ. ಜೋ ಬೈಡನ್ ಸರ್ಕಾರ ಈ ಯುದ್ಧ ಶುರು ಮಾಡಲು ಕಾರಣವಾಗಿತ್ತು ಎಂಬ ಆರೋಪ ಇದ್ದು, ಡೊನಾಲ್ಡ್ ಟ್ರಂಪ್ ಅವರ ಆಡಳಿತ ಯುದ್ಧವನ್ನು ಕೊನೆಗೊಳಿಸಲು ಈ ಮೂಲಕ ರಣಕಹಳೆ ಮೊಳಗಿಸಿದೆ. ಸೌದಿ ಅರೇಬಿಯಾದಲ್ಲಿ ಮುಂದಿನ ವಾರವೇ ಮಹತ್ವದ ಮೀಟಿಂಗ್ ನಡೆಯಲಿದ್ದು, ಇದಕ್ಕಾಗಿ ಬೇಕಾದ ಸಿದ್ಧತೆ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+