Ukraine War: 900 ದಿನ ಮುಗಿಸಿದ ಉಕ್ರೇನ್ ಯುದ್ಧ, ಅಸಲಿ ಆಟ ಈಗ ಶುರು?
ಉಕ್ರೇನ್ & ರಷ್ಯಾ ನಡುವೆ ಯುದ್ಧದ ಬೆಂಕಿ ಹೊತ್ತಿಕೊಂಡು ಇದೀಗ ಬರೋಬ್ಬರಿ 900 ದಿನ ಮುಗಿದು ಹೋಗಿದೆ. ಈ ಮೂಲಕ 3ನೇ ವರ್ಷ ಕೂಡ ಮುಗಿಸುವ ಮುನ್ಸೂಚನೆ ನೀಡಿರುವ ಉಕ್ರೇನ್ & ರಷ್ಯಾ ಯುದ್ಧಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಅದ್ರಲ್ಲೂ ಅಮೆರಿಕ & ನ್ಯಾಟೋ ಒಕ್ಕೂಟ ಒಟ್ಟಾಗಿ ಉಕ್ರೇನ್ ಪರವಾಗಿ ನಿಂತಿದ್ದು, ತಮ್ಮಲ್ಲಿರುವ ಇರುವ ಒಂದು ಭಯಾನಕ ಅಸ್ತ್ರವನ್ನು ಇದೀಗ ಉಕ್ರೇನ್ ಮಿಲಿಟರಿ ಮಡಿಲಿಗೆ ಹಾಕಿವೆ! ಹಾಗಿದ್ರೆ ಈ ಭಯಾನಕ ಅಸ್ತ್ರ ಯುದ್ಧವನ್ನು ಹೇಗೆಲ್ಲಾ ಬದಲಾಯಿಸಬಲ್ಲದು? ಬನ್ನಿ ತಿಳಿಯೋಣ.
ಪಾಶ್ಚಿಮಾತ್ಯ ದೇಶಗಳು ಹಾಗೂ ರಷ್ಯಾ ನಡುವೆ ಕಿರಿಕ್ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರಷ್ಯಾ & ಉಕ್ರೇನ್ ಯುದ್ಧವು ಶುರುವಾದ ನಂತರ ಉಕ್ರೇನ್‌ಗೆ ಲಕ್ಷಾಂತರ ಕೋಟಿ ಸಹಾಯವನ್ನ ಮಾಡಿದೆ ಅಮೆರಿಕ. 2023 ರಲ್ಲಿ 'ಎಫ್-16' ಯುದ್ಧ ವಿಮಾನಗಳನ್ನ ಉಕ್ರೇನ್‌ಗೆ ಕೊಡೋದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಎಫ್-16 ಯುದ್ಧ ವಿಮಾನ ಪೂರೈಕೆ ಮಾಡಲು ಎಲ್ಲಾ ರೀತಿಯ ತಯಾರಿ ಆರಂಭ ಮಾಡಿತ್ತು ಅಮೆರಿಕ. ಈಗ ಮೊದಲನೇ ಬ್ಯಾಚ್‌ನಲ್ಲಿ ಉಕ್ರೇನ್ ಸೇನೆ 'ಎಫ್-16' ಯುದ್ಧ ವಿಮಾನಗಳನ್ನ ಪಡೆದಿದೆ. ಇದೇ ಸಮಯದಲ್ಲಿ ರಷ್ಯಾ ವಿರುದ್ಧ ಬೇರೆ ರೀತಿ ತಂತ್ರ ಹೂಡಿ, ಉಕ್ರೇನ್ ಗೆಲುವಿಗೆ ಪಾಶ್ಚಿಮಾತ್ಯ ದೇಶಗಳು ಪಣತೊಟ್ಟಿವೆ.

ಪರಮಾಣು ಅಸ್ತ್ರ ಬಳಸುತ್ತಾ ರಷ್ಯಾ?
ಕೆಲವೇ ದಿನಗಳಲ್ಲಿ ಮುಗಿದು ಹೋಗಲಿದೆ ಅಂದುಕೊಂಡಿದ್ದ ಯುದ್ಧ ಇಂದಿಗೂ ಮುಗಿದಿಲ್ಲ. ರಷ್ಯಾ ಮತ್ತು ಉಕ್ರೇನ್ ಯುದ್ಧ ಇನ್ನೇನು ಕೆಲವೇ ತಿಂಗಳಲ್ಲಿ 4ನೇ ವರ್ಷಕ್ಕೆ ಬೀಳಲಿದೆ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರಷ್ಯಾ ಯಾವ ಕ್ಷಣದಲ್ಲಿ ಬೇಕಾದ್ರೂ ರೊಚ್ಚಿಗೆದ್ದು ನ್ಯೂಕ್ಲಿಯರ್ ದಾಳಿ ಮಾಡುವ ಆತಂಕ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೂ ಅಲರ್ಟ್ ಆಗದ ಉಕ್ರೇನ್ ಮಾತ್ರ ಪದೇ ಪದೇ ರಷ್ಯಾ ಮೇಲೆ ದಾಳಿ ಮಾಡುತ್ತಿದೆ.
ರಷ್ಯಾ ವಿರುದ್ಧ ದಾಳಿ ಮಾಡುವ ಜೊತೆಗೆ ಅಮೆರಿಕದಿಂದ 'ಎಫ್-16' ಯುದ್ಧ ವಿಮಾನಗಳನ್ನ ಉಡುಗೊರೆಯಾಗಿ ಪಡೆದಿದೆ ಉಕ್ರೇನ್ ಸೇನೆ. ಈ ವಿಚಾರ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನ ರೊಚ್ಚಿಗೆಬ್ಬಿಸಿದೆ. ಹಾಗೇ ರಷ್ಯಾದ ನೆಲದ ಮೇಲೆ ದಾಳಿ ಮಾಡಿರುವ ಉಕ್ರೇನ್ ವಿರುದ್ಧ ಭಯಾನಕವಾದ & ಹಿಂದೆ ಕಂಡು ಕೇಳರಿಯದ ರೀತಿ ರಿವೇಂಜ್‌ಗೆ ರಷ್ಯಾದ ಅಧ್ಯಕ್ಷರು ಸಜ್ಜಾಗಿರುವ ಆರೋಪ ಕೇಳಿಬಂದಿದೆ.
ಗ್ಯಾಂಗ್ರಿನ್ ರೀತಿ ಹರಡುತ್ತಿದೆ ಯುದ್ಧ!
ಒಟ್ನಲ್ಲಿ ಯುದ್ಧ ಎಂಬುದು ಮನುಷ್ಯನನ್ನ ನಾಶ ಮಾಡುತ್ತೆ ಅಂತಾ ಅದೆಷ್ಟೇ ಬುದ್ಧಿಯನ್ನು ಹೇಳಿದರೂ ಯುದ್ಧಗಳು ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಈಗ ಜಗತ್ತಿನಾದ್ಯಂತ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, 3ನೇ ಮಹಾಯುದ್ಧದ ಆತಂಕ ಕೂಡ ಶುರುವಾಗಿದೆ. ಇದರ ಜೊತೆಗೆ 900 ದಿನಗಳನ್ನು ಮುಗಿಸಿರುವ ರಷ್ಯಾ ಮತ್ತು ಉಕ್ರೇನ್ ವಾರ್, ಮತ್ತಷ್ಟು ಭಯಾನಕವಾಗುತ್ತಿದೆ. ಜಗತ್ತಿನ ಇತರ ದೇಶಗಳಿಗೂ ಇದು ಗ್ಯಾಂಗ್ರಿನ್ ರೀತಿ ಹರಡುವ ಆತಂಕ ಇದೀಗ ಕಾಡುತ್ತಿದೆ.












Click it and Unblock the Notifications