Ukraine War: 897 ದಿನ ಪೂರೈಸಿದ ರಷ್ಯಾ & ಉಕ್ರೇನ್ ವಾರ್!

ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕದನ ಮತ್ತಷ್ಟು ಕೈಮೀರಿ ಹೋಗ್ತಿದೆ. ಎರಡೂ ದೇಶಗಳು ಒಬ್ಬರನ್ನ ಮತ್ತೊಬ್ಬರು ನಾಶ ಮಾಡುವಷ್ಟು ಕಿತ್ತಾಡುತ್ತಿದ್ದಾರೆ. ಹೀಗಾಗಿ ಭಯದ ವಾತಾವರಣ ಕೂಡ ಆವರಿಸಿದೆ. ಇದೆಲ್ಲಾ ಒಂದು ಕಡೆ ಆಗಿದ್ದರೆ, ಮತ್ತೊಂದ್ಕಡೆ ಮೆಲ್ಲಗೆ ಈ ಯುದ್ಧವು 1000 ದಿನಗಳನ್ನು ಪೂರೈಸುವ ಹಂತಕ್ಕೆ ತಲುಪುತ್ತಿದೆ. ಇದೀಗ 897 ದಿನ ಪೂರೈಸಿ ಇಡೀ ಜಗತ್ತಿಗೆ ಆತಂಕ ತರಿಸುತ್ತಿದೆ.

ರಷ್ಯಾ & ಉಕ್ರೇನ್ ಯುದ್ಧ ಇವತ್ತು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅನ್ನೋ ನಿರೀಕ್ಷೆಯಲ್ಲಿ ಈಗ ಜಗತ್ತು ಕಾಯುತ್ತಿದೆ. ಆದರೂ ಯುದ್ಧ ನಿಲ್ಲುತ್ತಿಲ್ಲ & ಯುದ್ಧ ನಿಲ್ಲಿಸುವ ಪ್ರಯತ್ನ ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿಲ್ಲ. ಹೀಗಿದ್ದಾಗ ಕ್ರಮ ಕೈಗೊಳ್ಳಬೇಕಾದ ವ್ಯಕ್ತಿಗಳು ಕೂಡ, ಈ ವಿಚಾರದಲ್ಲಿ ಮೌನ ವಹಿಸಿರುವುದು ಭಯ ಹೆಚ್ಚಾಗುವಂತೆ ಮಾಡಿದೆ. ರಷ್ಯಾ ಸೇನೆಯ ಲೆಕ್ಕಾಚಾರಗಳನ್ನ ಗುರುತಿಸುವಲ್ಲಿ ಎಲ್ಲರೂ ಸೋಲುತ್ತಿದ್ದಾರೆ. ಹೀಗಾಗಿ ಉಕ್ರೇನ್‌ಗೆ ಯುದ್ಧ ಭಾರಿ ದೊಡ್ಡ ನಷ್ಟ ಉಂಟು ಮಾಡುತ್ತಿದೆ. ಲಕ್ಷಾಂತರ ಕೋಟಿ ನೆರವು ಬಂದರೂ ಉಕ್ರೇನ್ ಈ ಯುದ್ಧದಲ್ಲಿ ಭಾರಿ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ.

Ukraine And Russia War Has Been Completed 897 Days

ಭಯಾನಕ ಅಸ್ತ್ರ ಉಕ್ರೇನ್‌ಗೆ ಉಡುಗೊರೆ?

ಯುದ್ಧ ಒಂದು ಕಡೆ ನಿರಾತಂಕವಾಗಿ ಮುಂದೆ ಸಾಗಿದ್ದರೆ, ಮತ್ತೊಂದು ಕಡೆ ವಿನಾಶಕಾರಿ ಅಸ್ತ್ರಗಳು ಈ ಯುದ್ಧದಲ್ಲಿ ಬಳಕೆ ಆಗುವ ಭಯ ಆವರಿಸಿದೆ. ಯಾಕಂದ್ರೆ ಈಗ ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ಭಾರಿ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿವೆ. ಹೀಗಿದ್ದಾಗಲೇ ಪರಮಾಣು ಅಸ್ತ್ರಗಳ ಬಳಕೆಯ ಭಯ ಕೂಡ ಕಾಡುತ್ತಿದೆ. ಅಮೆರಿಕ ಸೇರಿದಂತೆ ನ್ಯಾಟೋ ಬೆಂಬಲಿತ ದೇಶಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಉಕ್ರೇನ್‌ಗೆ ನೆರವು ನೀಡುತ್ತಿವೆ. ಹೀಗಾಗಿ ಉಕ್ರೇನ್ ಕೂಡ ರೊಚ್ಚಿಗೆದ್ದು, ರಷ್ಯಾ ವಿರುದ್ಧ ದಾಳಿ ಮಾಡುತ್ತಿದೆ.

ಅಮಾಯಕರು ಯುದ್ಧಕ್ಕೆ ಬಲಿ

ಒಟ್ನಲ್ಲಿ ರಷ್ಯಾ & ಉಕ್ರೇನ್ ವಾರ್ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧ ನಿಲ್ಲಿಸಲು ಜಗತ್ತು ಒಂದಾಗಬೇಕಿದೆ ಎಂಬುದು ತಜ್ಞರ ಅಭಿಪ್ರಾಯ. ಆದ್ರೆ ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಈಗಾಗಲೇ ಜಗತ್ತು ಒಡೆದ ಮನೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಯುದ್ಧ ನಿಲ್ಲುವುದು ಅನುಮಾನ, ಮತ್ತಷ್ಟು ವರ್ಷಗಳ ಕಾಲ ಇಬ್ಬರ ಮಧ್ಯೆ ಯುದ್ಧ ಮುಂದುವರಿಯಲಿದೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಸ್ವಲ್ಪ ಹೆಚ್ಚು & ಕಮ್ಮಿ ಆದರೂ ಮತ್ತಷ್ಟು ಅಮಾಯಕರ ಜೀವಗಳು ಬಲಿಯಾಗುವ ಆತಂಕ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+