Ukraine War: ರಷ್ಯಾ ವಿರುದ್ಧ ಒಗ್ಗಟ್ಟಾದ ನ್ಯಾಟೋ ರಾಷ್ಟ್ರಗಳು & ಉಕ್ರೇನ್?

ರಷ್ಯಾ ಸೇನೆಯಿಂದ ಪದೇ ಪದೇ ದೊಡ್ಡ ಮಟ್ಟಿಗೆ ಅಟ್ಯಾಕ್ ಎದುರಿಸುತ್ತಿರುವ ಉಕ್ರೇನ್ ನಲುಗಿದ್ದು, ಇದೀಗ ಬಾಲ ಮುದುಡಿಕೊಂಡು ಕೂರುವಂತೆ ಆಗಿದೆ. ಈ ಮೊದಲು ದಾಳಿ ಮಾಡಿದಂತೆ ನೇರವಾಗಿ ರಷ್ಯಾ ವಿರುದ್ಧ ದಾಳಿ ಮಾಡುವುದು ಉಕ್ರೇನ್‌ಗೆ ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ರಷ್ಯಾ ತನ್ನ ದೊಡ್ಡ ದೊಡ್ಡ ಅಸ್ತ್ರಗಳನ್ನು ಉಕ್ರೇನ್ ವಿರುದ್ಧವೇ ತಿರುಗಿಸಿ ಪ್ರಯೋಗ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಉಕ್ರೇನ್ ಈಗ ಪ್ರತ್ಯೇಕ ಅಸ್ತ್ರ ಒಂದನ್ನು ರೆಡಿ ಮಾಡಿಕೊಂಡಿದ್ದು, ರಷ್ಯಾ ವಿರುದ್ಧ ಪ್ರಯೋಗ ಮಾಡುತ್ತಿದೆ.

ಉಕ್ರೇನ್ ಎಲ್ಲವನ್ನೂ ಕಳೆದುಕೊಂಡಿದೆ, ಈಗ ಉಳಿದಿರುವ ರಾಜಧಾನಿ ಪ್ರದೇಶ ರಕ್ಷಣೆಗೆ ಕೂಡ ಭಾರಿ ಒದ್ದಾಡುವ ವಾತಾವರಣ ಇದೆ. ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡರೂ ಅದು ಭವಿಷ್ಯದಲ್ಲಿ ಭಾರಿ ದೊಡ್ಡ ಅನಾಹುತಕ್ಕೆ ಕಾರಣ ಆಗಬಹುದು. ಇದೇ ಕಾರಣಕ್ಕೆ ಪಾಶ್ಚಿಮಾತ್ಯ ದೇಶಗಳ ಕಾಲಿಗೆ ಬಿದ್ದು ಸಹಾಯ ಪಡೆಯುತ್ತಿರುವ ಇದೇ ಉಕ್ರೇನ್, ನ್ಯಾಟೋ ಒಕ್ಕೂಟದ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ಪಡೆಯುತ್ತಿದೆ. ಇದರ ಜೊತೆಗೆ ಇದೀಗ ಖುದ್ದು ನ್ಯಾಟೋ ನೇರವಾಗಿ ಉಕ್ರೇನ್ ಪರ & ರಷ್ಯಾ ವಿರುದ್ಧ ಅಖಾಡ ಪ್ರವೇಶ ಮಾಡಿದೆಯಾ? ಎಂಬ ಅನುಮಾನ ಕೂಡ ಮೂಡಿದೆ. ಇತ್ತೀಚಿನ ಕೆಲವು ಬೆಳವಣಿಗೆ ಇಂತಹ ಭಾರಿ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ.

Ukraine and NATO Allegedly Collaborating on Sabotage Against Russia

ರಷ್ಯಾ ಕಡೆಯಿಂದ ಭೀಕರ ದಾಳಿಗೆ ಸಿದ್ಧತೆ?

ಹೌದು, ಒಂದು ಕಡೆ ರಷ್ಯಾ ತನ್ನ ಶತ್ರುಗಳ ವಿರುದ್ಧ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಲ್ಲೂ ಅಕಸ್ಮಾತ್ ಉಕ್ರೇನ್ ಜೊತೆಗೆ ನೇರವಾಗಿ ನ್ಯಾಟೋ ರಾಷ್ಟ್ರಗಳು ಯುದ್ಧಕ್ಕೆ ಎಂಟ್ರಿ ಕೊಟ್ಟರೆ ತಕ್ಷಣವೇ ಇದಕ್ಕೆ ದೊಡ್ಡ ರೀತಿಯ ಪ್ರತಿಕ್ರಿಯೆ ನೀಡಲು ರಷ್ಯಾ ಸಜ್ಜಾಗಿದೆ. ರಷ್ಯಾ ಕೂಡ ಪರಮಾಣು ಬಾಂಬ್ ಸಾಮರ್ಥ್ಯ ಇರುವ ದೇಶವಾಗಿರುವ ಕಾರಣ ಇದೀಗ ಟೆನ್ಷನ್ ಜಾಸ್ತಿ ಆಗುತ್ತಿದೆ. ಅಲ್ಲದೆ ಆದಷ್ಟು ಬೇಗ ಯುದ್ಧ ನಿಲ್ಲಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಯುದ್ಧ... ಜಗತ್ತಿನಾದ್ಯಂತ ಬರೀ ಯುದ್ಧದ ಭಯ ಕಾಡ್ತಿದೆ. ಹೌದು, ರಷ್ಯಾದ ಮೇಲೆ ಉಕ್ರೇನ್ ದಾಳಿ ಮಾಡಿ ಕೆಣಕಿದೆ ಅಂತಾ ಇದೀಗ ಮರುದಾಳಿ ಆರಂಭಿಸಿದೆ ರಷ್ಯಾದ ಸೇನೆ. ರಷ್ಯಾ ನಡೆಸಿದ ಡ್ರೋನ್ ದಾಳಿ ಉಕ್ರೇನ್‌ ಈಶಾನ್ಯ ಸುಮಿ ಪ್ರದೇಶವನ್ನು ನಾಶ ಮಾಡಿದೆ. ಸುಮಿ ಪ್ರದೇಶದ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಕನಿಷ್ಠ 30 ಜನ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಪ ಮಾಡಿದೆ. ಹೀಗಾಗಿ ಮತ್ತೆ ರಷ್ಯಾ & ಉಕ್ರೇನ್ ಯುದ್ಧ ಭಯದ ಅಲೆ ಎಬ್ಬಿಸಿದೆ. 2022 ಫೆಬ್ರವರಿ ತಿಂಗಳಲ್ಲಿ ಯುದ್ಧವನ್ನ ಆರಂಭಿಸಿದ ನಂತರ ರಷ್ಯಾ ಸೇನೆ ಉಕ್ರೇನ್‌ನ ರೈಲ್ವೆ ಮೂಲಸೌಕರ್ಯ ನಾಶ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+