ಶತ್ರು ನೆಲ ಪುಡಿ.. ಪುಡಿ.. ಹೊಸ ವರ್ಷಕ್ಕೆ ಅಬ್ಬರಿಸಿದ ರಷ್ಯಾ ಮಿಲಿಟರಿ

ಹೊಸ ವರ್ಷಕ್ಕೂ ರಷ್ಯಾ VS ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಎರಡು ದೇಶಗಳ ನಡುವೆ ಕಿತ್ತಾಟ ಮತ್ತಷ್ಟು ಜೋರಾಗುತ್ತಿದೆ. ಒಂದು ಕಡೆ, ರಷ್ಯಾ ಸಂಧಾನಕ್ಕಾಗಿ ಸಿದ್ಧವಾಗಿಲ್ಲ. ಮತ್ತೊಂದು ಕಡೆ ಉಕ್ರೇನ್ ಕೂಡ ಮಾತುಕತೆಗೆ ಮುಂದಾಗಿಲ್ಲ. ಈ ಹಿನ್ನೆಲೆ ಇಬ್ಬರು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ನಡೆಸುತ್ತಿದ್ದಾರೆ. ಈ ಪೈಕಿ ರಷ್ಯಾ ನೀಡುತ್ತಿರುವ ಒಂದೊಂದು ಏಟು ಕೂಡ ಹೇಗಿದೆ ಗೊತ್ತಾ?

ಉಕ್ರೇನ್‌ ರಾಜಧಾನಿ ಕೀವ್‌ ಸೇರಿ ಹಲವು ನಗರದ ಮೇಲೆ ರಷ್ಯಾ ಮಿಲಿಟರಿ ನಡೆಸಿರುವ ಕ್ಷಿಪಣಿ ದಾಳಿ ಸುನಾಮಿಯಂತೆ ಅಪ್ಪಳಿಸಿದೆ. ಇನ್ನು ರಷ್ಯಾ ಸೇನೆ ನಡೆಸಿದ ಈ ಭೀಕರ ದಾಳಿಯಿಂದ ಸುಮಾರು ಐವರು ಉಕ್ರೇನ್ ಪ್ರಜೆಗಳು ಜೀವ ಬಿಟ್ಟಿದ್ದಾರೆ. ಹಾಗೇ 130 ಜನ ಗಂಭೀರವಾಗಿ ಗಾಯಗೊಂಡಿದ್ದು, ಈ ದಾಳಿ ಉಕ್ರೇನ್‌ನಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹಾಗೂ ಜನರಲ್ಲಿ ಕೂಡ ಭಯದ ವಾತಾವರಣ ಮೂಡಿಸಿದೆ. ಹಾಗಾದರೆ ರಷ್ಯಾ ಸೇನೆ ಈ ದಾಳಿಗೆ ಬಳಸಿರುವ ಅಸ್ತ್ರ ಯಾವುದು? ರಷ್ಯಾ ತನ್ನ ಭಯಾನಕ ಕ್ಷಿಪಣಿಗಳನ್ನ ಹೊರ ತೆಗೆದಿದ್ದೇಕೆ? ಬನ್ನಿ ತಿಳಿಯೋಣ.

Ukraine Alleged That Russia Launched 10 Kinzhal Missiles To Attack Them

ಶಬ್ದಕ್ಕಿಂತ 10 ಪಟ್ಟು ವೇಗದ ಕ್ಷಿಪಣಿ!

ಒಂದು ಕಾಲದಲ್ಲಿ ಅಮೆರಿಕ ಮತ್ತು ರಷ್ಯಾ ದೇಶಗಳು ಸೇನೆ ವಿಚಾರದಲ್ಲಿ ಸಮವಾಗಿದ್ದವು. ಅದರಲ್ಲೂ ರಷ್ಯಾ ಬಳಿ ಇಡೀ ಜಗತ್ತನ್ನೇ ಕ್ಷಣ ಮಾತ್ರದಲ್ಲಿ ವಿನಾಶ ಮಾಡಬಲ್ಲ ಹೈಡ್ರೋಜನ್ ಬಾಂಬ್ ಕೂಡ ಇತ್ತು. ಆದರೆ ಕಾಲ ಕ್ರಮೇಣ ಎಲ್ಲವೂ ತಣ್ಣಗಾಗಿ ಹೋಗಿದೆ. ರಷ್ಯಾ ಸೇನೆ ಬಲ ಕೂಡ ಕುಸಿದಿದೆ. ಹೀಗಿದ್ದರೂ ರಷ್ಯಾ ಬಳಿ ಈಗಲೂ ವಿನಾಶಕಾರಿ ಅಸ್ತ್ರಗಳ ದೊಡ್ಡ ಸಂಗ್ರಹವೇ ಇದೆ.

ಈಗ ರಷ್ಯಾ ಉಕ್ರೇನ್ ವಿರುದ್ಧ ವಿನಾಶಕಾರಿ ಅಸ್ತ್ರಗಳ ಬಳಸಲು ಮುಂದಾಗಿರುವ ಆರೋಪ ಕೇಳಿಬರುತ್ತಿದೆ. ಅದರ ಭಾಗವಾಗಿ, ಶಬ್ದಕ್ಕಿಂತ 10 ಪಟ್ಟು ವೇಗವಾಗಿ ಸಂಚರಿಸುವ ಕಿಂಝಲ್ ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪವನ್ನ ಮಾಡಿದೆ. ಆದರೆ ಆ ಎಲ್ಲಾ 10 ಕ್ಷಿಪಣಿ ಹೊಡೆದು ಉರುಳಿಸಿದ್ದೇವೆ ಎಂದಿದೆ ಉಕ್ರೇನ್ ಸೇನೆ. ಹೀಗಾಗಿ ಉಕ್ರೇನ್ ಕೂಡ ಪ್ರತಿದಾಳಿ ನಡೆಸಲು ಸಿದ್ಧತೆ ನಡೆಸಿರುವ ಆರೋಪ ಕೇಳಿಬಂದಿದೆ.

Ukraine Alleged That Russia Launched 10 Kinzhal Missiles To Attack Them

ಇವು ಸಿಕ್ಕಾಪಟ್ಟೆ ಕಾಸ್ಟ್ಲಿ ಗುರೂ!

ರಷ್ಯಾ ನಡೆಸುತ್ತಿರುವ ದಾಳಿ ಅದೆಷ್ಟು ಭಯಾನಕವಾಗಿದೆ ಅಂದ್ರೆ, ಪ್ರಜೆಗಳು ನಲುಗಿದ್ದಾರೆ. ಕೀವ್‌ & ಸುತ್ತಮುತ್ತಲ ಜಾಗದಲ್ಲಿ 4 ಜನ ಮೃತಪಟ್ಟಿದ್ದಾರೆ, 70 ಮಂದಿ ಗಾಯಗೊಂಡಿದ್ದಾರೆ. ಕಾರ್ಕಿವ್ ಪ್ರದೇಶದಲ್ಲಿ ಒಬ್ಬರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿದೆ. ಹೀಗಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಕಿತ್ತಾಟ ಮತ್ತಷ್ಟು ಜೋರಾಗಿದೆ.

ಇನ್ನು ರಷ್ಯಾ ಈಗ ಬಳಕೆ ಮಾಡಿರುವ ಕ್ಷಿಪಣಿಯ ತಂತ್ರಜ್ಞಾನ ಅತ್ಯುತ್ತಮವಾಗಿದೆ. ಹೀಗೆ, Kh-47M2 Kinzhal ಖಂಡಾಂತರ ಕ್ಷಿಪಣಿ ಬೆಲೆ ಕೂಡ ಭಾರಿ ವೆಚ್ಚದ್ದಾಗಿದೆ. ದುಬಾರಿ ವೆಚ್ಚ ಮತ್ತು ಕಡಿಮೆ ಪ್ರಮಾಣದಲ್ಲಿ ಈ ಕ್ಷಿಪಣಿಗಳು ಇರುವ ಕಾರಣ, ಅಪರೂಪಕ್ಕೆ ರಷ್ಯಾ ಸೇನೆ ಈ ಕ್ಷಿಪಣಿಗಳನ್ನ ಬಳಸುತ್ತದೆ. ಆದರೂ ಭಯಾನಕ ಕ್ಷಿಪಣಿಗಳನ್ನ ನಾಶ ಮಾಡಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+