10 ವರ್ಷಗಳಿಂದ ನಿರಂತರ ಸೆಲ್ಫೀ; ಯುವಕನ ವಿಡಿಯೋಗೆ ಪ್ರಶಂಸೆ

ಬ್ರಿಟನ್, ಜನವರಿ 06: ಸೆಲ್ಫೀ ತೆಗೆದುಕೊಳ್ಳುವುದು ಈಗಂತೂ ಮಾಮೂಲು. ಬೇಕೋ, ಬೇಡವೋ ಮೊಬೈಲ್ ಮುಂದೆ ಮುಖವೊಡ್ಡಿ ಸೆಲ್ಫೀ ತೆಗೆದುಕೊಳ್ಳುವುದು ಎಷ್ಟೋ ಜನಕ್ಕೆ ಅಭ್ಯಾಸವೂ ಆಗಿಬಿಟ್ಟಿದೆ. ಆದರೆ ಹತ್ತು ವರ್ಷದಿಂದ ನಿರಂತರವಾಗಿ, ಒಂದು ದಿನವೂ ಬಿಡದೇ ಸೆಲ್ಫೀ ತೆಗೆದುಕೊಳ್ಳಲು ಸಾಧ್ಯವೇ?

ಇದು ಸಾಧ್ಯ ಎಂದಿರುವುದು ಬ್ರಿಟನ್ ನ ಈ ಯುವಕ. ಬ್ರಿಟನ್ ನಲ್ಲಿ ರೇಡಿಯೋ ನಿರೂಪಕರೂ ಆಗಿರುವ ನಿಯೋಲ್ ಗ್ರೇ ಸತತ ಹತ್ತು ವರ್ಷಗಳಿಂದ ಸೆಲ್ಫೀ ತೆಗೆದುಕೊಂಡಿದ್ದಾರೆ. ತಮ್ಮ 14ನೇ ವಯಸ್ಸಿನಿಂದ ಸೆಲ್ಫೀ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ನಿಯೋಲ್ ಗೆ ಈಗ 24 ವರ್ಷವಾಗಿದ್ದು, ತಮ್ಮ ಹತ್ತು ವರ್ಷದ ಈ ಸೆಲ್ಫೀ ಜರ್ನಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

UK Young Man Took Selfie Every Day Since 10 Years

ಈ ಸೆಲ್ಫೀಗಳನ್ನೆಲ್ಲಾ ಸೇರಿಸಿ ಸುಮಾರು ಎರಡು ನಿಮಿಷದ ವಿಡಿಯೋ ಮಾಡಿದ್ದಾರೆ. ಹತ್ತು ವರ್ಷದಿಂದ ಆಗಿರುವ ತಮ್ಮ ಬದಲಾವಣೆಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತಗೊಂಡಿದೆ.

code:

ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ ಸಾಕಷ್ಟು ಕಮೆಂಟ್ ಗಳೂ ಬಂದಿವೆ. ಹತ್ತು ವರ್ಷಗಳಿಂದ ಒಂದು ದಿನವೂ ಬಿಡದೇ ಸೆಲ್ಫೀ ತೆಗೆದುಕೊಂಡ ನಿಯೋಲ್ ಬದ್ಧತೆ ಮೆಚ್ಚುವಂಥದ್ದೇ ಎಂದು ಶ್ಲಾಘಿಸಿದ್ದಾರೆ ಕೂಡ. ನಿಯೋಲ್ ಈಗಿನಿಂದ ಮುಂದಿನ ಹತ್ತು ವರ್ಷ ಕೂಡ ಸೆಲ್ಫೀ ತೆಗೆದುಕೊಳ್ಳುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+