UK Trade: ಬ್ರಿಟನ್ ವಿರುದ್ಧ ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್ ಆಡಳಿತ, ಚೀನಾ ಜೊತೆ ಸ್ನೇಹವೇ ಮುಳುವಾಯ್ತು

ಅಮೆರಿಕ ಮತ್ತು ಬ್ರಿಟನ್ ನಡುವೆ ಇದೀಗ ಕಿಚ್ಚು ಹೊತ್ತಿಕೊಂಡಿದೆ, ಸ್ಟಾರ್ಮರ್ ಅವರ ಪ್ರವಾಸ ಮತ್ತು ಚೀನಾದಲ್ಲಿ ನಡೆದಿರುವ ಒಪ್ಪಂದಗಳ ಬಗ್ಗೆ ಇದೀಗ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಗರಂ ಆಗಿದೆ. ಅಲ್ಲದೆ ಸ್ಟಾರ್ಮರ್ ಅವರ ಚೀನಾ ಪ್ರವಾಸ ಮತ್ತು ಅದರ ಉದ್ದೇಶಗಳ ಬಗ್ಗೆ ಶ್ವೇತಭವನಕ್ಕೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದಾರೆ ಟ್ರಂಪ್‌ರ ಆಡಳಿತದ ಅಧಿಕಾರಿಗಳು. ಈ ಮೂಲಕ ಈಗಾಗಲೇ ಹಲವು ದೇಶಗಳ ಜೊತೆಗೆ ಕಿರಿಕ್ ಮಾಡಿಕೊಂಡಿರುವ ಅಮೆರಿಕದ ಟ್ರಂಪ್ ಅವರ ಆಡಳಿತ ಬ್ರಿಟನ್ ಜೊತೆಗೂ ಕಿರಿಕ್ ಶುರು ಮಾಡಿದೆ.

ಇಡೀ ಜಗತ್ತಿನಲ್ಲಿ ಚೀನಾ ಕಂಡರೆ ಡೊನಾಲ್ಡ್ ಟ್ರಂಪ್ ಅವರಿಗೆ ಎಲ್ಲಿಲ್ಲದ ಕೋಪ, ಅದರಲ್ಲೂ ಚೀನಾ ಜೊತೆ ಪಾಶ್ಚಿಮಾತ್ಯ ದೇಶಗಳು ಒಪ್ಪಂದ ಮಾಡಿಕೊಂಡರೆ ಸುಮ್ಮನೆ ಇರುತ್ತಾರಾ ಟ್ರಂಪ್? ಇಲ್ಲ ಇಲ್ಲ, ಈ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಇದೀಗ ಬ್ರಿಟನ್ ವಿರುದ್ಧ ಭಾರಿ ಆಕ್ರೋಶ ಹೊರ ಹಾಕಿದೆ. ಚೀನಾ ಮತ್ತು ಬ್ರಿಟನ್ ಆಪ್ತ ಸ್ನೆಹ ನೋಡಿ ಅಮೆರಿಕದ ಕಣ್ಣು ಈಗ ಕೆಂಪಾಗಿದೆ. ಒಂದು ಕಡೆ ಇರಾನ್ ಮತ್ತು ಅಮೆರಿಕ ತಿಕ್ಕಾಟದಲ್ಲಿ ಇರಾನ್ ಬೆನ್ನಿಗೆ ನಿಂತಿರುವ ಇದೇ ಚೀನಾ ಈಗಾಗಲೇ ಖಡಕ್ ವಾರ್ನಿಂಗ್ ರವಾನಿಸಿದೆ. ಇಷ್ಟೆಲ್ಲದರ ನಡುವೆ ದಿಢೀರ್ ಅಂತಾ ಅಮೆರಿಕ ಬ್ರಿಟನ್ ವಿರುದ್ಧ ಗರಂ ಆಗಿದೆ.

UK Trade

ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ

ಚೀನಾ ಜೊತೆಗೆ ಇದೀಗ ಒಪ್ಪಂದ ಮಾಡಿಕೊಳ್ಳಲು, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ವಿಶೇಷ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಬಗ್ಗೆ ಪ್ರಕ್ರಿಯೆ ನೀಡಿರುವ ಅಮೆರಿಕ ಆಕ್ರೋಶ ಹೊರ ಹಾಕಿದ್ದು, ಬ್ರಿಟನ್ ಚೀನಾದೊಂದಿಗೆ ವ್ಯವಹರಿಸುವುದು ತುಂಬಾ ಅಪಾಯಕಾರಿ ಎಂದಿದೆ. ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಾಗೇ ಬ್ರಿಟನ್ ಮತ್ತು ಚೀನಾ ನಡುವಿನ ಸಂಬಂಧ ಪುನರ್‌ಸ್ಥಾಪನೆಗೆ ಕೂಡ ಕೀರ್ ಸ್ಟಾರ್ಮರ್ ಇದೀಗ ವಿಶೇಷ ಮಾತುಕತೆ ನಡೆಸಿರುವುದು ಅಮೆರಿಕದ ಕೋಪ ಹೆಚ್ಚು ಮಾಡಿದೆ.

ಬ್ರಿಟನ್ ಪ್ರಧಾನಿ ಎಂಟ್ರಿಯಿಂದ ಸಂಚಲನ

2018 ನಂತರ ಬ್ರಿಟನ್ ಪ್ರಧಾನಿ ಒಬ್ಬರು ಇದೇ ಪ್ರಥಮ ಬಾರಿಗೆ ಚೀನಾ ಪ್ರವಾಸ ಕೈಗೊಂಡಿದ್ದು ಗಮನ ಸೆಳೆದಿದೆ. ಸಾಲು ಸಾಲು ಪಾಶ್ಚಿಮಾತ್ಯ ರಾಷ್ಟ್ರಗಳು ಚೀನಾ ಜೊತೆಗೆ ಸಂಬಂಧ ಸರಿಮಾಡಲು ಹೆಣಗಾಡುತ್ತಿವೆ, ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಚೀನಾ ಬಿಟ್ಟು ವ್ಯಾಪಾರ ಸಂಬಂಧವನ್ನು ಮುಂದುವರಿಸಲು ಸಾಧ್ಯ ಇಲ್ಲ. ಏಕೆಂದರೆ, ಪ್ರತಿಯೊಂದು ವಿಚಾರದಲ್ಲಿ ಕೂಡ ಚೀನಾ ಬೇಕೇ ಬೇಕು ಎಂಬ ವಾತಾವರಣ ಇದೆ. ಹೀಗಾಗಿಯೇ ಬ್ರಿಟನ್ ಪ್ರಧಾನಿ ಕೂಡ ಚೀನಾ ಭೇಟಿ ಕೈಗೊಂಡು ಮಹತ್ವದ ಸಭೆಗಳನ್ನು ನಡೆಸಿ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆದರೆ ಇದೇ ವಿಚಾರ ಅಮೆರಿಕ ಕಣ್ಣು ಕೆಂಪಾಗುವಂತೆ ಮಾಡಿದೆ.

ಒಟ್ನಲ್ಲಿ ಚೀನಾ ಮತ್ತು ಬ್ರಿಟನ್ ನಡುವೆ ನಡೆಯುತ್ತಿರುವ ಈ ವ್ಯಾಪಾರ ಒಪ್ಪಂದ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಏಕೆಂದರೆ ಅಮೆರಿಕದ ಸ್ನೇಹಿತ ದೇಶ ಬ್ರಿಟನ್ ಇದೀಗ ಚೀನಾಗೆ ಹತ್ತಿರ ಆಗಿ ಸಂಬಂಧ ಸರಿ ಮಾಡಿಕೊಳ್ಳುತ್ತಿದೆ. ಆದರೆ ಇದು ಅಮೆರಿಕಗೆ ಬಿಲ್‌ಕುಲ್ ಇಷ್ಟವೇ ಇಲ್ಲ, ಟ್ರಂಪ್ ಅವರು ಕೂಡ ಈ ಕಾರಣಕ್ಕೆ ಗರಂ ಆಗಿದ್ದಾರೆ. ಮುಂದೆ ಇದು ಯಾವ ರೀತಿಯ ತಿರುವು ಪಡೆಯುತ್ತೆ ಎಂಬುದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಕೆನಡಾ ಕೂಡ ಇದೇ ರೀತಿ ಚೀನಾ ಜೊತೆಗೆ ಇತ್ತೀಚೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+