Russia & Ukraine: ಉಕ್ರೇನ್‌ಗೆ ಭರ್ಜರಿ 580 ಮಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದ ಬ್ರಿಟನ್!

ಉಕ್ರೇನ್ ಹಣೆಬರಹ ನೆಟ್ಟಗೆ ಇದೆ ಅಂತಾ ಕಾಣುತ್ತಿದೆ, ಯಾಕಂದ್ರೆ ದಿಢೀರ್ ಭಾರಿ ದೊಡ್ಡ ಪ್ರಮಾಣದ ನೆರವು ಉಕ್ರೇನ್ ಸೇನೆಗೆ ಹರಿದು ಹರಿದು ಬರುತ್ತಿದೆ. ಇಷ್ಟು ದಿನಗಳ ಕಾಲ ಬರೀ ಅಮೆರಿಕದ ನೆರವು ಬರಲಿ ಅಂತಾ ಕಾಯುತ್ತಿದ್ದ ಉಕ್ರೇನ್‌ಗೆ ದಿಢೀರ್ ಯುರೋಪ್ ದೇಶಗಳ ನೆರವು ಭಾರಿ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಅದರಲ್ಲೂ ಬ್ರಿಟನ್ ಈಗ ಉಕ್ರೇನ್ ಬೆನ್ನಿಗೆ ಗಟ್ಟಿಯಾಗಿ ನಿಲ್ಲುತ್ತಿದೆ.

ಉಕ್ರೇನ್ & ರಷ್ಯಾ ಯುದ್ಧದಲ್ಲಿ ದೊಡ್ಡ ಅನಾಹುತ ನಡೆದು ಹೋಗುತ್ತಿದ್ದು, ಯುರೋಪ್ ಇದೀಗ ಸಂಕಷ್ಟದ ಸುಳಿಗೆ ಸಿಲುಕಿ ಪರದಾಡುತ್ತಿದೆ. ಏನು ಮಾಡಬೇಕು ಎಂಬ ಸ್ಥಿತಿಯಲ್ಲಿ ಯುರೋಪ್ ಪ್ರಜೆಗಳು ನರಳುತ್ತಿದ್ದಾರೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಈ ಉಕ್ರೇನ್ & ರಷ್ಯಾ ಯುದ್ಧ ಇಡೀ ಜಗತ್ತಿಗೇ ದೊಡ್ಡ ಕಂಟಕ ತರುವ ಭಯ ಕಾಡುತ್ತಿದೆ. ಇದು ಸಾಲದು ಎನ್ನುವಂತೆ ಯುದ್ಧ ನಿಲ್ಲಿಸುವುದು ಬಿಟ್ಟು ಉಕ್ರೇನ್‌ಗೆ ಮತ್ತೆ ಭಾರಿ ದೊಡ್ಡ ಪ್ರಮಾಣದ ನೆರವು ಘೋಷಣೆ ಮಾಡಿದೆ ಬ್ರಿಟನ್.

UK-led Military Support for Ukraine Totals USD 580 Million

580 ಮಿಲಿಯನ್ ಡಾಲರ್ ನೆರವು!

ಉಕ್ರೇನ್‌ಗೆ ಭರ್ಜರಿ 580 ಮಿಲಿಯನ್ ಡಾಲರ್ ನೆರವು ಘೋಷಣೆ ಮಾಡಿರುವ ಬ್ರಿಟನ್ ದಿಢೀರ್ ರಷ್ಯಾ ವಿರುದ್ಧ ತೊಡೆತಟ್ಟಿದೆ. ರಷ್ಯಾ & ಉಕ್ರೇನ್ ನಡುವೆ ಯುದ್ಧದಲ್ಲಿ ಮೊದಲಿನಿಂದಲೂ ಒಂದಷ್ಟು ಅಂತರ ಕಾಯ್ದುಕೊಂಡಿದ್ದ ಬ್ರಿಟನ್ ಇದೀಗ ದಿಢೀರ್ ಉಕ್ರೇನ್ ಪರವಾಗಿ ಭಾರಿ ದೊಡ್ಡ ಪ್ರಮಾಣದ ನೆರವು ನೀಡಲು ಮುಂದೆ ಬರುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ರೀತಿ ನೆರವು ನೀಡುವುದು ಜಾಸ್ತಿಯೇ ಆಗಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಸಂಬಂಧ ಗಟ್ಟಿ ಆಗುತ್ತಿದ್ದರೂ, ಮತ್ತೊಂದು ಕಡೆ ಬ್ರಿಟನ್ ಮಾಡುತ್ತಿರುವ ಈ ಕೆಲಸವು ರಷ್ಯಾ ಕಣ್ಣು ಕೆಂಪಗೆ ಮಾಡುತ್ತಿದೆ.

ಉಕ್ರೇನ್ ಪರವಾಗಿ ಸಾಕಷ್ಟು ಸಹಾಯ

ಯುದ್ಧ.. ಯುದ್ಧ.. ಯುದ್ಧ... ಹೀಗೆ ಜಗತ್ತಿನಾದ್ಯಂತ ಬರೀ ಯುದ್ಧ ಭಯ ಕಾಡ್ತಿದೆ. ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತೋ ಅದೇ ದಿನದಿಂದಲೇ ಭಯದ ವಾತಾವರಣ ಶುರುವಾಗಿದೆ. ರಷ್ಯಾ ದೇಶದ ಪ್ರಮುಖ ನಗರಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸುತ್ತಾ, ರಷ್ಯಾ ಸೇನೆಯನ್ನು ಕೆಣಕುತ್ತಿದೆ. ಇನ್ನೊಂದು ಕಡೆ ರಷ್ಯಾ ಕೂಡ ಉಕ್ರೇನ್ ದೇಶದ ಮೇಲೆ, ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಇಷ್ಟೆಲ್ಲಾ ಘಟನೆಗಳ ನಡುವೆ ಇದೀಗ ಉಕ್ರೇನ್‌ಗೆ ಭಾರಿ ದೊಡ್ಡ ಮೊತ್ತದ ಸಹಾಯ ಯುರೋಪ್ ದೇಶಗಳು ಹಾಗೂ ಬ್ರಿಟನ್ ಕಡೆಯಿಂದಲೇ ಬರುತ್ತಿದೆ. ಹೀಗಾಗಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ರಷ್ಯಾ & ಉಕ್ರೇನ್ ಬಡಿದಾಟ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+