ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ
Recommended Video

ಬ್ರಿಟನ್, ಫೆಬ್ರವರಿ 04 : ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ. ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿಜಯ ಮಲ್ಯ ಪರಾಗಿಯಾಗಿದ್ದರು.
ಉದ್ಯಮಿ ವಿಜಯ ಮಲ್ಯ ಗಡಿಪಾರು ಮಾಡುವ ಪತ್ರಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಇದರಿಂದಾಗಿ ವಿಜಯ ಮಲ್ಯ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ವಿಜಯ ಮಲ್ಯ ಗಡಿಪಾರಿಗೆ ಒಪ್ಪಿಗೆ ನೀಡಿತ್ತು. ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಿತ್ತು. ಅವರು ಇಂದು ಗಡಿಪಾರಿಗೆ ಒಪ್ಪಿಗೆ ನೀಡಿ, ನ್ಯಾಯಾಲಯದ ಆದೇಶ ಪ್ರತಿಗೆ ಸಹಿ ಹಾಕಿದ್ದಾರೆ.
ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಲು ಕಾನೂನು ತೊಡಕು ಉಂಟಾಗಿತ್ತು. ಮಲ್ಯ ಗಡಿಪಾರು ಮಾಡಲು ಯುಕೆ ಸರ್ಕಾರ ಎಂಎಲ್‌ಟಿ ಒಪ್ಪಂದ ಅಡ್ಡವಾಗಿತ್ತು. ಈಗ ಎಲ್ಲಾ ಕಾನೂನು ತೊಡಕು ಅಂತ್ಯಗೊಂಡಿದ್ದು, ಗಡಿಪಾರಿಗೆ ಅಂಕಿತ ಬಿದ್ದಿದೆ.
A mutual legal assistance treaty (MLAT) ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಡ್ 1995ರಲ್ಲಿ ಸಹಿ ಮಾಡಿದ್ದವು. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತೆ ಮಾಡಿಕೊಳ್ಳಲು ಅವಕಾಶವಿದೆ.
ವಿಜಯ ಮಲ್ಯ ಅವರು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಣೆ ಮಾಡಲಾಗಿದೆ. ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಈ ಕುರಿತು ಘೋಷಣೆ ಮಾಡಲಾಗಿದೆ. ವಿಜಯ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲು ಸಾಕಷ್ಟು ಒತ್ತಡವಿತ್ತು.












Click it and Unblock the Notifications