ನೈಜೀರಿಯಾದಲ್ಲಿ ಬಂದೂಕುಧಾರಿಗಳಿಂದ ಇಬ್ಬರು ಭಾರತೀಯರ ಅಪಹರಣ
ಲಾಗೋಸ್, ಡಿಸೆಂಬರ್ 14: ನೈಜೀರಿಯಾದಲ್ಲಿ ದುಷ್ಕರ್ಮಿಗಳು ಹಣೆಗೆ ಗನ್ ಇಟ್ಟು ಇಬ್ಬರು ಭಾರತೀಯರನ್ನು ಅಪಹರಣ ಮಾಡಿದ್ದಾರೆ. ಈ ನೈಋತ್ಯ ನೈಜೀರಿಯಾದ ಪೊಲೀಸರು ಮಾಹಿತಿ ನೀಡಿದ್ದು, ವಿದೇಶಿ ಪ್ರಜೆಗಳು ಜಾಗರೂಕರಾಗಿರಿ ಎಂದು ಹೇಳಿದ್ದಾರೆ.
ಓಯೋ ರಾಜ್ಯದ ರಾಜಧಾನಿಯಾದ ಇಬಾಡಾನ್‌ನಲ್ಲಿರುವ ಔಷಧೀಯ ಸಂಸ್ಥೆಯ ಹೊರಗೆ ಓಡಾಡುತ್ತಿದ್ದಾಗ ಬಂದೂಕುಧಾರಿಗಳು ಇಬ್ಬರನ್ನು ಅಪಹರಿಸಿದ್ದಾರೆ.
ಅಪಹರಣಕಾರರು ಅಪಹೃತರಾದ ಕುಟುಂಬದವರನ್ನು ಸಂಪರ್ಕಿಸಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಶೀಘ್ರವೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ವಲಸಿಗರು ಜಾಗರೂಕರಾಗಿರಲು ಮತ್ತು ವಿಶೇಷವಾಗಿ ಈ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅನುಮಾನಾಸ್ಪದ ಸಂಗತಿಗಳು ಕಂಡುಬಂದರೂ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ನೈಜೀರಿಯಾದಲ್ಲಿ ನೂರಾರು ಮಂದಿ ಭಾರತೀಯರು ವಾಸವಿದ್ದಾರೆ. ಅಪಹರಣಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.ವಿದೇಶಿ ಪ್ರಜೆಗಳನ್ನು ಅಪಹರಣ ಮಾಡುವುದೇ ಅವರ ಉದ್ದೇಶವೇ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.












Click it and Unblock the Notifications