ಚೀನಾ, ಟರ್ಕಿ, ರಷ್ಯಾ ಸರ್ಕಾರಕ್ಕೆ ಸೇರಿದ ಖಾತೆಗಳನ್ನು ತೆಗೆದುಹಾಕಿದ ಟ್ವಿಟ್ಟರ್

ಸ್ಯಾನ್ ಫ್ರಾನ್ಸಿಸ್ಕೋ, ಜೂನ್ 12: ಚೀನಾ, ಟರ್ಕಿ ಹಾಗೂ ರಷ್ಯಾಗೆ ಸೇರಿದ ಎಲ್ಲಾ ಖಾತೆಗಳನ್ನು ಟ್ವಿಟ್ಟರ್ ತೆಗೆದುಹಾಕಿದೆ.

ತಪ್ಪು ಮಾಹಿತಿ ಹರಡುವುದು, ಸಿದ್ಧಾಂತಗಳನ್ನು ಪ್ರಚಾರ ಮಾಡುವುದು ಅಥವಾ ಆಡಳಿತದ ಟೀಕಾಕಾರರನ್ನು ನಿಂದಿಸಲು ಈ ಖಾತೆಗಳು ಬಳಕೆಯಾಗುತ್ತಿದ್ದವು ಎಂದು ಟ್ವಿಟ್ಟರ್ ಹೇಳಿದೆ.

ಈ ಮೊದಲು ಟ್ವಿಟ್ಟರ್ ಖಾತೆಯನ್ನು ತೆಗೆದುಹಾಕುವುದಾಗಿ ಚೀನಾಗೆ ಟ್ವಿಟ್ಟರ್ ಎಚ್ಚರಿಕೆ ನೀಡಿತ್ತು. ಈ ಮೂರು ದೇಶಗಳಿಗೆ ಸಂಬಂಧಿಸಿದಂತೆ 1,70,000 ಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕಲಾಗಿದೆ.

Twitter Removes China Russia And Turkey Linked Accounts

ಚೀನಾಗೆ ಹೋಲಿಕೆ ಮಾಡಿದರೆ ಟರ್ಕಿ ಹಾಗೂ ರಷ್ಯಾದ ನೆಟ್‌ವರ್ಕ್‌ಗಳು ಚಿಕ್ಕದಾಗಿದ್ದು, ಕ್ರಮವಾಗಿ 7,340 ಮತ್ತು 1,152 ಖಾತೆಗಳನ್ನು ಹೊಂದಿದ್ದವು. ತೆಗೆದುಹಾಕಿರುವ ಹೆಚ್ಚಿನ ಖಾತೆಗಳು ಚೀನಾ ಸರ್ಕಾರದ ಸಂಪರ್ಕಗಳನ್ನು ಹೊಂದಿದ್ದು, 23,750 ಖಾತೆಗಳನ್ನು ಹೆಚ್ಚು ಪ್ರಚಲಿತದಲ್ಲಿಡಲು 1,50,000 ವರ್ಧಕ ಖಾತೆಗಳನ್ನು ತೆರೆಯಲಾಗಿತ್ತು ಎಂದು ಟ್ವಿಟ್ಟರ್ ಮಾಹಿತಿ ನೀಡಿದೆ.

ಮೂರು ದೇಶಗಳಿಗೆ ಸಂಬಂಧಿಸಿದ ಖಾತೆಗಳನ್ನು ತೆಗೆದುಹಾಕಲಾಗಿದೆ. ಆದರೆ ಅವುಗಳಲ್ಲಿನ ಕಂಟೆಂಟ್‌ಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಟ್ವಿಟ್ಟರ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+