ಇಸ್ರೇಲ್ ಪರ ‘ಗೂಢಚಾರ’ ಆರೋಪ, 33 ಜನ ಅಂದರ್!

ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವೆ ಭೀಕರ ರಣಕಾಳಗ ನಡೆಯುತ್ತಿದೆ. ಯುದ್ಧವು ಈಗಾಗಲೇ 22,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪ್ರಜೆಗಳನ್ನ ಬಲಿ ತೆಗೆದುಕೊಂಡ ಆರೋಪವು ಕೇಳಿಬರುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಈ ಯುದ್ಧ 3 ತಿಂಗಳು ಪೂರೈಸಲಿದೆ. ಹಾಗೇ 4ನೇ ತಿಂಗಳಿಗೆ ಕಾಲಿಡಲಿದೆ. ಆದರೆ ಇದೇ ಸಮಯದಲ್ಲಿ ಇಸ್ರೇಲ್‌ಗೆ ದೊಡ್ಡ ಶಾಕ್ ಕೊಟ್ಟಿದೆ ಟರ್ಕಿ! ಅದು ಹೇಗೆ ಗೊತ್ತಾ?

ಈಗ ಮಧ್ಯಪ್ರಾಚ್ಯ ದೇಶಗಳು ಇಸ್ರೇಲ್ ವಿರುದ್ಧ ತಿರುಗಿಬಿದ್ದಿವೆ ಅನ್ನೋದು ಗೊತ್ತಿರುವ ವಿಚಾರ. ಅದರಲ್ಲೂ ಟರ್ಕಿ & ಇಸ್ರೇಲ್ ನಡುವೆ ಸಂಬಂಧ ದಿನದಿಂದ ದಿನಕ್ಕೆ ಹಳಸಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಸೂಕ್ಷ್ಮವಾಗಿರುವ ಸಮಯಕ್ಕೇ, ಇಸ್ರೇಲ್‌ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರ ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರಂತೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಮತ್ತೆ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ಭೀಕರ ಯುದ್ಧ ನಡೆಯುವಾಗಲೇ ಈ ಬೆಳವಣಿಗೆ ಭಾರಿ ಸಂಚಲನ ಕೂಡ ಸೃಷ್ಟಿ ಮಾಡಿದೆ.

Turkey Detains 33 Suspects For Allegedly Spying To Israel

ಇಸ್ರೇಲ್ ಪರ 'ಗೂಢಚಾರ' ಆರೋಪ

ಅಂದಹಾಗೆ ಟರ್ಕಿ ಅಧಿಕಾರಿಗಳು ಒಟ್ಟು 8 ಪ್ರಾಂತ್ಯದ 57 ಸ್ಥಳಗಳಲ್ಲಿ ದಿಢೀರ್ ಈ ದಾಳಿ ನಡೆಸಿದ್ದಾರಂತೆ. ಆಗ 33 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ 12 ಶಂಕಿತರಿಗೆ ಹುಡುಕಾಟ ಮುಂದುವರಿದಿದೆ ಎಂದು ವರದಿಯಾಗಿದೆ. ಬಂಧಿತ ಶಂಕಿತರು ಈಗ ಮೊಸಾದ್ ಪರವಾಗಿ ಕಣ್ಗಾವಲು ನಡೆಸುತ್ತಿದ್ದರು ಎಂಬ ಆರೋಪ ಹೊರಿಸಲಾಗಿದೆ. ಆದರೆ ಈವರೆಗೂ ಅರೆಸ್ಟ್ ಆಗಿರುವ ಶಂಕಿತರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಟರ್ಕಿ ಇನ್ನೂ ರಹಸ್ಯವಾಗಿಯೇ ಇಟ್ಟಿದೆ ಎನ್ನಲಾಗಿದೆ.

ಇನ್ನಷ್ಟು ಹಳಸಿ ಹೋಗುತ್ತಾ ಸಂಬಂಧ?

ಹಮಾಸ್ ತಪ್ಪಿಗೆ ಕಳೆದ 3 ತಿಂಗಳಿಂದ ಗಾಜಾದಲ್ಲಿ ಸಾಮಾನ್ಯ ಜನರು ನರಳುತ್ತಿದ್ದು ಈಗಾಗಲೇ 22,000ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ನಡುವೆ ಇಸ್ರೇಲ್ 1,200 ಜನರನ್ನ ಕಳೆದುಕೊಂಡಿದೆ. ಈ ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಅಮೆರಿಕ ಅಡ್ಡಿ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ, ಗಾಜಾ ಮೇಲೆ ದಾಳಿ ಮಾಡುವ ಜೊತೆ ಇಸ್ರೇಲ್‌ ಸೇನೆ ವೆಸ್ಟ್‌ ಬ್ಯಾಂಕ್‌ ಮೇಲೆ ಭಾರಿ ಅಟ್ಯಾಕ್ ನಡೆಸಿದೆ ಎನ್ನಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ದಿಢೀರ್ ಟರ್ಕಿ ಮಹತ್ವದ ನಿರ್ಧಾರ ಕೈಗೊಂಡಿದೆ. ಹೀಗೆ ಇಸ್ರೇಲ್ & ಟರ್ಕಿ ನಡುವೆಯೂ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ದಟ್ಟವಾಗಿದೆ.

Turkey Detains 33 Suspects For Allegedly Spying To Israel

ಒಟ್ನಲ್ಲಿ ಹಮಾಸ್ VS ಇಸ್ರೇಲ್ ಯುದ್ಧ ಸದ್ಯಕ್ಕೆ ಸೈಲೆಂಟ್ ಆಗುವ ಯಾವುದೇ ಲಕ್ಷಣವೂ ಗೋಚರಿಸುತ್ತಿಲ್ಲ. ಯುದ್ಧ ನಿಲ್ಲಿಸುವ ಬದಲಾಗಿ ಈ ತಿಕ್ಕಾಟ ಮತ್ತಷ್ಟು ಕಠಿಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ನಡೆ ಕೂಡ ಸಾಕಷ್ಟು ಗಮನ ಸೆಳೆದಿದೆ. ಮತ್ತೊಂದೆಡೆ ಗಾಜಾ ನಗರದ ಜನರು ತುತ್ತು ಅನ್ನಕ್ಕಾಗಿ & ತೊಟ್ಟು ನೀರಿಗಾಗಿ ಪರದಾಡುತ್ತಿದ್ದಾರೆ. ಈ ಕುರಿತಾಗಿ ಜಗತ್ತಿನಾದ್ಯಂತ ಹೋರಾಟ, ಪ್ರತಿಭಟನೆಗಳು ಕೂಡ ಜೋರಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+