Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಗೆಲುವು, ‘ಬ್ಯೂಟಿಫುಲ್ ಬಿಲ್’ ಅಂಗೀಕಾರ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಭರ್ಜರಿ ಗೆಲುವು ಸಿಕ್ಕಿದೆ, ಹಲವರನ್ನು ಎದುರು ಹಾಕಿಕೊಂಡು ಡೊನಾಲ್ಡ್ ಟ್ರಂಪ್ ಜಾರಿಗೆ ತರಲು ಹೊರಟಿದ್ದ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಇದೀಗ ಅಮೆರಿಕ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಅಮೆರಿಕದಲ್ಲಿ ಮತ್ತೊಮ್ಮೆ ಟ್ರಂಪ್ ನಿರ್ಧಾರ ಭಾರಿ ದೊಡ್ಡ ಹವಾ ಎಬ್ಬಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧಿಗಳ ಎದೆಯಲ್ಲಿ ನಡುಕ ಕೂಡ ಶುರುವಾಗಿದೆ. ಟ್ರಂಪ್ ಬೆನ್ನಿಗೆ ಅಮೆರಿಕನ್ ಕಾಂಗ್ರೆಸ್ ಸದಸ್ಯರು ಕೂಡ ನಿಂತಿದ್ದಾರೆ.
ಹೌದು, ತೆರಿಗೆ ವಿನಾಯಿತಿ ಮತ್ತು ವೆಚ್ಚ ಕಡಿತ ಮಸೂದೆ ಅಂತಾ ಕೂಡ ಗುರುತಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರ 'ಒನ್ ಬಿಗ್ ಬ್ಯೂಟಿಫುಲ್' ಬಿಲ್ ಇದೀಗ ಪಾಸ್ ಆಗಿದೆ. ಅಮೆರಿಕ ಸಂಸತ್ತಿನಲ್ಲಿ & ಹಾಗೇ ಯುಎಸ್ ಕಾಂಗ್ರೆಸ್ ಕೂಡ ಇದನ್ನ ಅಂಗೀಕರಿಸಿದೆ. ಈ ಮೂಲಕ ಮಸೂದೆ ಜಾರಿಗೆ ಬರಲು ಟ್ರಂಪ್ ಅವರ ಸಹಿ ಮಾತ್ರ ಬಾಕಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು 'ಒನ್ ಬಿಗ್ ಬ್ಯೂಟಿಫುಲ್' ಬಿಲ್‌ಗೆ ಸಹಿ ಹಾಕುವ ನಿರೀಕ್ಷೆ ಇದೆ. ಮತ್ತೊಂದು ಕಡೆ, ಈ ಮಸೂದೆ ಹಲವು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಅಮೆರಿಕದಲ್ಲಿ ತಲ್ಲಣ ಎಬ್ಬಿಸಲು ಸಜ್ಜಾಗಿದೆ.

ಏನೆಲ್ಲಾ ಬದಲಾವಣೆ ಆಗಲಿದೆ ಮಸೂದೆಯಿಂದ?
ಅಂದಹಾಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು 'ಒನ್ ಬಿಗ್ ಬ್ಯೂಟಿಫುಲ್' ಮಸೂದೆ ಮೂಲಕ ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಹಣ ಉಳಿಸಲು ಪ್ಲಾನ್ ಮಾಡಿದ್ದಾರೆ. ತೆರಿಗೆ ಕಡಿತ, ಮಿಲಿಟರಿ ಬಜೆಟ್, ರಕ್ಷಣಾ ಮತ್ತು ಇಂಧನ ಉತ್ಪಾದನೆಗೆ ಹೆಚ್ಚಿದ ಖರ್ಚು ಸೇರಿದಂತೆ ಅಮೆರಿಕದ ಪ್ರಜೆಗಳಿಗೆ ಹಲವು ಅನುಕೂಲ ಮಾಡೋಕೆ ಕೂಡ ಈ 'ಒನ್ ಬಿಗ್ ಬ್ಯೂಟಿಫುಲ್' ಸಹಾಯ ಮಾಡಲಿದೆ. ಇದರ ಜೊತೆಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಅಮೆರಿಕ ಸರ್ಕಾರದ ಹಣ ವ್ಯಯವನ್ನು ಕಡಿಮೆ ಮಾಡಲು ಮುಂದಾಗಲಿದೆ. ಇದು ಒಂದು ಕಡೆ ಅಮೆರಿಕದ ಜನರಿಗೆ ಅನುಕೂಲ ಸೃಷ್ಟಿ ಮಾಡಿದರೂ, ಮತ್ತೊಂದು ಕಡೆಯಲ್ಲಿ ಇದರಿಂದ ಭಾರಿ ಅನಾನುಕೂಲ ಇದೆ ಅನ್ನೋ ಆರೋಪ ಕೇಳಿ ಬಂದಿತ್ತು.
ವಲಸೆ ಹೋದವರಿಗೆ ಸಾಕಷ್ಟು ಸಂಕಷ್ಟ?
ಹೀಗಾಗಿಯೇ 'ಒನ್ ಬಿಗ್ ಬ್ಯೂಟಿಫುಲ್' ಮಸೂದೆ ಬಗ್ಗೆ ಪರ & ವಿರೋಧದ ಚರ್ಚೆ ಜೋರಾಗಿತ್ತು. ಹಾಗೇ ಅಕ್ರಮ ವಲಸಿಗರು ಸೇರಿದಂತೆ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಅಮೆರಿಕಗೆ ವಲಸೆ ಹೋಗಿದ್ದ ಬೇರೆ ದೇಶಗಳ ಪ್ರಜೆಗಳಿಗೆ ಕೂಡ ಸಮಸ್ಯೆ ಮಾಡುವ ಆತಂಕ ಆವರಿಸಿದೆ. ಇನ್ನು ಅಮೆರಿಕದಲ್ಲೇ ಈ ಬಿಲ್ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಆದರೆ ಕೊನೆಗೂ ಬಿಲ್ ಪಾಸ್ ಆಗಿದ್ದು, ಇನ್ನೇನು ಟ್ರಂಪ್ ಅವರ ಸಹಿ ಬಿದ್ದ ತಕ್ಷಣ ಜಾರಿಗೆ ಬರಲಿದೆ.












Click it and Unblock the Notifications