Donald Trump: ಡೊನಾಲ್ಡ್ ಟ್ರಂಪ್ ಎಂಟ್ರಿಗೆ 14 ದಿನ ಬಾಕಿ, ಕಾಯುತ್ತಿವೆ ಬೆಟ್ಟದಷ್ಟು ಸವಾಲು!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿ ಬರೋಬ್ಬರಿ 2 ತಿಂಗಳು ಕಳೆದಿದ್ದು, ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2016 ರಲ್ಲಿ ಮೊದಲ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಡೊನಾಲ್ಡ್ ಟ್ರಂಪ್ ಅವರು, 2017 ರಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಇದೇ ಟ್ರಂಪ್ ಅವರು ಹೀನಾಯ ಸೋಲು ಕಂಡಿದ್ದರು.
ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಮಾಡಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು, ಲಕ್ಷ ಲಕ್ಷ ಕೋಟಿ ರೂಪಾಯಿ ಆಸ್ತಿ ಇರುವ ಶ್ರೀಮಂತರ ಸಮೇತ ಹಾಲಿವುಡ್ ಸೆಲೆಬ್ರಿಟಿಗಳು ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು.

ಹೀಗೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭರ್ಜರಿಯಾಗೇ ಗೆದ್ದು ಬೀಗಿದ್ದ ಡೊನಾಲ್ಡ್ ಟ್ರಂಪ್ ಅವರು 2025ರ ಜನವರಿ 20 ರಂದು ಅಧಿಕಾರ ಸ್ವೀಕಾರ ಮಾಡಿ ಅಮೆರಿಕ ಅಧ್ಯಕ್ಷರಾಗಿ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ. ಆದರೆ, ಇದಕ್ಕೂ ಮೊದಲು ಅಮೆರಿಕದಲ್ಲಿ ಸಂಚಲನ ಸೃಷ್ಟಿಯಾಗಿದೆ!
ಕಾಯುತ್ತಿವೆ ಬೆಟ್ಟದಷ್ಟು ಸವಾಲು!
ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ನೂರಾರು ಸಮಸ್ಯೆ ಎದುರಾಗಿವೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಸೇರಿ, ಮಧ್ಯಪ್ರಾಚ್ಯದ ಇಸ್ರೇಲ್ & ಪ್ಯಾಲೆಸ್ತೀನ್ ವಾರ್, ಇಸ್ರೇಲ್ & ಲೆಬನಾನ್ ಯುದ್ಧ ಹೀಗೆ ಹಲವು ಸಮಸ್ಯೆಗಳು ಅಮೆರಿಕದ ಬೆನ್ನು ಬಿದ್ದಿವೆ. ಹೀಗಾಗಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಮಾಡಿದ ನಂತರ ದೊಡ್ಡ ಸವಾಲುಗಳು ಎದುರಾಗಲಿವೆ. 2016ರ ಟ್ರಂಪ್ ಗೆಲುವು ಒಂದು ಲೆಕ್ಕ, 2024ರ ಟ್ರಂಪ್ ಗೆಲುವು ಮತ್ತೊಂದು ಲೆಕ್ಕ ಎನ್ನುವಂತಾಗಿದೆ.
ಉಕ್ರೇನ್‌ಗೆ ಬುದ್ಧಿ ಹೇಳುತ್ತಿರುವ ಟ್ರಂಪ್ ಟೀಂ?
ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡನ್ ಅಧಿಕಾರ 2025 ಜನವರಿ 20ಕ್ಕೆ ಕೊನೆ ಆಗಲಿದೆ, ಆ ನಂತರ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗೆ ಟ್ರಂಪ್ ಅಧಿಕಾರವನ್ನು ವಹಿಸಿಕೊಂಡ ತಕ್ಷಣವೇ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕದಿಂದ ಸಿಗುತ್ತಿರುವ ನೆರವು ಕೂಡ ನಿಂತು ಹೋಗುವ ಆತಂಕ ಕಾಡುತ್ತಿದೆ.
ಯಾಕಂದ್ರೆ ಉಕ್ರೇನ್ ವಿರೋಧಿ ನಿಲುವು ಇದೀಗ ಅಮೆರಿಕದಲ್ಲಿ ಹೆಚ್ಚಾಗಿದ್ದು, ಈ ಕಾರಣಕ್ಕೆ ಟ್ರಂಪ್ ಕೂಡ ಉಕ್ರೇನ್‌ಗೆ ನೀಡುತ್ತಿರುವ ಅನುದಾನ ಕಟ್ ಮಾಡಲು ಚಿಂತಿಸುತ್ತಿದ್ದಾರೆ. ಹೀಗಾಗಿ ಮೊದಲು ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಡೊನಾಲ್ಡ್ ಟ್ರಂಪ್. ಈ ಕಾರಣಕ್ಕೆ ಜೋ ಬೈಡನ್ ಸೇರಿ ಉಕ್ರೇನ್ ಅಧಿಕಾರಿಗಳ ಜೊತೆಗೂ ಮಹತ್ವದ ಚರ್ಚೆಗಳು ಆರಂಭ ಆಗಿದ್ದು, ಆದಷ್ಟು ಬೇಗನೇ ಎಲ್ಲಾ ಬಗೆಹರಿಯುವ ಮುನ್ಸೂಚನೆ ಕೂಡ ಇದೆ. ಹೀಗಾಗಿ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲು ಹಲ್‌ಚಲ್ ಎದ್ದಿದೆ.












Click it and Unblock the Notifications