Russia & Ukraine: ಉಕ್ರೇನ್ ಸೈಲೆಂಟ್ ಮಾಡಿ, ರಷ್ಯಾ ವಿರುದ್ಧದ ಯುದ್ಧ ನಿಲ್ಲಿಸಲು ಟ್ರಂಪ್ ತಂಡದ ಪ್ರಯತ್ನ?
ಉಕ್ರೇನ್ ಸುಮ್ಮನೆ ಎಗರಾಡುತ್ತಿದೆ, ರಷ್ಯಾ ವಿರುದ್ಧ ಗೆಲ್ಲಲು ಆಗಲ್ಲ ಅಂತಾ ಗೊತ್ತಿದ್ದರೂ ಈ ರೀತಿಯಾಗಿ ಉಕ್ರೇನ್ ತನ್ನ ಕಿರಿಕ್ ಮುಂದುವರಿಸಿದೆ ಅಂತಾ ಜನ ಆರೋಪ ಮಾಡುತ್ತಿದ್ದಾರೆ. ಯಾಕಂದ್ರೆ ಈ ಮಾತು ನಿಜ ಕೂಡ, ರಷ್ಯಾ ಸೇನೆಯ ಎದುರು ಉಕ್ರೇನ್ ಮಿಲಿಟರಿ ಹೋಲಿಕೆ ಮಾಡಲು ಕೂಡ ಅಸಾಧ್ಯ. ರಷ್ಯಾ ಸೇನೆಯ ಬಳಿ ಇಡೀ ಉಕ್ರೇನ್ ನಾಶ ಮಾಡಬಲ್ಲ ಅಸ್ತ್ರ ಇದೆ ಅನ್ನೋ ಆರೋಪಗಳು ಕೂಡ ಇವೆ.
ಇದನ್ನೆಲ್ಲಾ ನೋಡುತ್ತಿದ್ದರೆ ರಷ್ಯಾ ಮಿಲಿಟರಿಯ ಬಲದ ಎದುರು ಉಕ್ರೇನ್ ಸೇನೆಯ ತಾಕತ್ ಏನಕ್ಕೂ ಸಾಕಾಗಲ್ಲ. ಹೀಗಿದ್ದರೂ ಉಕ್ರೇನ್ ಮಾತ್ರ ರಷ್ಯಾ ಎದುರು ಶರಣಾಗದೆ, ಮತ್ತೆ ಮತ್ತೆ ರಷ್ಯಾ ಸೇನೆಯನ್ನ ಕೆಣಕುತ್ತಿರುವ ಆರೋಪ ಕೇಳಿ ಬಂದಿದೆ. ಇದೇ ಸಮಯದಲ್ಲಿ ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲರ್ಟ್ ಆಗಿದ್ದಾರೆ. ತಾವು ಅಧಿಕಾರಕ್ಕೆ ಬಂದ ದಿನವೇ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಿ ಕೊನೆಯ ಮೊಳೆ ಹೊಡೆಯಲು ಸಜ್ಜಾಗಿದ್ದಾರೆ.

ಉಕ್ರೇನ್‌ಗೆ ಬುದ್ಧಿ ಹೇಳುತ್ತಿರುವ ಟ್ರಂಪ್ ಟೀಂ?
ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅಧಿಕಾರ 2025ರ ಜನವರಿಗೆ ಅಂತ್ಯವಾಗಲಿದ್ದು, ಆ ನಂತರ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕದಿಂದ ಸಿಗುತ್ತಿರುವ ನೆರವು ನಿಂತು ಹೋಗುವ ಆತಂಕ ಕಾಡುತ್ತಿದೆ.
ಯಾಕಂದ್ರೆ, ಉಕ್ರೇನ್ ವಿರೋಧಿ ನಿಲುವು ಅಮೆರಿಕದಲ್ಲಿ ಹೆಚ್ಚಾಗಿದ್ದು ಈ ಕಾರಣಕ್ಕೆ ಟ್ರಂಪ್ ಕೂಡ ಉಕ್ರೇನ್‌ಗೆ ನೀಡುತ್ತಿರುವ ಅನುದಾನ ಕಟ್ ಮಾಡಲು ಚಿಂತಿಸುತ್ತಿದ್ದಾರೆ. ಹೀಗಾಗಿಯೇ ಮೊದಲು ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಈ ಕಾರಣಕ್ಕೆ ಜೋ ಬೈಡನ್ ಸೇರಿದಂತೆ ಉಕ್ರೇನ್ ಅಧಿಕಾರಿಗಳ ಜೊತೆ ಮಹತ್ವದ ಚರ್ಚೆಗಳು ಆರಂಭ ಆಗಿದ್ದು, ಆದಷ್ಟು ಬೇಗ ಎಲ್ಲವೂ ಬಗೆಹರಿಯುವ ಮುನ್ಸೂಚನೆ ಕೂಡ ಸಿಕ್ಕಿದೆ.
ಚಾಲೆಂಜ್ ಹಾಕಿದ್ದಾರೆ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಅವರ ತಂಡ ಇದೀಗ ಮಹತ್ವದ ಸಭೆಗಳನ್ನ ಆಯೋಜನೆ ಮಾಡಿ ಯುದ್ಧ ನಿಲ್ಲಿಸಲು ಕಾರ್ಯತಂತ್ರ ರೂಪಿಸುತ್ತಿದೆ. ಹಾಗೇ ಜೋ ಬೈಡನ್ ಅವರ ಮೇಲೆ ಕೂಡ ಈಗ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೂಡ ಹರಿದಾಡುತ್ತಿದ್ದು, ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು ತಾವು ಅಮೆರಿಕದ ಅಧಿಕಾರ ವಹಿಸಿಕೊಂಡ ತಕ್ಷಣ ಯುದ್ಧ ನಿಲ್ಲಿಸುವ ಬಗ್ಗೆ ಚಾಲೆಂಜ್ ಕೂಡ ಹಾಕಿದ್ದಾರೆ.












Click it and Unblock the Notifications