Donald Trump Tariffs: ತೆರಿಗೆ ಯುದ್ಧ ಮಾಡಲು ಹೋಗಿ ಷೇರು ಮಾರುಕಟ್ಟೆಗೆ ಬೆಂಕಿ ಇಟ್ಟರಾ ಡೊನಾಲ್ಡ್ ಟ್ರಂಪ್?

ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿ ಪ್ರಕಟಿಸಿದ ನಂತರ ದೊಡ್ಡ ಕೋಲಾಹಲವೇ ಸೃಷ್ಟಿ ಆಗಿದೆ. ಜಾಗತಿಕ ಆರ್ಥಿಕತೆ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ನಲುಗಿ ಹೋಗಿದ್ದು, ಈ ಹೊಸ ಟ್ಯಾಕ್ಸ್ ಪ್ರಕಟವಾದ ನಂತರ ಅಲ್ಲೋಲ ಕಲ್ಲೋಲ ಏರ್ಪಟ್ಟಿದೆ. ಬೇರೆ ಬೇರೆ ದೇಶ ಮಾತ್ರವಲ್ಲ ಖುದ್ದು ಅಮೆರಿಕದಲ್ಲೇ ದೊಡ್ಡ ಬಿರುಗಾಳಿ ಎದ್ದಿದ್ದು, ಒಂದೇ ದಿನ ಬರೋಬ್ಬರಿ 2 ಟ್ರಿಲಿಯನ್ ಡಾಲರ್ ಹಣ ಕರಗಿ ನೀರಾಗಿ ಹೋಗಿದೆ!

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದು ಸಮಸ್ಯೆ ಮಾಡಿಕೊಂಡು ಅಮೆರಿಕದ ಆರ್ಥಿಕತೆಯನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಅಲ್ಲದೆ ಹಲವು ದೇಶಗಳ ವಿರೋಧ ಕಟ್ಟಿಕೊಂಡು ಬದುಕುವುದೇ ಅಮೆರಿಕಗೆ ಕಷ್ಟವಾಗುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಮತ್ತೆ ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್.

Trump Tariffs Cause Significant Decline in Wall Street Indexes

ಟ್ರಂಪ್ ಬಾಣಕ್ಕೆ ಷೇರು ಮಾರುಕಟ್ಟೆ ಉಡೀಸ್!

ಅಮೆರಿಕ ಅಧ್ಯಕ್ಷ ಟ್ರಂಪ್ ನಿನ್ನೆಯಷ್ಟೇ ಹೊಸ ತೆರಿಗೆ ನೀತಿ ಪ್ರಕಟಿಸಿದ್ದರು, ಹೀಗೆ ಟ್ರಂಪ್‌ರ ಹೊಸ ತೆರಿಗೆ ನೀತಿಯಿಂದ ರೊಚ್ಚಿಗೆದ್ದಿರುವ ಹೂಡಿಕೆದಾರರು ಇದೀಗ ತಮ್ಮ ಹಣ ವಾಪಸ್ ಪಡೆಯುತ್ತಿದ್ದಾರೆ. ಅಂದರೆ ಷೇರು ಮಾರುಕಟ್ಟೆಯಲ್ಲಿ ಇದೀಗ ಮಾರಾಟ ಒತ್ತಡ ಹೆಚ್ಚಾಗಿ, ಇಡೀ ಅಮೆರಿಕದ ಷೇರುಪೇಟೆ ಉಲ್ಟಾ ಮಲಗಿಬಿಟ್ಟಿದೆ. ಇಂದು ಒಂದೇ ದಿನ ಲಕ್ಷಾಂತರ ಕೋಟಿ ರೂಪಾಯಿ ಹಣ ಕರಗಿ ಹೋಗಿದ್ದು, ಅಮೆರಿಕದ ವಾಲ್‌ಸ್ಟ್ರೀಟ್ ಅಕ್ಷರಶಃ ರಕ್ತಪಾತಕ್ಕೆ ಸಾಕ್ಷಿ ಕೂಡ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+