Ukraine War: ಸಮಾಧಾನ... ಸಮಾಧಾನ... ಕ್ರಿಮಿಯಾ ಬಗ್ಗೆ ಟ್ರಂಪ್ ಹೇಳಿದ್ದು ಏನು?
ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ರೀತಿ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇಷ್ಟಾದರೂ ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ರಷ್ಯಾ ಯಾವುದೇ ಖಡಕ್ ನಿರ್ಧಾರ ಕೈಗೊಂಡಿಲ್ಲ. ಮತ್ತೊಂದ ಕಡೆ ಉಕ್ರೇನ್ ಗೋಳು ಕೂಡ ಅದೇ ಆಗಿದೆ, ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಿರುವಾಗ ದಿಢೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಯುದ್ಧ ನಿಲ್ಲುತ್ತೆ.. ಯುದ್ಧ ನಿಲ್ಲುತ್ತೆ.. ಅಂತಾ ಇಡೀ ಜಗತ್ತು ಕಾಯುತ್ತಿರುವ ಸಮಯಕ್ಕೇ ರಷ್ಯಾ & ಉಕ್ರೇನ್ ವಾರ್ ಇನ್ನಷ್ಟು ಜೋರಾಗಿದೆ. ರಷ್ಯಾ & ಉಕ್ರೇನ್ ಯುದ್ಧ ಕಂಡು ಈಗಾಗಲೇ ದೊಡ್ಡ ದೊಡ್ಡ ದೇಶಗಳೇ ಸುಸ್ತಾಗಿ ಹೋಗಿವೆ. ಪರಿಸ್ಥಿತಿ ಹಿಂಗೇ ಹೋದರೆ ಮುಂದೆ ಏನು ಸ್ಥಿತಿ? ಅನ್ನೋ ಚಿಂತೆ ಕೂಡ ಶುರುವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಪರ ಮಾತನಾಡುವ ಮೂಲಕ, ಉಕ್ರೇನ್ ಎದುರು ಶಾಂತಿ ಮಂತ್ರ ಜಪಿಸಿದ್ದಾರೆ. ಹೀಗೆ ಟ್ರಂಪ್ ನೀಡಿರುವ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ತಲ್ಲಣ ಎಬ್ಬಿಸಿದೆ.

ಟ್ರಂಪ್ ಎದುರು ಉಕ್ರೇನ್ ನಾಶ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು ಕೇಳದೆ ಅರ್ಧ ಹಾಳಾಗಿ ಹೋಗಿರುವ ಇದೇ ಉಕ್ರೇನ್‌ಗೆ ಮತ್ತೊಂದು ಚಿಂತೆ ಶುರುವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ, ರಷ್ಯಾ ಪರವಾಗಿ ಹೇಳಿಕೆ ನೀಡಿದ್ದಾರೆ. ಕ್ರಿಮಿಯಾ ವಿಚಾರವಾಗಿ ಅಮೆರಿಕ ನಮ್ಮ ಪರವಾಗಿ ನಿಲ್ಲುತ್ತದೆ ಎಂಬ ಉಕ್ರೇನ್ ಭರವಸೆ ಇದೀಗ ಹುಸಿಯಾಗಿ ಹೋಗಿದೆ. ಈ ಮೂಲಕ ಹೊಸ ಸಂಕಷ್ಟದ ಸುಳಿಗೆ ಸಿಲುಕಿ ಉಕ್ರೇನ್ ವಿಲವಿಲ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿಬಿಟ್ಟಿದೆ. ಇನ್ನೊಂದು ಕಡೆ ಯುದ್ಧ ನಿಲ್ಲುವ ನಂಬಿಕೆ ಕೂಡ ಕನಸಿನ ಮಾತಾಗುತ್ತಿದೆ...












Click it and Unblock the Notifications